ಬೆಂಗಳೂರು ಹೆಸರಿಗೆ ಮಾತ್ರ ಲಕ್ಸುರಿ ಥೈ ಸ್ಪಾ.. ಮಾಡೋದೆಲ್ಲಾ ಹೈಟೆಕ್ ವೇಶ್ಯಾವಾಟಿಕೆ ದಂಧೆ

First Published | Feb 25, 2024, 11:00 AM IST

ಬೆಂಗಳೂರು (ಫೆ.25): ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ ನೋಡಲು ಹೆಸರಿಗೆ ಮಾತರ ರೋರಾ ಲಕ್ಸುರಿ ಥೈ ಸ್ಪಾ.. ಎಂದು ಇಟ್ಟುಕೊಳ್ಳಲಾಗಿದೆ. ಒಳಗಡೆ ನಡೆಯುತ್ತಿರುವುದು ಮಾತ್ರ ಹೈಟೆಕ್‌ ವೇಶ್ಯಾವಾಟಿಕೆ ದಂಧೆಯಾಗಿದೆ. ಇಲ್ಲಿನ ಹೈಟೆಕ್‌ ಸೌಲಭ್ಯ ನೋಡಿ ಪೊಲೀಸರೇ ದಂಗಾಗಿದ್ದಾರೆ.

ಬೆಂಗಳೂರಿನಲ್ಲೊಂದು ಲಕ್ಸುರಿ ಥಾಯ್ ಸ್ಪಾ ಇದೆ ಯಾರಾದರೂ ನೋಡಿದ್ದೀರಾ.? ನೋಡರಲು ಸಾಧ್ಯವೇ ಇಲ್ಲ ಬಿಡಿ. ಯಾಕೆಂದರೆ ಇಲ್ಲಿ ಹೋಗೋಕೆ ನೋಟಿಕ ಕಂತೆಯನ್ನೇ ಕೊಡಬೇಕೇನೋ..

ಇದು ಹೆಸರಿಗೆ ಮಾತ್ರ ಲಕ್ಸುರಿ ಸ್ಪಾ... ಆದ್ರೆ ಇಲ್ಲಿ ಮಾಡೋದೆಲ್ಲ ಹೈಟೆಕ್ ವೇಶ್ಯಾವಾಟಿಕೆ ದಂಧೆಯಾಗಿದೆ. ಇಲ್ಲಿ ಬಂದ ಗ್ರಾಹಕರಿಗೆಲ್ಲಾ ದೇಹಕ್ಕೆ ರಿಲ್ಯಾಕ್ಸ್‌ ನೀಡುವುದರ ಜೊತೆಗೆ ಬೇರೆಯದೇ ಲೋಕವನ್ನು ತೋರಿಸುತ್ತಿದ್ದರು ಎಂದು ಕೇಳಿಬಂದಿದೆ.

Tap to resize

ರೋರಾ ಲಕ್ಸುರಿ ಥಾಯ್ ಸ್ಪಾ ಎಂಬ ಹೆಸರಿನ ಸ್ಪಾದಲ್ಲಿ ವೇಶ್ಯಾವಾಟಿಕೆ ದಂಧೆಯ ಕುರಿತು ಮಾಹಿತಿ ತಿಳಿದ ಈಶಾನ್ಯ ವಿಭಾಗದ ಡಿಸಿಪಿ ಅವರ ಸೂಚನೆ ಮೇರೆಗೆ ಯಲಹಂಕ ನ್ಯೂಟೌನ್ ಪೊಲೀಸರಿಂದ ದಾಳಿ ಮಾಡಲಾಗಿದೆ. 
 

ಇಲ್ಲಿನ ವ್ಯವಸ್ಥೆಯನ್ನು ನೋಡಿ ಪೊಲೀಸರೇ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಇಲ್ಲಿ ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಕಂಡಿಬಂದಿದೆ.
 

ಸ್ಪಾದಲ್ಲಿ ಥೈಲ್ಯಾಂಡ್‌ ದೇಶದ ಮಹಿಳೆಯರನ್ನ ಕರೆತಂದು ಇಲ್ಲಿ ವೇಶ್ಯಾವಾಟಿಕೆ ದಂಧೆ ಮಾಡಲಾಗುತ್ತಿತ್ತು. ಇವರನ್ನು ದೇಹಕ್ಕೆ ಮಸಾಜ್ ಮಾಡುವುದಕ್ಕೆ ಮತ್ತು ವೇಶ್ಯಾವಾಟಿಕೆಗೆ ಎರಡಕ್ಕೂ ಬಳಕೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. 
 

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆಂಜನೇಯ, ಆಂಜನೇಯಗೌಡ ಹಾಗೂ ಹರೀಶ್‌ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಜೊತೆಗೆ, 7 ಮಂದಿ ವಿದೇಶಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
 

ಈ ಆರೋಪಿಗಳು ಥೈಲ್ಯಾಂಡ್ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬಿಸಿನೆಸ್ ವೀಸಾ  ಮೂಲಕ ಬೆಂಗಳೂರಿಗೆ ಕರೆತಂದು ಮೊದಲು ಮಸಾಜ್‌ ಪಾರ್ಲರ್‌ಗೆ ಮಾತ್ರ ಬಳಕೆ ಮಾಡುತ್ತಾರೆ. ನಂತರ, ಯುವತಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಬಳಕೆ ಮಾಡುತ್ತಿದ್ದರು. 
 

Latest Videos

click me!