ಭಾರತದ ಅತ್ಯಂತ ನಟೋರಿಯಸ್‌ ಗ್ಯಾಂಗ್‌ಸ್ಟರ್‌ಗಳು ಈಗ ಎಲ್ಲಿದ್ದಾರೆ ಗೊತ್ತಾ?

First Published | Oct 23, 2024, 4:11 PM IST

ಭಾರತದ ಅಂಡರ್‌ವರ್ಲ್ಡ್‌ನ ಕುಖ್ಯಾತ ವ್ಯಕ್ತಿಗಳಾದ ಚೋಟಾ ರಾಜನ್, ವರದರಾಜನ್ ಮೂದಲಿಯಾರ್, ವೀರಪ್ಪನ್, ಲಾರೆನ್ಸ್ ಬಿಷ್ಣೋಯಿ, ಕರೀಂ ಲಾಲಾ, ಹಾಜಿ ಮಸ್ತಾನ್, ದಾವೂದ್ ಇಬ್ರಾಹಿಂ, ಅರುಣ್ ಗಾವ್ಳಿ ಮತ್ತು ಅಬು ಸಲೇಮ್ ಅವರ ಕ್ರಿಮಿನಲ್ ಹಿನ್ನೆಲೆ ಮತ್ತು ಪ್ರಸ್ತುತ ಸ್ಥಿತಿಯನ್ನು ಈ ಲೇಖನವು ವಿವರಿಸುತ್ತದೆ.

Chhota Rajan

ತನ್ನನ್ನು ತಾನು ನ್ಯಾಷನಲಿಸ್ಟ್‌ ಗ್ಯಾಂಗ್‌ಸ್ಟರ್‌ ಎಂದು ಹೇಳಿಕೊಂಡವ ಚೋಟಾ ರಾಜನ್‌. ಸುಲಿಗೆ, ಮಾದಕ ವಸ್ತು ಕಳ್ಳಸಾಗಣೆ ಹಾಗೂ ಲೆಕ್ಕವಿಲ್ಲದಷ್ಟು ಕೊಲೆ ಕೇಸ್‌ಗಳು ಈತನ ಮೇಲಿದೆ. ಜೀವಂತವಾಗಿರುವ ಈತ ದೆಹಲಿಯ ತಿಹಾರ್‌ ಜೈಲಿನಲ್ಲಿ ತನ್ನ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾನೆ
 

varadarajan mudaliar

ಸುಲಿಗೆ, ಸ್ಮಗ್ಲಿಂಗ್‌ ಹಾಗೂ ಅಕ್ರಮ ಜೂಜಾಟಗಳ ಕಾರಣದಿಂದ ತಮಿಳು ಜನರ ಮೇಲೆ ಹಿಡಿತ ಸಾಧಿಸಿದ್ದ ವ್ಯಕ್ತಿ ವರದರಾಜನ್‌ ಮೂದಲಿಯಾರ್‌. ತಮಿಳು ಜನರ ಪ್ರದೇಶದಲ್ಲಿ ತನ್ನದೇ ಆದ ನ್ಯಾಯ ವ್ಯವಸ್ಥೆ ರೂಪಿಸಿಕೊಂಡಿದ್ದ ವ್ಯಕ್ತಿ. 1988ರಲ್ಲಿ ಜೈಲಿನಲ್ಲಿಯೇ ಸಾವು ಕಂಡಿದ್ದ
 

Tap to resize

Veerappan

ದಂತಚೋರ ವೀರಪ್ಪನ್‌. ಕನ್ನಡ ಹಾಗೂ ತಮಿಳುನಾಡಿನ ಜನಕ್ಕೆ ಡಾ.ರಾಜ್‌ಕುಮಾರ್‌ ಅಪಹರಣದ ಕಾರಣಕ್ಕಾಗಿಯೂ ಗೊತ್ತಿದ್ದಂತ ವ್ಯಕ್ತಿ. ಆನೆಗಳ ದಂತ ಕಳ್ಳಸಾಗಣೆ, ಶ್ರೀಗಂಧದ ಮರಗಳ ಕಳ್ಳತನ ಹಾಗೂ ಲೆಕ್ಕವಿಲ್ಲದಷ್ಟು ಕೊಲೆಗಳನ್ನು ಮಾಡಿರುವ ಆರೋಪವಿತ್ತು. ದಶಕಗಳ ಕಾಲ ಪೊಲೀಸರಿಂದ ಕಣ್ತಪ್ಪಿಕೊಂಡು ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು 2004ರಲ್ಲಿ ಪೊಲೀಸರು ಎನ್‌ಕೌಂಟರ್‌ ಮಾಡಿ ಕೊಂದು ಹಾಕಿದರು.
 

Lawrence Bishnoi

ಬಾಬಾ ಸಿದ್ದಿಕಿಯ ಕೊಲೆ ಹಾಗೂ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿರುವ ಕೇಸ್‌ನಲ್ಲಿ ವೈಲೆಂಟ್‌ ಆಗಿರುವ ಹೆಸರು ಲಾರೆನ್ಸ್‌ ಬಿಷ್ಣೋಯಿ. ಜೈಲಿನಿಂದಲೇ ದೊಡ್ಡ ಪ್ರಮಾಣದ ಕ್ರಿಮಿನಲ್‌ ನೆಟ್‌ವರ್ಕ್‌ಗಳನ್ನು ಈತ ಹೊಂದಿದ್ದಾರೆ. ಅಂದಾಜು 700ಕ್ಕೂ ಅಧಿಕ ಮಂದಿ ಶಾರ್ಪ್‌ ಶೂಟರ್‌ಗಳು ಇವನ ಬಳಿ ಇದ್ದಾರಂತೆ. ಕಾಂಟ್ರಾಕ್ಟ್‌ ಕಿಲ್ಲಿಂಗ್‌ಗೆ ಫೇಮಸ್‌. ಸಿಧು ಮೂಸೇವಾಲಾ ಹಾಗೂ ಬಾಬಾ ಸಿದ್ದಿಕಿ ಕೊಲೆಯಲ್ಲಿ ಈತನ ಪಾತ್ರವಿದೆ. ಸಾಬರಮತಿ ಸಂಟ್ರಲ್‌ ಜೈಲಿನಲ್ಲಿದ್ದರೂ, ಜಾಗತಿಕವಾಗಿ ಪ್ರಭಾವ ಹೊಂದಿರುವ ಗ್ಯಾಂಗ್‌ಸ್ಟರ್‌.
 

Karim Lala

ಕಾರ್ಮಿಕನಾಗಿ ಆರಂಭದ ಜೀವನವನ್ನು ಬಹಳ ಸರಳವಾಗಿಯೇ ಕಳೆದಿದ್ದ ವ್ಯಕ್ತಿ ಕರೀಂ ಲಾಲಾ. ಅಫ್ಘಾನಿಸ್ತಾನ ಮೂಲದ ಕರೀಂ ಲಾಲಾ ಮುಂಬೈನ ಅಂಡರ್‌ವರ್ಲ್ಡ್‌ ಮಾತ್ರವಲ್ಲ ದೇಶದಲ್ಲೂ ಹಲವು ಕುಕೃತ್ಯಗಳನ್ನು ಎಸಗಿದ್ದಾರೆ. ಸುಲಿಗೆ, ಗ್ಯಾಂಬ್ಲಿಂಗ್‌ ಹಾಗೂ ಕಾಂಟ್ರಾಕ್ಟ್‌ ಕಿಲ್ಲಿಂಗ್‌ನಲ್ಲಿ ಈತನ ಪಾತ್ರವಿತ್ತು. ಮುಂಬೈನಲ್ಲಿ ಈತ ಇದ್ದ ಸಮಯದಲ್ಲಿ ನಡೆದ ಯಾವುದೇ ಕ್ರೈಮ್‌ನಲ್ಲೂ ಕರೀಂ ಲಾಲಾದ ಸಣ್ಣ ಪಾತ್ರವಾದರೂ ಇರ್ತಿತ್ತು. 2022ರಲ್ಲಿ ಸಾವು ಕಂಡಿದ್ದಾನೆ.
 

Haji Mastan

ಬಾಂಬೆಯ ರಾಬಿನ್‌ ಹುಡ್‌ ಅಂತಾನೂ ಇವನನ್ನ ಕರೆಯಲಾಗ್ತಿತ್ತು. ಅದಕ್ಕೆ ಕಾರಣ ಈತನ ಸಾಮಾಜಿಕ ಕಾರ್ಯಗಳು. ಸ್ಮಗ್ಲಿಂಗ್‌, ಕಳ್ಳತನ ಹಾಗೂ ಫಿಲ್ಮ್‌ಗಳಿಗೆ ಫೈನಾನ್ಸ್‌ ಮಾಡುವ ಮೂಲಕ ಸಂಪತ್ತು ಗಳಿಸಿಕೊಂಡಿದ್ದ. ಬಾಲಿವುಡ್‌ನ ಹಲವು ಪಾತ್ರಗಳಿಗೆ ಈತ ಸ್ಪೂರ್ತಿಯಾಗಿದ್ದ. 1994ರಲ್ಲಿ ಸಾವು ಕಂಡಿದ್ದಾನೆ.
 

Dawood Ibrahim

ಇಂಟರ್‌ನ್ಯಾಷನ್‌ ಕ್ರಿಮಿನಲ್‌ ವ್ಯವಹಾರಗಳ ಮಾಸ್ಟರ್‌. 1993ರಲ್ಲಿಮುಂಬೈ ಸರಣಿ ಸ್ಫೋಟದಲ್ಲಿ ಭಾಗಿಯಾಗಿದ್ದ ಡಿ-ಗ್ಯಾಂಗ್‌ನ ಸಂಸ್ಥಾಪಕ ಈತ. ಅದರೊಂದಿಗೆ ಮಾದಕ ವಸ್ತು ಕಳ್ಳಸಾಗಣೆ, ಸುಲಿಗೆಯ ನೆಟ್‌ವರ್ಕ್‌ಗಳನ್ನು ನಿರ್ವಹಿಸುತ್ತಿದ್ದ. ಪ್ರಸ್ತುತ ಈತ ಜೀವಂತವಾಗಿದ್ದಾನೆ ಎನ್ನಲಾಗಿದ್ದು, ಪಾಕಿಸ್ತಾನದಲ್ಲಿ ವಾಸವಾಗಿದ್ದಾನೆ ಎನ್ನುವ ಶಂಕೆ ಇದೆ.

ಇದನ್ನೂ ಓದಿ:  Arundathi Nag: ಇಂದಿನ ಧಾರವಾಹಿಗಳು ದಾರಿ ತಪ್ಪಿದೆ, ಅದೇ ಕಾರಣಕ್ಕೆ ನಾನು ಸೀರಿಯಲ್ಸ್‌ ಮಾಡಲ್ಲ

Arun Gawli

ಒಂದು ಕಾಲದಲ್ಲಿ ನಟೋರಿಯಸ್‌ ಗ್ಯಾಂಗ್‌ಸ್ಟರ್‌ ಆಗಿದ್ದ ಅರುಣ್‌ ಗಾವ್ಳಿ ಬಳಿಕ ರಾಜಕಾರಣಿಯಾಗಿ ಬದಲಾದ. ಆ ಬಳಿಕ ಡ್ಯಾಡಿ ಅನ್ನೋ ಟೈಟಲ್‌ಅನ್ನೂ ಸಂಪಾದಿಸಿದ್ದ. ಸುಲಿಗೆ, ಸಂಘಟಿತ ಅಪರಾಧ ಹಾಗೂ ಹಲವಾರು ಕೊಲೆ ಕೇಸ್‌ಗಳಲ್ಲಿ ಭಾಗಿಯಾಗಿದ್ದ. ಪ್ರಸ್ತುತ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಇದನ್ನೂ ಓದಿ:  ರೆಡ್‌ ಲೆಹಂಗಾ ತೊಟ್ಟು ನಿವೇದಿತಾ ಗೌಡ ಪೋಸ್‌ ಕೊಟ್ರೆ, ಸೊಂಟ ಚೆನ್ನಾಗಿದೆ ಅನ್ನೋದಾ!

abu salem

ತನ್ನ ಬಾಲಿವುಡ್‌ ಸಂಬಂಧಗಳ ಕಾರಣದಿಂದಾಗಿಯೇ ನಟೋರಿಯಸ್‌ ಆಗಿ ಬದಲಾದ ವ್ಯಕ್ತಿ ಅಬು ಸಲೇಮ್‌. ಸುಲಿಗೆ ಹಾಗೂ ಸ್ಮಗ್ಲಿಂಗ್‌ಗೆ ಹೆಸರುವಾಸಿಯಾಗಿದ್ದ. 1993ರ ಮುಂಬೈ ಸರಣಿ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವ್ಯಕ್ತಿ.ಮಹಾರಾಷ್ಟ್ರದ ತಲೋಜಾ ಸೆಂಟ್ರಲ್‌ ಜೈಲಿನಲ್ಲಿ ಹಲವು ಕೇಸ್‌ಗಳ ಶಿಕ್ಷೆ ಎದುರಿಸುತ್ತಿದ್ದಾನೆ.
 

Latest Videos

click me!