ಸುಶಾಂತ್‌ ಸಿಂಗ್‌ ಸಿಬ್ಬಂದಿ ದಿಪೇಶ್‌ ಅರೆಸ್ಟ್; ಬಾಯ್ಬಿಟ್ಟ ಹೊಸ ಹೆಸರುಗಳು!

First Published | Sep 5, 2020, 9:46 PM IST

ಮುಂಬೈ(ಸೆ. 05) ಸ್ಯಾಂಡಲ್ ವುಡ್ ನಲ್ಲಿನ ಡ್ರಗ್ಸ್ ಘಾಟು ಒಂದು ಹಂತ ತಲುಪಿದ್ದು ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದೆ. ಇದೆಲ್ಲದರ ನಡುವೆ ಅತ್ತ ಬಾಲಿವುಡ್ ನಲ್ಲಿ ರಿಯಾ ಚಕ್ರವರ್ತಿ ಸಹೋದರ ಶೌವಿಕ್  ಚಕ್ರವರ್ತಿಯ ಬಂಧನವೂ ಆಗಿದ್ದು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.

ಎನ್‌ಸಿಬಿ ಶೌವಿಕ್ ಚಕ್ರವರ್ತಿ, ಸ್ಯಾಮುಯಲ್ ಮಿರಂಡಾ ಮತ್ತು ಜೈದ್ ಎಂಬುವರನ್ನುವಶಕ್ಕೆ ಪಡೆದಿದೆ.
ಇದಾದ ನಂತರದ ಬೆಳವಣಿಗೆಯಲ್ಲಿ ನಿಗೂಢ ಸಾವಿಗೆ ಗುರಿಯಾದ ಸುಶಾಂತ್ ಸಿಂಗ್ ರಜಪೂತ್ ಸಿಬ್ಬಂದಿಯಾಗಿದ್ದ ದಿಪೇಶ್ ಸಾವಂತ್ ನನ್ನು ಬಂಧಿಸಿದೆ.
Tap to resize

ಪ್ರಕರಣಕ್ಕೆ ಸಂಬಂಧಿಸಿ ಎನ್ ಸಿಬಿ ನಟಿ ರಿಯಾ ಚಕ್ರವರ್ತಿಗೂ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಡುಗೆ ಕೆಲಸ ಮಾಡಿಕೊಂಡಿದ್ದ ದಿಪೇಶ್ ಸಾವಂತ್ ಅವರನ್ನು ಮಾದಕ ದ್ರವ್ಯ ಸೇವನೆಯ ಆರೋಪದ ಬಗ್ಗೆ ವ್ಯಾಪಕ ತನಿಖೆಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದೆ.
ದಿಪೇಶ್ ಸಾವಂತ್ ನಿಂದ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ.
ಸುಶಾಂತ್ ಸಿಂಗ್ ಸಾವಿನ ತನಿಖೆ ಸಿಬಿಐ ಅಂಗಳದಲ್ಲಿ ಇದ್ದರೆ ಇನ್ನೊಂದು ಕಡೆ ಡ್ರಗ್ಸ್ ವ್ಯವಹಾರವೂ ಸುತ್ತಿಕೊಳ್ಳುತ್ತಿದೆ.
ತನಿಖೆಯ ಹಾದಿ ಸಾಗುತ್ತಿದ್ದು ಒಬ್ಬರಾದ ಮೇಲೆ ಒಬ್ಬರ ಬಂಧನವಾಗುತ್ತಿದೆ.

Latest Videos

click me!