ತೆಲುಗು ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಆಶು ರೆಡ್ಡಿ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಲಂಡನ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ಗೆ ಮದುವೆಯಾಗುವುದಾಗಿ ನಂಬಿಸಿ ಸುಮಾರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಸಂತ್ರಸ್ತನ ತಂದೆ ದೂರು ನೀಡಿದ್ದಾರೆ. ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ.
ತೆಲುಗು ನಟಿ ಹಾಗೂ ಎರಡು ಬಾರಿ ಬಿಗ್ಬಾಸ್ ಸ್ಪರ್ಧಿಯಾಗಿದ್ದ ಬ್ಯೂಟಿ ಆಶು ರೆಡ್ಡಿ (Ashu Reddy) ಕೆಲ ತಿಂಗಳ ಹಿಂದೆ ಪ್ರೈವೇಟ್ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡು ಸಕತ್ ಸದ್ದು ಮಾಡಿದ್ದರು. ಅದೂ ಯಾರ ಟ್ಯಾಟೂ ಅಂತೀರಾ. ನಟ ಪವನ್ ಕಲ್ಯಾಣ್ ಅವರದ್ದು! ಅವರಿಗೆ ಮದ್ವೆಯಾಗಿದ್ರೂ ಹೀಗೆಲ್ಲಾ ಯಾಕೆ ಮಾಡ್ತಿ ಎಂದು ಕೇಳಿದ್ದ ನಟಿ, ನನ್ನ ದೇವರು ಪವನ್, ಅವರಿಗೋಸ್ಕರ ಏನ್ ಬೇಕಾದ್ರೂ ಮಾಡ್ತೀನಿ ಅಂತ ಹೇಳಿದ್ದರು. ಆದ್ರೆ ಈಗ ಮದ್ವೆ ಹೆಸರಲ್ಲಿ 10 ಕೋಟಿ ವಂಚನೆ ಆರೋಪ ಎದುರಿಸುತ್ತಿದ್ದಾರೆ.
26
ಸಾಫ್ಟ್‌ವೇರ್ ಎಂಜಿನಿಯರ್ಗೆ ದೋಖಾ?
ಲಂಡನ್‌ನಲ್ಲಿ ವಾಸಿಸುವ ಧರ್ಮೇಂದ್ರ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಅವರನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಆಶು ರೆಡ್ಡಿ ಅಪಾರ ಪ್ರಮಾಣದ ನಗದು ಮತ್ತು ಚಿನ್ನವನ್ನು ತೆಗೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಟೆಕ್ಕಿ ತಂದೆ ಸತ್ಯನಾರಾಯಣ ಮೂರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ನಟಿ ಆಶು ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹೈದರಾಬಾದ್ ಸಿಸಿಎಸ್ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.
36
ಮಗನನ್ನು ಹನಿಟ್ರ್ಯಾಪ್
ಆಶು ರೆಡ್ಡಿ ತನ್ನ ಗೆಳೆಯ ಜಯಂತ್ ಜೊತೆ ಈ ನಾಟಕ ಆಡಿ, ವಿವಿಧ ಕಾರಣಗಳನ್ನು ನೀಡಿ ತಮ್ಮ ಮಗನನ್ನು 'ಹನಿಟ್ರ್ಯಾಪ್' ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಕೆ 5 ಕೆಜಿ ಚಿನ್ನ ಮತ್ತು ಫ್ಲಾಟ್ ಕೇಳಿದ್ದು 3 ಕೋಟಿ ರೂ. ಮೌಲ್ಯದ ವಿಲ್ಲಾಕ್ಕಾಗಿ ಮುಂಗಡ ಹಣ ನೀಡಲಾಗಿದೆ. ಆಶು ರೆಡ್ಡಿ ಒಟ್ಟು 9.83 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಮ್ಮ ಜಾತಕವನ್ನು ತೋರಿಸಲಾಗಿದ್ದು, ಎಲ್ಲವೂ ಸರಿಯಾಗಿದೆ ಎಂದು ನಂಬಿಸಿ ಮದುವೆಗೆ ಒಪ್ಪಿಕೊಂಡಿದ್ದಳು ಎಂದಿದ್ದಾರೆ.
ಅಶುರೆಡ್ಡಿಯ ಸಹೋದರಿ ದಿವ್ಯಾ ರೆಡ್ಡಿ ಕೂಡ ಈ ಸಂಬಂಧದಲ್ಲಿ ಪಾಲುದಾರರಾಗಿದ್ದು, ಧರ್ಮೇಂದ್ರ ಕೂಡ ಆಕೆಗೆ 50 ಲಕ್ಷ ರೂ. ನೀಡಿದ್ದಾರೆ. ಹಣವನ್ನು ವಾಪಸ್ ಕೇಳಿದರೆ ತನ್ನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಆಶು ರೆಡ್ಡಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತನ ಕುಟುಂಬ ದುಃಖ ವ್ಯಕ್ತಪಡಿಸುತ್ತಿದೆ.
56
ಪೊಲೀಸರಲ್ಲಿ ದೂರು
ಕೊನೆಗೆ ಈ ಬೆದರಿಕೆಗೆ ಜಗ್ಗದೇ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಧರ್ಮೇಂದ್ರ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ, ಸಿಸಿಎಸ್ ಪೊಲೀಸರು ಆಶು ರೆಡ್ಡಿ ಕುಟುಂಬದ ವಿರುದ್ಧ ಬಿಎನ್ಎಸ್ 318(4) ಆರ್/ಡಬ್ಲ್ಯೂ 3(5) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
66
ಸುಳ್ಳು ಆರೋಪ ಎಂದ ನಟಿ
ವಂಚನೆ ಆರೋಪಗಳಿಗೆ ನಟಿ ಆಶು ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡದಂತೆ ಕೇಳಿಕೊಂಡಿದ್ದಾರೆ. ಮದುವೆಯ ಹೆಸರಿನಲ್ಲಿ ತಾನು 9.83 ಕೋಟಿ ರೂ. ಗಳಿಸಿದ್ದೇನೆ ಎಂಬುದು ಸುಳ್ಳು ಎಂದು ಅವರು ಹೇಳಿದ್ದಾರೆ. ಸುಳ್ಳು ಪ್ರಚಾರ ಹರಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಶು ರೆಡ್ಡಿ ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ