ಮತ್ತೊಂದು ಸಂಕಷ್ಟದಲ್ಲಿ ಡ್ರೋನ್ ಪ್ರತಾಪ್; ಸುಳ್ಳು ಮಾಹಿತಿ ನೀಡಿ ರೈತರಿಗೆ ಲಕ್ಷಾಂತರ ವಂಚನೆ ದೂರು ದಾಖಲು!

First Published Jan 28, 2024, 8:38 PM IST

ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ರಿಯಾಲಿಟಿ ಶೋ ಆಗಿರುವ ‘ಬಿಗ್‌ ಬಾಸ್‌’ ಕನ್ನಡ' ಹತ್ತನೇ ಸೀಸನ್‌ ನ ಸ್ಪರ್ಧಿಯಾಗಿರುವ ಡ್ರೋಣ್ ಪ್ರತಾಪ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಂಪನಿಗಳ ಹೆಸರಲ್ಲಿ ರೈತರಿಗೆ ಸುಳ್ಳು ಮಾಹಿತಿ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್

ಸುಳ್ಳು ಮಾಹಿತಿಯನ್ನ ನೀಡಿ ರೈತರಿಂದ ಲಕ್ಷಾಂತರ ರೂ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದ ಹಿನ್ನೆಲೆ ಕನ್ನಡ ಬಿಗ್‌ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ವಿರುದ್ಧ ದೂರು ದಾಖಲಾಗಿದೆ.

ಡ್ರೋನ್ ಪ್ರತಾಪ್ ಮತ್ತವರ ಸ್ನೇಹಿತರು ಡ್ರೋಣಾರ್ಕ್ ಏರೋಸ್ಪೇಸ್ ಪ್ರೈ.ಲಿ ಮತ್ತು ಕ್ಯಾಸ್ಟರ್ ಡ್ರೋಣಾಟಿಕ್ಸ್ ಪ್ರೈ.ಲಿ ಕಂಪನಿಗಳನ್ನ  ತೆರೆದು ರೈತರಿಗೆ ಸುಳ್ಳು ಮಾಹಿತಿ ನೀಡಿ ವಂಚಿಸಿದ್ದಾರೆಂದು ಆರೋಪಿಸಿರುವ ದೂರುದಾರ. ಮೇಲಿಂದ ಮೇಲೆ ವಂಚನೆಗಳು ಆರೋಪಗಳು ಬರುತ್ತಿರುವ ಹಿನ್ನೆಲೆ ಡ್ರೋಣ್ ಪ್ರತಾಪ್ ಮತ್ತೊಂದು ಸಂಕಷ್ಟ ಎದುರಾಗಿದೆ.

ಡ್ರೋನ್ ಪ್ರತಾಪ್ ವಿರುದ್ಧ ರಾಜರಾಜೇಶ್ವರಿನಗರ ಠಾಣೆಗೆ ಡಾ. ಪ್ರಯಾಗ್ ಎಂಬುವವರು ದೂರು ನೀಡಿದ್ದಾರೆ. ಡ್ರೋಣ್ ಪ್ರತಾಪ್, ಸಿರಣ್ ಮಾದವ್, ಸಾರಂಗ ಸೀಮಂತ್ ಮಾನೆ ಮತ್ತು ಸಾಗರ್ ಗಾರ್ಗ್ ಎಂಬುವವರ ವಿರುದ್ಧವೂ ದೂರು. ಈ ಮೂವರು ಡ್ರೋಣ್ ಕಂಪನಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ.

Drone pratap

ರೈತರ ಮುಗ್ಧತೆ ದುರುಪಯೋಗಪಡಿಸಿಕೊಂಡು ವಂಚಿಸಿರುವ ಡ್ರೋಣ್ ಪ್ರತಾಪ್, ಸಹಚರರು ಇವರ ವಿರುದ್ಧ ಸೂಕ್ತ ಆಗಬೇಕೆಂದು ಡಾ.ಪ್ರಯಾಗ್ ಆಗ್ರಹಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಆರ್‌ಆರ್ ನಗರ ಪೊಲೀಸರು, ಕ್ರಮಕ್ಕೆ ಮುಂದಾಗಿದ್ದಾರೆ.

click me!