'ಸುರಕ್ಷಾ' ಆ್ಯಪ್‌ಗೆ ಬಂದಿರುವ ದೂರು: ಓಲಾ ಡ್ರೈವರ್ ಅಸಭ್ಯ ವರ್ತನೆಯೇ ಹೆಚ್ಚು

First Published Feb 19, 2020, 4:36 PM IST

ದೌರ್ಜನ್ಯ, ಅತ್ಯಾಚಾರ ಯತ್ನ ಕೃತ್ಯಗಳಂತಹ ಪ್ರಯತ್ನಗಳು ನಡೆದಾಗ ಕೂಡಲೇ ಸ್ಥಳಕ್ಕೆ ಧಾವಿಸಿ, ಸಂತ್ರಸ್ತ ಮಹಿಳೆಯರಿಗೆ ನೆರವಾಗಲು ಹಾಗೂ ಸುರಕ್ಷತಾ ಭಾವನೆ ಮೂಡಿಸಲು ಮಹಿಳಾ ಸುರಕ್ಷಾ ದಳ ಸ್ಥಾಪಿಸಲಾಗಿದೆ. ಇದರೊಂದಿಗೆ 'ಸುರಕ್ಷಾ' ಎನ್ನುವ ಹೊಸ ಆ್ಯಪ್‌ ಆರಂಭಿಸಲಾಗಿದ್ದು, ಈಗಾಗಲೇ ಇದನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಅಲ್ಲದೇ ಸದ್ಯ ಸುರಕ್ಷಾ ಆ್ಯಪ್ ಗೆ ಬಂದಿರುವ ಕಂಪ್ಲೇಂಟ್ಸ್ ಓಲಾ ಡ್ರೈವರ್ ಅಸಭ್ಯ ವರ್ತನೆಯೇ ಹೆಚ್ಚು.
 

ಸುರಕ್ಷಾ ಆ್ಯಪ್ ಡೌನ್ಲೋಡ್ ಮಾಡಿ ತಮ್ಮ ಸುರಕ್ಷತೆ ತಾವು ನೋಡಿಕೊಳ್ಳುತ್ತಿದ್ದಾರೆ ಎಂದು ಧನ್ಯವಾದ ತಿಳಿಸಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮಗದಷ್ಟು ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
undefined
ಮಹಿಳೆಯರ ಸುರಕ್ಷತೆಗೆ ತಂದಿದ್ದ ಸುರಕ್ಷಾ ಆ್ಯಪ್ ಫೆಸಿಲಿಟಿಗೆ ಒಳ್ಳೆಯ ರೆಸ್ಪಾನ್ಸ್
undefined
ಈ ವರೆಗೆ 2 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಆ್ಯಪ್ ಡೌನ್ಲೋಡ್ ಮಾಡಿದ್ದಾರೆ
undefined
ಶೇಕಡಾ.15 ರಷ್ಟು ಮಹಿಳೆಯರು ನಿಜವಾಗಿ ಕರೆ ಮಾಡಿದ್ರೆ ಇನ್ನೂ ಶೇಕಡಾ 30 ಚೆಕ್ ಮಾಡುವ ಸಲುವಾಗಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ ಭಾಸ್ಕರ್ ರಾವ್
undefined
ಈ ಆ್ಯಪ್ ನ ಮಹಿಳೆಯರ ಎಮರ್ಜೆನ್ಸಿಗಾಗಿ ತಂದಿದ್ದು,ಈಗಾಗಲೇ 272 ಹೊಯ್ಸಳ ವಾಹನ ಇದಕ್ಕಂತಲೇ ಕೆಲಸ ಮಾಡುತ್ತಿವೆ.
undefined
ಇನ್ನೂ 100 ವಾಹನಗಳನ್ನ ಹೆಚ್ಚುವರಿಯಾಗಿ ಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
undefined
ಸದ್ಯ ಸುರಕ್ಷಾ ಆ್ಯಪ್ ಗೆ ಬಂದಿರುವ ಕಂಪ್ಲೇಂಟ್ಸ್ ಓಲಾ ಡ್ರೈವರ್ ಅಸಭ್ಯ ವರ್ತನೆಯೇ ಹೆಚ್ಚು
undefined
click me!