ಮೇಲುಕೋಟೆ ಶಿಕ್ಷಕಿಯನ್ನು ಕೊಲೆಗೈದು ಮಣ್ಣಲ್ಲಿ ಮುಚ್ಚಿ ಹೋದನಾ ಮಂಡ್ಯ ಹೈದ?

First Published Jan 23, 2024, 1:02 PM IST

ಮಂಡ್ಯ (ಜ.23):  ಮೇಲುಕೋಟೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕಿ ಕಾಡಿನ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರನ್ನು ಅದೇ ಗ್ರಾಮದ ಪರಿಚಯಸ್ಥ ಯುವಕನೇ ಬೆಟ್ಟದ ತಪ್ಪಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ ಮಣ್ಣು ಮಾಡಿ ಬಂದಿದ್ದಾನೆ ಎಂದು ಹೇಳಲಾಗುತ್ತಿದೆ.
 

ಐತಿಹಾಸಿಕ ತಾಣ ಮೇಲುಕೋಟೆಯಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕಿ ಅದೇ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಸ್ಕೂಟರ್ ಬಿದ್ದ ಸ್ಥಳದಿಂದ ತುಸು ದೂರದಲ್ಲಿ ಶವವಾಗಿ ಪತ್ತೆ ಆಗಿದ್ದಾಳೆ. ಈ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮೇಲುಕೋಟೆಯಲ್ಲಿ ನಿನ್ನೆ(ಸೋಮವಾರ) ಸಂಜೆ ನಡೆದಿದೆ.

ಮೃತಳನ್ನು ದೀಪಿಕಾ(28) ಎಂದು ಗುರುತಿಸಲಾಗಿದೆ. ಈಕೆ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಮೇಲುಕೋಟೆಯ ಎಸ್‌ಇಟಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. 
 

ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೂ ಅತ್ಯಂತ ಸೌಂದರ್ಯವತಿಯಾಗಿದ್ದ ಈಕೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮಾಡುತ್ತಿದ್ದಳು. ಈಕೆಯ ಸೌಂದರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
 

ಮಹಿಳೆ ತನ್ನ ಗಂಡನೊಂದಿಗೂ ಹಲವು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಜೊತೆಗೆ, ಶಾಲಾ ಮಕ್ಕಳು, ಕರ್ನಾಟಕ ರಾಜ್ಯೋತ್ಸವ ಹಾಗೂ ಸ್ನೇಹಿತರೊಂದಿಗೆ ರೀಲ್ಸ್ ಮಾಡುತ್ತಿದ್ದಳು.

ಆದರೆ, ಶಿಕ್ಷಕಿ ದೀಪಿಕಾ ಜನವರಿ 20ರ ಮಧ್ಯಾಹ್ನನಿಂದ ನಾಪತ್ತೆಯಾಗಿದ್ದಳು. ನಾಪತ್ತೆ ಬಗ್ಗೆ ಜ.20ರ ಸಂಜೆ ಮೇಲುಕೋಟೆ ‌ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದರು.

ನಿನ್ನೆ ಸಂಜೆ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಹದ್ದು, ಕಾಗೆ ಓಡಾಡುತ್ತಿದ್ದು, ಸ್ಥಳೀಯರಿಗೆ ಸುರ್ವಾಸನೆ ಬಂದಿದೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಲ್ಲಿಗೆ ಹೋಗಿ ಪತ್ತೆ ಮಾಡಿದಾಗ ಆಕೆಯ ಸ್ಕೂಟರ್ ಲಭ್ಯವಾಗಿದೆ.

ಗ್ರಾಮಸ್ಥರು ಇದನ್ನು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಮಣ್ಣಿನಡಿ ಹೂತಿರುವ ದೃಶ್ಯ ಕಣ್ಣಿಗೆ ಬಿದ್ದಿದ್ದು, ಅದನ್ನು ತಹಶೀಲ್ದಾರ್ ಸಮ್ಮುಖದಲ್ಲಿ ತೆರೆದು ನೋಡಿದಾಗ ನಾಪತ್ತೆಯಾಗಿದ್ದ ಶಿಕ್ಷಕಿ ಮೃತದೇಹ ಸಿಕ್ಕಿದೆ.
 

ಶಿಕ್ಷಕಿ ದೀಪಿಕಾ ಸಾವಿನ ಸುತ್ತ ಹಲವು ಅನುಮಾನ ಕಂಡುಬಂದಿದ್ದು, ಕೊನೆಯ ಮೊಬೈಲ್‌ ಕರೆಯನ್ನು ಆಕೆಗೆ ಪರಿಚಯಸ್ಥ ಯವಕ ನಿತೀಶ್ (22) ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
 

ಜೊತೆಗೆ, ಶಿಕ್ಷಕಿ ದೀಪಿಕಾ ನಾಪತ್ತೆಯಾದ ದಿನ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಈ ಯುವಕ ನಿತೀಶ್‌ ಜಗಳ ಮಾಡುತ್ತಿದ್ದ 13 ಸೆಕೆಂಡ್‌ಗಳ ವಿಡಿಯೋ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಆತನೇ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
 

ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರು ನೀಡಿದ್ದ ದೂರನ್ನು ಆಧರಿಸಿ ಪೊಲೀಸರು ಆರೋಪಿ ಪತ್ತೆಗೆ 2 ವಿಶೇಷ ತಂಡ ರಚನೆ ಮಾಡಿದ್ದಾರೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದ ಆರೋಪಿ ನಿತೀಶ್ ಪರಾರಿ ಆಗಿದ್ದಾನೆ.
 

click me!