ತಾಯಿ ಕಣ್ಣೆದುರೇ 18 ವರ್ಷದ ಮಗಳ ಅಪಹರಣ, ಪತ್ತೆಯಾದಾಗ ಬಯಲಾಯ್ತು ಗುಟ್ಟು!
First Published | Jun 13, 2020, 5:38 PM ISTಹರ್ಯಾಣದಲ್ಲಿ ಶುಕ್ರವಾರ ಬೆಳಗ್ಗೆ 18 ವರ್ಷದ ಯುವತಿಯ ಅಪಹರಣ ಪ್ರಕರಣ ಸಂಬಂಧ ಶಾಕಿಂಗ್ ಸತ್ಯ ತೆರೆದುಕೊಂಡಿದೆ. ಸುಮಾರು 3 ಗಂಟೆಯ ತನಿಖೆ ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದಾಗ, ಕಿಡ್ನ್ಯಾಪ್ ಮಾಡಿದ ಯುವಕ ಹಾಗೂ ಅಪಹರಣಕ್ಕೊಳಗಾದ ಯುವತಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆಂಬ ವಿಚಾರ ಬಯಲಾಗಿದೆ. ಅಂದರೆ ಯುವತಿ ಹಾಗೂ ಆಕೆಯ ಪ್ರೇಮಿಯೇ ಈ ಅಪಹರಣದ ಡ್ರಾಮಾ ರಚಿಸಿದ್ದರು. ಯುವತಿಯ ಪ್ರೇಮಿ ಹಾಗೂ ಆತನ ಸ್ನೇಹಿತರು ಆಕೆಯ ತಾಯಿ ಕಣ್ಣೆದುರೇ ಕಿಡ್ನಾಪ್ ಮಾಡಿದ್ದರು. ಈ ಘಟನೆಯ ಸಿಸಿಟಿವಿ ಲಭ್ಯವಾದಾಗ ಆತಂಕ ಮನೆ ಮಾಡಿತ್ತು. ಅಲ್ಲದೇ ಪೊಲೀಸರ ವೈಫಲ್ಯದ ಬಗ್ಗೆಯೂ ಸವಾಲೆದ್ದಿತ್ತು. ಯುವತಿ ತನ್ನ ತಾಯಿ ಹಾಗೂ ಗೆಳತಿಯೊಂದಿಗೆ ಟೈಲರ್ ಅಂಗಡಿಗೆ ತೆರಳಿದ್ದಾಗ ಈ ಘಟನೆ ನಡೆದಿತ್ತು. ತಾಯಿ ಈ ವೇಳೆ ಮಗಳನ್ನು ಕಾಪಾಡಲು ಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.