ಗೆಳೆಯನ ಶ್ರೀಮಂತಿಕೆ ಕಂಡು ಆತನ ಸ್ನೇಹಿಯರು ದ್ರೋಹ ಎಸಗಿರುವ ಘಟನೆ ಬೆಂಗಳೂರಿನ ಚಿಕ್ಕಜಾಲದಲ್ಲಿ ನಡೆದಿದೆ. ಮೋಸ ಮಾಡಿದ ಗೆಳೆಯರ ಬಂಧನಕ್ಕೆ ಚಿಕ್ಕಜಾಲ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿ ಚಂದನ್ ಗೆಳೆಯರಿಂದಲೇ ಮೋಸಕ್ಕೊಳಗಾದ ಯುವಕ. ಚಂದನ್ ಗೆಳೆಯರಾದ ಅಚಲ್ ಮತ್ತು ಪವನ್ ಪರಾರಿಯಾಗಿದ್ದರೆ.
25
ಅಚಲ್
ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಚಂದನ್ ಪೋಷಕರಿಗೆ ಒಬ್ಬನೇ ಮಗನಾಗಿದ್ದು, ಮೈಕೈ ತುಂಬಾ ಚಿನ್ನಾಭರಣ ಹಾಕಿಕೊಂಡೇ ಓಡಾಡುತ್ತಿದ್ದನು. ಓಡಾಡೋಕೆ ಐಷಾರಾಮಿ ಕಾರ್ ಸಹ ಬಳಸುತ್ತಿದ್ದನು. ಕಳೆದ ಹಲವು ವರ್ಷಗಳಿಂದ ಚಂದನ್‌ಗೆ ಅಚಲ್ ಮತ್ತು ಪವನ್ ಗೆಳೆಯರಾಗಿದ್ದರು. ಆದ್ರೆ ಇವರಿಬ್ಬರಿಗೆ ಗೆಳೆಯ ಚಂದನ್ ಲೈಫ್‌ಸ್ಟೈಲ್ ಮತ್ತು ಆತ ಧರಿಸುತ್ತಿದ್ದ ಚಿನ್ನಾಭರಣಗಳ ಮೇಲೆ ಕಣ್ಣು ಬಿದ್ದಿತ್ತು.
35
ಪ್ರೇಮ್ ಶೆಟ್ಟಿ
ಮೇ 1ರಂದು ಮೂವರು ಚಿಕ್ಕಜಾಲದ ನೆಕ್ಸ್ಟ್ ಚಾಪ್ಟರ್ ಪಬ್ ಗೆ ಹೋಗಿದ್ದಾರೆ. ಮೊದಲೇ ಪ್ಲಾನ್ ಮಾಡಿಕೊಂಡಂತೆ ಚಂದನ್‌ಗೆ ಕಂಠಪೂರ್ತಿ ಮದ್ಯ ಕುಡಿಸಿದ್ದಾರೆ. ನಂತರ ಲಾಂಗ್‌ಡ್ರೈವ್‌ಗೆ ಹೋಗೋಣ ಎಂದು ಚಂದನ್‌ನನ್ನು ಒಪ್ಪಿಸಿದ್ದಾರೆ. ಇತ್ತ ಅಚನ್ ತನ್ನ ಜೆಪಿ ನಗರದ ಗೆಳೆಯ ಪ್ರೇಮ್‌ಶೆಟ್ಟಿ ಮತ್ತು ಆತನ ಗ್ಯಾಂಗ್‌ಗೆ ಮಾಹಿತಿ ನೀಡಿದ್ದಾರೆ. ಮಾರ್ಗಮಧ್ಯೆ ಮೂವರನ್ನು ಅಡ್ಡಗಟ್ಟಿದ ಪ್ರೇಮ್‌ಶೆಟ್ಟಿ ಆಂಡ್ ಗ್ಯಾಂಗ್ ಹಲ್ಲೆ ನಡೆಸಿ ಚಂದನ್ ಧರಿಸಿದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದಾರೆ.
ದರೋಡೆ ಬಳಿಕ ಚಿಕ್ಕಜಾಲ ಠಾಣೆಗೆ ತೆರಳಿದ ಚಂದನ್ ದೂರು ದಾಖಲಿಸಿದ್ದಾನೆ. ಈ ವೇಳೆ ಅಚಲ್ ಸಹ ತಾನು ಧರಿಸಿದ್ದ ಚಿನ್ನದ ಚೈನ್ ದೋಚಿದ್ದಾರೆ ಎಂದು ಹೇಳಿದ್ದನು. ಪೊಲೀಸರಿಗೆ ಅಚಲ್ ಮತ್ತು ಪವನ್ ಮೇಲೆ ಅನುಮಾನ ಬಂದಿದೆ. ಇಬ್ಬರ ಕಾಲ್ ಡಿಟೈಲ್ಸ್ ತೆಗೆದಾಗ ದರೋಡೆ ಹಿಂದೆ ಪವನ್ ಮತ್ತು ಅಚಲ್ ಇರೋದು ಗೊತ್ತಾಗಿದೆ.
55
ಚಂದನ್
ಸುಲಿಗೆ ಮಾಡಿದ್ದ ಪ್ರೇಮ್ ಶೆಟ್ಟಿಗೂ ಅಚಲ್ ಗೂ ಲಿಂಕ್ ಇರೋದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರಿಗೆ ಅನುಮಾನ ಬರುತ್ತಿದ್ದಂತೆ ಪವನ್ ಮತ್ತು ಅಚಲ್ ಎಸ್ಕೇಪ್ ಅಗಿದ್ದಾರೆ. ಅಚಲ್, ಪವನ್ ಇಬ್ಬರು ಜೆಪಿ ನಗರದಲ್ಲಿ ನಾನಾಸ್ ಕೆಫೆ ನಡೆಸುತ್ತಿದ್ದರು. ಈ ಕೆಫೆ ನಷ್ಟದಲ್ಲಿದ್ದರಿಂದ ಇಬ್ಬರು ಸಾಲದಲ್ಲಿ ಸಿಲುಕಿದ್ದರು. ಆಗ ಚಂದನ್ ಧರಿಸುತ್ತಿದ್ದ ಚಿನ್ನಾಭರಣದ ಮೇಲೆ ಇಬ್ಬರ ಕಣ್ಣು ಬಿದ್ದಿತ್ತು. ತಾವೇ ದರೋಡೆ ನಡೆಸಿ ಆರ್ಥಿಕ ಸಂಕಷ್ಟದಿಂದ ಹೊರ ಬರಲು ಪ್ಲಾನ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.