ಲವ್ವರ್ ಮೋಸ, ಸೆಲ್ಫಿ ವಿಡಿಯೋ ಮಾಡಿ ಕನ್ನಡ ಕಿರುತೆರೆ ನಟಿ ಆತ್ಮಹತ್ಯೆ

First Published | Jun 1, 2020, 5:25 PM IST

ಬೆಂಗಳೂರು (ಜೂ. 01)  ಪ್ರಿಯಕರನಿಂದ ಮೋಸ ಹೋದ ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‍ನಲ್ಲಿ  ಚಂದನಾ (29) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೇ 28 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯುವಕನ ಮೋಸಕ್ಕೆ ಬಲಿಯಾದ ನಟಿ ಸೆಲ್ಫಿ ವಿಡಿಯೋದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Tap to resize

ಮದುವೆಯಾಗೋದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡ ಪ್ರಿಯಕರ ಬಳಸಿಕೊಂಡಿದ್ದ ಎಂದು ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ.
ಚಂದನಾ ಹಾಗೂ ಆರೋಪಿ ಪ್ರಿಯಕರ ದಿನೇಶ್ 5 ವರ್ಷಗಳಿಂದ ಪ್ರೀತಿಸುತ್ತಿದ್ದರು.
ಯುವತಿಯನ್ನು ಮದುವೆಯಾಗೊದಾಗಿ ನಂಬಿಸಿ 5 ಲಕ್ಷ ರೂ. ಹಣವನ್ನು ಪ್ರಿಯಕರ ಪಡೆದುಕೊಂಡಿದ್ದ.
ಚಂದನಾರನ್ನು ನಂಬಿಸಿ ದೈಹಿಕವಾಗಿ ಬಳಸಿಕೊಂಡ ದಿನೇಶ್.
ಬಳಿಕ ಚಂದನಾಳ ಗರ್ಭಪಾತ ಕೂಡ ಮಾಡಿಸಿದ್ದ ಆರೋಪವೂ ಇದೆ.
ಕೊನೆಗೆ ಮದುವೆಯಾಗಲು ನಿರಾಕರಿಸಿ ಮಾನಸಿಕ ಹಿಂಸೆ.
ಈ ಹಿನ್ನೆಲೆ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
7 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಚಂದನಾ ಖಾಸಗಿ ಕಂಪನಿಯಲ್ಲಿ ಕೆಲಸ ಆರಂಭಿಸಿದ್ರು
ಈ ಮಧ್ಯೆ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಪ್ರಯತ್ನ ಮಾಡಿದ್ದ ಚಂದನಾ ಹಲವು ಜಾಹೀರಾತುಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು.
ಈ ಮಧ್ಯೆ ತಾನು ಕೆಲಸ ಮಾಡುವ ಕಂಪನಿಯ ಉದ್ಯೋಗಿ ದಿನೇಶ್ ಜೊತೆಗೆಸ್ನೇಹಬೆಳೆದು ಅದು ಪ್ರೀತಿಗೆ ತಿರುಗಿತ್ತು.
ಇತ್ತೀಚಿಗೆ ಚಂದನಾ ನಡತೆಯ ಬಗ್ಗೆ ಅನುಮಾನ ಪಟ್ಟಿದ್ದ.
ತಲೆಮರೆಸಿಕೊಂಡಿರುವ ದಿನೇಶ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ

Latest Videos

click me!