ರಾಯಚೂರು ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಐದು ಪುಟ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅಲ್ಲದೆ, ಡೆತ್ ನೋಟ್ ಕೊನೆಯಲ್ಲಿ ಶವ ನೋಡಲು ಬರಲು ಸೂಚನೆಯನ್ನೂ ನೀಡಿದ್ದಾಳೆ. ತನ್ನ ಶವ ನೋಡಲು ಫ್ರೆಂಡ್ಸ್ ಬರಲಿಲ್ಲ ಅಂದ್ರೆ ದೆವ್ವವಾಗಿ ಕಾಡುತ್ತೇನೆ ಎಂದು ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.