ಸಲಿಂಗಿಯಾಗಿದ್ದ ಮಗ, ತನ್ನ ಜೊತೆ ಸಂಬಂಧ ಬೆಳೆಸಲು ಸೊಸೆಗೆ ಒತ್ತಾಯಿಸಿದ ಮಾಜಿ ಡಿಜಿಪಿ!
First Published | Jun 28, 2020, 6:00 PM ISTಜಾರ್ಖಂಡ್‌ನ ಮಾಜಿ ಡಿಜಿಪಿ ಡಿಕೆ ಪಾಂಡೆ ಸೊಸೆ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಗಂಡ ಓರ್ವ ಸಲಿಂಗಿ, ಹೀಗಾಗಿ ತನ್ನ ಮಾವ ತನ್ನೊಂದಿಗೆ ಸಂಬಂಧ ಬೆಳೆಸಲು ಒತ್ತಡ ಹೇರುತ್ತಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಪಾಂಡೆ ಜಾರ್ಖಂಡ್ ಡಿಜಿಪಿಯಾಗಿದ್ದ ವೇಳೆ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ಕ್ರಮ ಕೈಗೊಂಡಿದ್ದರು. ಅವರು ಮಹಿಳೆಯರ ಮೇಲಿನ ಕಿರುಕುಳ ತಡೆಯುವ ನಿಟ್ಟಿನಲ್ಲಿ ಮಹಿಳಾ ಶಕ್ತಿ ಎಂಬ ಆಪ್ ಕೂಡಾ ಲಾಂಚ್ ಮಾಡಿದ್ದರು. ಆದರೀಗ ಖುದ್ದು ಅವರ ಸೊಸೆ ಮಾಡಿರುವ ಆರೋಪ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಹಾಕಿದೆ. ಅವರ ಸೊಸೆ ರೇಖಾ ಮಿಶ್ರಾ ಶನಿವಾರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೇ ತನ್ನ ಮಾವ ಬೇರೆಯವರೊಂದಿಗೂ ಸಂಬಂಧ ಬೆಳೆಸಲು ಒತ್ತಾಯಿಸುತ್ತಿದ್ದಾರೆಂದು ಅವರು ದೂರಿದ್ದಾರೆ. ಸದ್ಯ ಪೊಲೀಸರು ಡಿಕೆ ಪಾಂಡೆ, ಅವರ ಪತ್ನಿ ಪೂನಂ ಹಾಗೂ ಪತಿ ಶುಭಾಂಕರ್ ವಿರುದ್ಧ ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ರೇಖಾ ಹಾಗೂ ಶುಭಾಂಕರ್ ವಿವಾಹ ನಡೆದಿತ್ತು.