ಹಾಸನ ಜಿಲ್ಲೆ ಆಲೂರು ತಾಲೂಕಿನ ಕೆ.ಹೊಸಕೋಟೆ ಸಮೀಪದ ಪಾರ್ವತಮ್ಮನ ಬೆಟ್ಟದಲ್ಲಿ ನಿಧಿಗಾಗಿ ಶೋಧ
ನಿಧಿ ಆಸೆಗಾಗಿ ದೇವಾಲಯದ ಗರ್ಭಗುಡಿಯನ್ನೇ ಅಗೆದಿದ್ದ ದುಷ್ಟರು
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ದೇವಾಲಯದ ಆಡಳಿತ ಮಂಡಳಿ
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಪೊಲೀಸರ ಬಲೆಗೆ ಬಿದ್ದ ಖದೀಮರು
ಹಾಸನ ಸಹಕಾರಿ ಸಂಘಗಳ ಉಪ ನಿಬಂಧಕ, ಅರ್ಚಕ, ಜ್ಯೋತಿಷಿಯಿಂದ ಕೃತ್ಯ
ಸಹಕಾರಿ ಸಂಘಗಳ ಉಪ ನಿಬಂಧಕ ನಾರಾಯಣ್, ಅರ್ಚಕ ತಿಪ್ಪೆಸ್ವಾಮಿ, ಜ್ಯೋತಿಷಿ ಮಂಜುನಾಥ್ ಬಂಧನ
ಕೃತ್ಯದಲ್ಲಿ ಭಾಗಿಯಾದ ಚನ್ನರಾಯಪಟ್ಟಣ ಮೂಲದ ಜಯರಾಮ್, ಚೇತನ್, ಮಂಜುನಾಥ್, ಹಾಸನ ಮೂಲದ ಕುಮಾರ್ ಅರೆಸ್ಟ್
ನಾಲ್ಕು ದಿನಗಳ ಹಿಂದೆ ರಾತ್ರೋ ರಾತ್ರಿ ನಿಧಿ ಆಸೆಗಾಗಿ ಬೆಟ್ಟದ ಮೇಲೆ ಶೋಧ ನಡೆಸಿದ್ದ ಖದೀಮರ ತಂಡ
ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ ಪೊಲೀಸರು
ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು