ಸೋನು ಗೌಡ ಬಂಧನ: ಪಾಸಿಟಿವೋ ಅಥವಾ ನೆಗೆಟಿವೋ ಒಟ್ನಲ್ಲಿ ಪ್ರಚಾರದಲ್ಲಿದ್ದೀನಿ ಎಂದ ನಟಿ

First Published | Mar 22, 2024, 12:44 PM IST

ವಿಚಾರಣೆ ವೇಳೆ ಪೊಲೀಸರು ಟಿವಿಯಲ್ಲಿ ನೀನೆ ಬರ್ತಿದ್ದೀಯಾ ಅಂದಿದಕ್ಕೆ, ಪಾಸಿಟಿವ್ ಆಗಲಿ ನೆಗೆಟಿವ್ ಆಗಲಿ ಪ್ರಚಾರದಲ್ಲಿದ್ದೀನಿ ಎಂದು ಸೋನು ಗೌಡ ಹೇಳಿದ್ದಾಳೆ. ಜೊತೆಗೆ  ನಾನು ಮಗುವನ್ನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದೇನೆ ಎಂದಿದ್ದಾರೆ.

'ಬಿಗ್ ಬಾಸ್‌' ಒಟಿಟಿ ಕನ್ನಡ ಸೀಸನ್ 1 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪ ಮೇಲೆ ಬ್ಯಾಡರಹಳ್ಳಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ವಿರುದ್ಧ ಎಫ್‌ಐಆರ್ ದಾಖಲು ಮಾಡಿ, ವಿಚಾರಣೆ ತೀವ್ರಗೊಳಿಸಿದ್ದಾರೆ. 

ಮಗುವನ್ನು ದತ್ತು ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರ ಮುಂದೆ ಸೋನು ಶ್ರೀನಿವಾಸ್ ಗೌಡ ಎಳೆ ಎಳೆಯಾಗಿ ಮಾಹಿತಿಯನ್ನು ಬಿಚ್ಚಿಡುತ್ತಿದ್ದಾರೆ. ಮಗುವನ್ನ ದತ್ತು ಪಡೆದು 41 ದಿನಗಳಾಗಿದೆ. ಅಪಾರ್ಟ್ಮೆಂಟ್ ಪಕ್ಕದಲ್ಲೆ ಕುಟುಂಬವು ಕೂಲಿ ಕೆಲಸ ಮಾಡುತ್ತಿದ್ದರು. 

Latest Videos


ಮಗುವಿನ ಕುಟುಂಬಕ್ಕೆ ನಾಲ್ಕು ಜನ ಮಕ್ಕಳಿದ್ವು. ಮೊದಲನೆಯದು ಗಂಡು ಹಾಗೂ ಇನ್ನುಳಿದ ಮೂರು ಮಕ್ಕಳು ಹೆಣ್ಣು ಮಕ್ಕಳು. ಅದರಲ್ಲಿ ಎರಡನೇ ಮಗುವನ್ನ ಸೋನು ದತ್ತು ಪಡೆದಿದ್ದರು. ಸೋನು ಶ್ರೀನಿವಾಸ್ ಗೌಡಳಿಗೆ ಒಂದು ವರ್ಷದ ಹಿಂದೆ ಮಗು ಪರಿಚಯವಾಗಿತ್ತು. 

ಮನೆ ಪಕ್ಕದಲ್ಲಿ ಕೂಲಿ ಕಾರ್ಮಿಕರಾಗಿ ಬಂದಿದ್ದು, ಈ ವೇಳೆ ಮಗು ಸೋನು ಬಳಿ ತಿನ್ನಲು ತಿಂಡಿ ಕೇಳುತ್ತಿತ್ತು. ಅದು ದಿನನಿತ್ಯ ಮಗುವಿಗೆ ಏನಾದರೂ ಸಲುಗೆ ಬೆಳೆದಿತ್ತು. ಮಗುವಿಗೆ ಏನಾದರೂ ಸಹಾಯ ಮಾಡಬೇಕು ಅನ್ನಿಸಿತ್ತು. ಕೆಲ ತಿಂಗಳುಗಳ ಹಿಂದೆ ದಂಪತಿಗಳು ಮಕ್ಕಳನ್ನ ಕರೆದು ಹುಟ್ಟೂರಿಗೆ ತೆರಳಿದ್ರು. 

ಆಗ ನಾನು ಒಂಟಿ ಇರೋದ್ರಿಂದ ಮಗುವನ್ನ ಕರೆತರೋಣ ಅಂತ ಅವರನ್ನ ಫೋನ್ ಮೂಲಕ ಸಂಪರ್ಕ ಮಾಡಿದ್ದೆ. ನಂತರ ಮಗುವನ್ನ ಯಾವುದೇ ದಾಖಲೆ ಇಲ್ಲದೆ ಕರೆ ತಂದಿದ್ದೇನೆ ಎಂದು ಸೋನು ಪೊಲೀಸರ ಮಂದೆ ಹೇಳಿದ್ದಾಳೆ. 

ವಿಚಾರಣೆ ವೇಳೆ ಪೊಲೀಸರು ಟಿವಿಯಲ್ಲಿ ನೀನೆ ಬರ್ತಿದ್ದೀಯಾ ಅಂದಿದಕ್ಕೆ, ಪಾಸಿಟಿವ್ ಆಗಲಿ ನೆಗೆಟಿವ್ ಆಗಲಿ ಪ್ರಚಾರದಲ್ಲಿದ್ದೀನಿ ಎಂದು ಸೋನು ಗೌಡ ಹೇಳಿದ್ದಾಳೆ. ಜೊತೆಗೆ  ನಾನು ಮಗುವನ್ನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದೇನೆ ಎಂದಿದ್ದಾಳೆ.

ಸೋನು ಶ್ರೀನಿವಾಸ್ ಗೌಡ ಮಾಡಿದ ತಪ್ಪೇನು?: ಸೇವಂತಿ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದೇನೆ ಎಂದು ಸಾಮಾಜಿಕ ಜಾತಾಣದಲ್ಲಿ ಈಚೆಗೆ ಸೋನು ಶ್ರೀನಿವಾಸ್ ಗೌಡ ಹೇಳಿಕೊಂಡಿದ್ದರು. ಆದರೆ ಈ ದತ್ತು ಪ್ರಕ್ರಿಯೆ ಕಾನೂನುಬಾಹಿರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಎಂಬುವವರು ಜೆಜೆ ಆ್ಯಕ್ಟ್ ಅಡಿಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಅಂದಹಾಗೆ ಸೋನು ಶ್ರೀನಿವಾಸ್‌ ಗೌಡ ಬಾಲಕಿಯನ್ನು ದತ್ತು ಪಡೆದುಕೊಂಡ ವಿಚಾರ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಅನುಕಂಪ ಗಿಟ್ಟಿಸಲು ದತ್ತು ಪಡೆದಿದ್ದಾಳೆ ತನ್ನ ವಿರುದ್ಧ ಜನರಿಗೆ ಇರುವ ಕೆಟ್ಟ ಅಭಿಪ್ರಾಯವನ್ನು ತೊಡೆದುಹಾಕಲು ದತ್ತು ಪಡೆದಿರುವ ನಾಟಕ ಆಡುತ್ತಿದ್ದಾಳೆ ಎಂದು ನೆಟ್ಟಿಗರು ಸೋನು ಶ್ರೀನಿವಾಸ ಗೌಡಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

ನೆಟ್ಟಿಗರು ಏನೇ ಅಂದರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸೋನು ಶ್ರೀನಿವಾಸ ಗೌಡ, 7 ರಿಂದ 8 ವರ್ಷದ ಪುಟ್ಟ ಬಾಲಕಿಯನ್ನು ತನ್ನ ಜತೆಯಲ್ಲೇ ಇರಿಸಿಕೊಂಡಿದ್ದಳು. ಬಾಲಕಿಯೊಂದಿಗೆ ಶಾಪಿಂಗ್ ಹಾಗೂ ರೀಲ್ಸ್ ಮಾಡುವ ವಿಡಿಯೋ ಪೋಸ್ಟ್ ಮಾಡುತ್ತಿದ್ದಳು. 

ಆಕೆಗೆ ಆಕೈರೆ ಮಾಡುವ ವಿಡಿಯೋ ಸಹ ಹಂಚಿಕೊಳ್ಳುತ್ತಿದ್ದಳು. ಇದರಿಂದ ಕೆಲವರ ಅಭಿಪ್ರಾಯವೂ ಸಹ ಬದಲಾಗಿತ್ತು. ಕಳೆದ ಮೂರು ತಿಂಗಳಿಂದ ನನಗೆ ಪಾಸಿಟಿವ್ ಕಾಮೆಂಟ್‌ಗಳು ಹೆಚ್ಚಾಗಿ ಬರುತ್ತಿವೆ. ಬಹುಶಃ ಈಕೆಯನ್ನು ದತ್ತು ಪಡೆದುಕೊಂಡಿದ್ದಕ್ಕೆ ಇರಬಹುದು ಎಂದು ಸೋನು ಶ್ರೀನಿವಾಸ್‌ ಗೌಡ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಳು.

click me!