ಜಾಂಬೀಯಾ(ಸೆ. 07) ಬೆಡ್ ರೋಂ ಸೇರಿಕೊಂಡಿದ್ದ ಇಲಿ ಓಡಿಸಲು ಗಂಡ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಮಹಿಳೆ ಗಂಡನ ಶಿಶ್ನವನ್ನೇ ಕಚ್ಚಿದ್ದಾಳೆ. ಜಾಂಬೀಯಾದ ಕಿಟ್ವೆಯಲ್ಲಿನ ಗಂಡ ಹೆಂಡತಿಯಿಂದ ಘೋರ ಶಿಕ್ಷೆಗೆ ಗುರಿಯಾಗಿದ್ದಾನೆ. 40 ವರ್ಷದ ಮಹಿಳೆ 52 ವರ್ಷದ ಗಂಡನ ಪುರುಷತ್ವದ ಮೇಲೆ ದಾಳಿ ಮಾಡಿದ್ದಾಳೆ. ಗೆಳೆಯರ ಜೊತೆ ಪಾರ್ಟಿ ಮಾಡಿ ಟೈಟಾಗಿ ಬಂದ ಮಹಿಳೆ ಮುಕುಪಾ ಬೆಡ್ ರೂಂ ನಲ್ಲಿ ಇಲಿ ಓಡಾಡುತ್ತಿರುವುದು ಕಂಡಿದೆ. ನಿದ್ದೆ ಬರದ ಕಾರಣ ಗಂಡ ಅಬ್ರಾಹಿಂ ಮುಸುಂಡಾ ಬಳಿ ಇಲಿಯನ್ನು ಓಡಿಸಿ ಎಂದು ಕೇಳಿಕೊಂಡಿದ್ದಾಳೆ. ಗಂಡ ಸಾಧ್ಯವಿಲ್ಲ ಎಂದಾಗ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ. ಸಿಟ್ಟಿಗೆದ್ದ ಮುಕುಪಾ ಗಂಡನ ಪುರುಷತ್ವಕ್ಕೆ ಬಾಯಿಹಾಕಿ ಕಡಿದಿದ್ದಾಳೆ. ಗಂಭೀರ ಗಾಯಗೊಂಡ ಮುಸುಂಡಾನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರು ಒಂದೇ ಮನೆಯಲ್ಲಿದ್ದರೂ ಪತಿ ಹಾಗೂ ಪತ್ನಿ ಬೇರೆ ಬೇರೆ ರೂಮಿನಲ್ಲಿ ಇರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಣ್ಣೆ ಅಮಲಿನಲ್ಲಿ ಇಬ್ಬರು ಒಂದೇ ಕೋಣೆ ಯಾಕೆ ಸೇರಿಕೊಂಡಿದ್ದರು ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ! ಬೆಡ್ ರೂಂನಿಂದ ಇಲಿ ಓಡಿಸದ ಗಂಡನಿಗೆ ಎಂಥಾ ಶಿಕ್ಷೆ! a 40-year-old woman allegedly bit off her 52-year-old husband’s penis after he refused to drive away a rat from her bedroom