ಪೋರ್ನ್‌ ವಿಡಿಯೋ ತೋರಿಸಿ ಹಾಗೆ ಸೆಕ್ಸ್ ಮಾಡಲು ಪಟ್ಟು ಹಿಡಿದ ಪತಿರಾಯ!

First Published | Sep 3, 2020, 10:36 PM IST

ಮುಂಬೈ(ಸೆ. 03) ತ್ರಿವಳಿ ತಲಾಖ್  ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಮಾನ ನೀಡಿದೆ. ಆದರೆ ಇಲ್ಲೊಬ್ಬ ತನ್ನ ಹೆಂಡತಿಯ ಜತೆ ಅಸ್ವಾಭಾವಿಕ ಸೆಕ್ಸ್ ಮಾಡಿದ್ದಲ್ಲದೇ ತಲಾಖ್ ನೀಡಿದ್ದಾನೆ. ಈ ಬಗ್ಗೆ ಮಹಿಳೆ ಪ್ರಕರಣ ದಾಖಲಿಸಿದ್ದಾಳೆ.

ಮುಂಬೈನ ಅಂಧೇರಿಯಿಂದ ಪ್ರಕರಣ ವರದಿಯಾಗಿದೆ.
ಗಂಡ ನನ್ನ ಜತೆ ಅಸ್ವಾಭಾವಿಕ ಸೆಕ್ಸ್ ಮಾಡಿದ್ದಲ್ಲದೇ ಆಕೆಗೆ ತಲಾಖ್ ನೀಡಿದ್ದಾನೆ ಎಂದು ಮಹಿಳೆ 46 ವರ್ಷದ ಪತಿಯ ವಿರುದ್ಧ ಆರೋಪಿಸಿ ದೂರು ನೀಡಿದ್ದಾಳೆ.
Tap to resize

2018ರಲ್ಲಿ ಇವರ ಮದುವೆಯಾಗಿತ್ತು. ಈಗಾಗಲೇ ಆ ವ್ಯಕ್ತಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದು, ಅವರಿಂದ ವಿಚ್ಛೇದನ ಕೂಡ ಪಡೆದಿದ್ದನು.
ಮದುವೆಯಾದ ನಂತರ ನನಗೆ ಲೈಂಗಿಕ ಕಿರುಕುಳ ಆರಂಭವಾಯಿತು. ಆಗಾಗ ಮೊಬೈಲ್‍ನಲ್ಲಿ ಪೋರ್ನ್ ವಿಡಿಯೋಗಳನ್ನು ನೋಡುವಂತೆ ಬಲವಂತ ಮಾಡುತ್ತಿದ್ದನು. ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಮಾಡುವ ರೀತಿ ತನ್ನೊಂದಿಗೆ ಸೆಕ್ಸ್ ಮಾಡಬೇಕು ಎಂದು ಬೇಡಿಕೆ ಇಡುತ್ತಿದ್ದನು ಎಂದು ಮಹಿಳೆ ಆರೋಪಿಸಿದ್ದಾರೆ.
ಮದುವೆಯಾದ ಕೆಲವು ದಿನಗಳ ನಂತರ ನನಗೆ ಜ್ಯೂಸ್ ಕುಡಿಯಲು ನೀಡುತ್ತಿದ್ದ. ಜ್ಯೂಸ್ ಕುಡಿದ ನಂತರ ನಾನು ಪ್ರಜ್ಞೆ ಕಳೆದುಕೊಳುತ್ತಿದ್ದೆ. ಆಗ ಪತಿ ಅಸ್ವಾಭಾವಿಕವಾಗಿ ನನ್ನೊಂದಿಗೆ ಸೆಕ್ಸ್ ಮಾಡುತ್ತಿದ್ದ ಎಂದು ಮಹಿಳೆ ಹೇಳಿದ್ದಾಳೆ.
ಮಹಿಳೆ ದೂರಿನ ಆಧಾರದಲ್ಲಿ ಆಕೆ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.

Latest Videos

click me!