ಕೊರೋನಾ ವಾರಿಯರ್ಸ್ ಸಂಕಟ; ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ ಜೆಡಿಎಸ್ ಮುಖಂಡ

First Published Apr 23, 2020, 5:40 PM IST

ಬೆಂಗಳೂರು(ಏ. 23)  ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.  ಜೆಡಿಎಸ್ ನಾಯಕರೊಬ್ಬರು ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.  ಬೆಂಗಳೂರಿನ ಲಗ್ಗೇರೆಯಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಲಗ್ಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆಶಾ ಕಾರ್ಯಕರ್ತೆ ಶಶಿಕಲಾ ಮೇಲೆ ಹಲ್ಲೆಗೆ ಯತ್ನ ಮಾಡಲಾಗಿದೆ.
undefined
ಕಳೆದ ಭಾನುವಾರ ಆಸ್ಪತ್ರೆಗೆ ಊಟ ಕೊಡಲು ಹೋದ ಧನಂಜಯ ತೆರಳಿದ್ದ. ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ವಿಡಿಯೋ ಮಾಡಿಕೊಂಡ ಧನಂಜಯ.. ಸಾನಿಟೈಸಜರ್ ಕಾರ್ಪೋರೆಟ್ ಕೊಟ್ಟಿದ್ದಾರಾ..? ಲೋಕಲ್ ಎಮ್ ಎಲ್ ಎ ಕೊಟ್ಟಿದ್ದಾರಾ..? ಎಂದೆಲ್ಲ ಪ್ರಶ್ನೆ ಕೇಳಿದ್ದ.
undefined
ಇದಕ್ಕೆ ಆಶಾ ಕಾರ್ಯಕರ್ತೆ ಕಾರ್ಪೋರೆಟ್ ಕೊಟ್ಟಿಲ್ಲ..ಎಮ್ ಎಲ್ ಎ ಕೊಟ್ಟಿಲ್ಲ..ಸರ್ಕಾರ ಕೊಟ್ಟಿದ್ದು ಎಂದು ಹೇಳಿದ್ದರು. ತನಗೆ ಬೇಕಾದ ರೀತಿಯಲ್ಲಿ ವಿಡಿಯೋ ಕಟ್ ಮಾಡಿ.. ಅದನ್ನು ಸೋಶಿಯಲ್ ಮೀಡಿಯಾ ದಲ್ಲಿ ಧನಂಜಯ್ ಅಪ್ ಲೋಡ್ ಮಾಡಿದ್ದ.
undefined
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ದಲ್ಲಿ ನೋಡಿದ ಆಶಾ ಕಾರ್ಯಕರ್ತೆಯ ಗಂಡ. ಇದೆಲ್ಲ ನಿಮಗ್ಯಾಕೆ ಬೇಕು ಅಂತ ಅಶಾ ಕಾರ್ಯಕರ್ತೆಗೆ ಬೈದಿದ್ದರು. ನಂತರ ವಿಡಿಯೋವನ್ನು ಡಿಲೀಟ್ ಮಾಡುವಂತೆ ಲಗ್ಗೆರೆ ಜೆಡಿಎಸ್ ಆಫೀಸ್ ಗೆ ಆಶಾ ಕಾರ್ಯಕರ್ತೆ ತೆರಳಿದ್ದರು.
undefined
ಡಿಲೀಟ್ ಮಾಡುತ್ತೇನೆ ಅಂತಾ ಹೇಳಿ ಕಳಿಸಿದ್ದ ಧನಂಜಯ್ ಡಿಲೀಟ್ ಮಾಡದೇ ಮತ್ತಷ್ಟು ಶೇರ್ ಮಾಡಿಕೊಂಡಿದ್ದ. ಇದನ್ನು ಕಂಡ ಕಾರ್ಯಕರ್ತೆ ಲಗ್ಗೇರೆಯಲ್ಲಿರುವ ಧನಂಜಯ್ ಮನೆಗೆ ಹೋಗಿ ಕೇಳಿದ್ದಾರೆ.
undefined
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆಗೆ ಯತ್ನಿಸಿದ ಧನಂಜಯ್ ಹಲ್ಲೆ ಮಾಡಲು ಮುಂದಾಗಿದ್ದಾನೆ. ಧನಂಜಯ್ ಮೇಲೆ ನಂದಿನಿ ಲೇಔಟ್ ನಲ್ಲಿ ಶಶಿಕಲಾ ದೂರು ನೀಡಿದ್ದಾರೆ. ಆರೋಪಿ ಧನಂಜಯನನ್ನು ಬಂಧಿಸಲಾಗಿದೆ.
undefined
ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ನಂದಿನಿ ಲೇ ಔಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
undefined
click me!