ಬೆಂಗಳೂರು(ಜೂ.11 ಜೊತೆ ಜೊತೆಯಲಿ ಸೀರಿಯಲ್ ನಟನಿಗೆ ಮನೆ ಮಾಲೀಕ ಕಿರಿಕ್ ಮಾಡಿದ್ದಾನೆ. ಮೂರು ತಿಂಗಳ ಬಾಡಿಗೆ ಬಾಕಿ ಇದ್ದದ್ದಕ್ಕೆ ಮಾಲೀಕ ಗಲಾಟೆ ಮಾಡಿದ್ದು ಮನೆಯಿಂದ ಹೊರಹಾಕಲು ಯತ್ನಿಸಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ನೆಲಮಂಗಲ ಟೌನ್ ನಲ್ಲಿ ವಾಸವಿದ್ದ ನಟ ಪ್ರಶಾಂತ್ ವಾಸವಿದ್ದರು. ಬಾಡಿಗೆ ವಿಚಾರಕ್ಕೆ ಸಂಬಂಧಿಸಿ ಮನೆ ಮಾಲೀಕ ಮಂಜುನಾಥ್ ಕಿರಿಕ್ ತೆಗೆದಿದ್ದಾರೆ. ಸೂಪರ್ ಹಿಟ್ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಪ್ರಶಾಂತ್ ಪಾತ್ರ ಮಾಡುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಶೂಟಿಂಗ್ ನಿಂತಿದ್ದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ. ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿಕೊಂಡರೂ ಮಾಲೀಕನ ಕಿರಿಕ್ ಮಾಡಿದ್ದಾನೆ. ತಕ್ಷಣ ಬಾಡಿಗೆ ನೀಡಿ ಇಲ್ಲಾ ಮನೆ ಖಾಲಿ ಮಾಡಿ ಎಂದು ಅವಾಜ್ ಹಾಕಿದ್ದಾನೆ. Landlord troubles Kannada Serial Jothe Jotheyali Actor for rent Bengaluru Nelamangala ಲಾಕ್ ಡೌನ್ ಕಾರಣದಿಂದ ನಟ ಪ್ರಶಾಂತ್ ಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ.