Illegal Resorts Seal : ವರ್ಷಾಚರಣೆಗೂ ಮುನ್ನ ಕಾರ್ಯಾಚರಣೆ,  ಗಂಗಾವತಿ ಅಕ್ರಮ ರೆಸಾರ್ಟ್‌ಗಳಿಗೆ ಬೀಗ

First Published | Dec 29, 2021, 11:46 PM IST

ಗಂಗಾವತಿ(ಡಿ. 29)  ಗಂಗಾವತಿ (Gangavathi) ಮತ್ತು ಹಂಪಿ ವ್ಯಾಪ್ತಿಯ ಅಕ್ರಮ ರೆಸಾರ್ಟ್ (Resort) ತೆರವಿಗೆ 24 ಗಂಟೆ ಗಡುವು ನೀಡಲಾಗಿದೆ ಡಿಸಿ ನೀಡಿದ 48 ಗಂಟೆಗಳ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳ (Koppala) ಎಸಿ ಮತ್ತು ಹಂಪಿ (Hampi) ಪ್ರಾಧಿಕಾರ ಆಯುಕ್ತರು ಅಕ್ರಮ ರೆಸಾರ್ಟ್ ಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

15 ಗ್ರಾಮಗಳಲ್ಲಿರುವ  52 ರೆಸಾರ್ಟಗಳಿಗೆ ಬೀಗ ಮುದ್ರೆ ಹಾಕಲಾಗಿದೆ 24 ಗಂಟೆಯೊಳಗೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿ ಕೊಳ್ಳುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. 
ವರ್ಷಾಚರಣೆಗೂ ಮುನ್ನ ಕಠಿಣ ನಿಯಮ ತಿಳಿದುಕೊಳ್ಳಿ

ರೆಸಾರ್ಟ ಗಳ ವಿದ್ಯುತ್ ಸಂಪರ್ಕವನ್ನು ಜೇಸ್ಕಾಂ ಸಿಬ್ಬಂದಿ ಕಟ್ ಮಾಡಿದ್ದಾರೆ.  ರೆಸಾರ್ಟ ಬೋರ್ಡೂಗಳಿಗೆ ಬಟ್ಟೆ ಹೊದಿಕೆ ಮಾಡಲಾಗಿದ್ದು ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.

Tap to resize

ಹೊಸ ವರ್ಷಚಾರಣೆ ಸಂಭ್ರಮಕ್ಕೆ ಸಜ್ಜಾಗಿದ್ದ ರೆಸಾರ್ಟ ಮಾಲೀಕರಿಗೆ   ಜಿಲ್ಲಾಡಳಿತ ಶಾಕ್ ನೀಡಿದ್ದು ಅಕ್ರಮವಾಗಿ ನಡೆಯುತ್ತಿದ್ದ ಎಲ್ಲ ಕಾರ್ಯ ಚಟುವಟಿಕೆಗೆ ಬ್ರೇಕ್ ಹಾಕಿದೆ.  

ಪಾಸ್ ಕೊಡಲ್ಲ..ಸುಮ್ಮನೆ ಓಡಾಡಿದ್ರೆ ಬಿಡಲ್ಲ

ಹೊಸ ವರ್ಷಾಚರಣೆ ಬಹಿರಂಗ ಸಂಭ್ರಮ ಇಲ್ಲ ಎಂದು ಪೊಲೀಸ್ ಇಲಾಖೆ ಈಗಾಗಲೇ ಖಡಕ್ ಸೂಚನೆ ರವಾನಿಸಿದೆ. ಬೆಂಗಳೂರಿನಲ್ಲಿಯೂ ಭದ್ರತೆ ಆಯೋಜಿಸಲಾಗಿದೆ. 

ಗಂಗಾವತಿ (Gangavathi) ಮತ್ತು ಹಂಪಿ ವ್ಯಾಪ್ತಿಯ  ಅಕ್ರಮ ರೆಸಾರ್ಟ್ (Resort) ತೆರವಿಗೆ 24 ಗಂಟೆ ಗಡುವು ನೀಡಲಾಗಿದೆ ಡಿಸಿ ನೀಡಿದ 48 ಗಂಟೆಗಳ ಆದೇಶದ ಹಿನ್ನೆಲೆಯಲ್ಲಿ ಕೊಪ್ಪಳ (Koppala) ಎಸಿ ಮತ್ತು ಹಂಪಿ (Hampi) ಪ್ರಾಧಿಕಾರ ಆಯುಕ್ತರು ಅಕ್ರಮ ರೆಸಾರ್ಟ್ ಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ರೆಸಾರ್ಟ್ ಗಳಿಗೆ ನೋಟಿಸ್ ನೀಡಲಾಗಿದ್ದು ತಕ್ಷಣ ಎಲ್ಲ ಬುಕಿಂಗ್ ಸೇರಿದಂತೆ ಇನ್ನಿತರ ವ್ಯವಹಾರಗಳನ್ನು ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ತಿಳಿಸಲಾಗಿದೆ.

ಅಧಿಕಾರಿಗಳ ತಂಡ ಎಲ್ಲ ಕಡೆ ತೆರಳಿದ್ದು ಸ್ವಯಂ ಪ್ರೇರಿತವಾಗಿ ತೆರವು ಮಾಡಲು ತಿಳಿಸಿದ್ದಾರೆ. ಇಲ್ಲವಾದರೆ ಕಠಿಣ ಕ್ರಮ ಎದುರಿಸಬೇಕು ಎಂಬ ಎಚ್ಚರಿಕೆ ನೀಡಲಾಗಿದೆ.

Latest Videos

click me!