ಸಮಾಜಕ್ಕೆ ಮಾರ್ಗದರ್ಶಕರಾಗಬೇಕಿದ್ದ ಶಿಕ್ಷಕರೇ ಸಮಾಜಕ್ಕೆ ಕಳಂಕ ತಂದ ದೇಶದ ಟಾಪ್‌-5 ಕೇಸ್‌!

First Published Sep 6, 2024, 12:04 PM IST

ಶಿಕ್ಷಕರನ್ನು ಸಮಾಜದ ಪ್ರತಿಬಿಂಬ ಮತ್ತು ಮಾರ್ಗದರ್ಶಕ ಎಂದು ಪರಿಗಣಿಸಲಾಗುತ್ತದೆ. ಒಬ್ಬ ಗುರುವಿಗೆ ಎಲ್ಲಾ ಸಂಬಂಧಗಳು ಮತ್ತು ಸ್ಥಾನಗಳಿಗಿಂತ ಹೆಚ್ಚಿನ ಗೌರವ ಮತ್ತು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಆದರೆ ಕೆಲವು ಶಿಕ್ಷಕರು ಈ ವೃತ್ತಿಗೆ ಕಳಂಕ ತಂದಿದ್ದಾರೆ. ಅಂತಹ 5 ಪ್ರಕರಣಗಳ ಬಗ್ಗೆ ತಿಳಿಯೋಣ...

ಪ್ರೇಮಿಯೊಂದಿಗೆ ಸೇರಿ ಪತಿಯನ್ನು ಕೊಂದ ಶಿಕ್ಷಕಿ

2021 ರಲ್ಲಿ ಉತ್ತರ ಪ್ರದೇಶದ ನಡೆದ ಘಟನೆ ಶಿಕ್ಷಕ ವೃತ್ತಿಗೆ ಕಪ್ಪು ಚುಕ್ಕೆ ಎನಿಸಿತ್ತು. ಶಿಕ್ಷಕಿ ನೇಹಾ ವರ್ಮಾ ತನ್ನ ಪ್ರೇಮಿಯೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು. ಕೊಲೆ ಪ್ರಕರಣವನ್ನು ಬಯಲಿಗೆಳೆದ ಅಲಹಾಬಾದ್ ಪೊಲೀಸರು ಆರೋಪಿ ಶಿಕ್ಷಕಿ ಮತ್ತು ಆಕೆಯ ಪ್ರೇಮಿಯನ್ನು ಬಂಧಿಸಿದ್ದರು.

ಶಿಕ್ಷಕಿಯಿಂದಲೇ ವಿದ್ಯಾರ್ಥಿಯ ಹತ್ಯೆ

2023 ರಲ್ಲಿ ಪಂಜಾಬ್‌ನಲ್ಲಿ ಗೌರಿ ಖಾನ್ ಪ್ರಕರಣವು ಸಾಕಷ್ಟು ಸುದ್ದಿಯಾಯಿತು. ಖಾಸಗಿ ಶಾಲೆಯ ಶಿಕ್ಷಕಿ ಗೌರಿ ಖಾನ್ ತನ್ನ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಳು. ಶಾಲೆಯ ಬಳಿಯೇ ಶವ ಪತ್ತೆಯಾಗಿತ್ತು. ಲುಧಿಯಾನಾದ ಈ ಘಟನೆಯಲ್ಲಿ ಕೊಲೆಗೆ ಶಿಕ್ಷಕಿ ಮತ್ತು ವಿದ್ಯಾರ್ಥಿ ಮತ್ತು ಅವರ ಕುಟುಂಬದ ನಡುವಿನ ವೈಯಕ್ತಿಕ ದ್ವೇಷವೇ ಕಾರಣ ಎನ್ನುವುದು ಗೊತ್ತಾಗಿತ್ತು.

Latest Videos


ರಾಜಸ್ಥಾನದಲ್ಲಿ ಶಾಲಾ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ರಾಜಸ್ಥಾನದ ಧೌಲ್ಪುರದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ. 2022 ರಲ್ಲಿ ನಡೆದ ಈ ಘಟನೆಯಲ್ಲಿ ಆರೋಪಿ ಸರ್ಕಾರಿ ಶಿಕ್ಷಕ ಸುನಿಲ್ ಮೀಣಾ ತನ್ನ 14 ವರ್ಷದ ವಿದ್ಯಾರ್ಥಿನಿಯ ಮೇಲೆ ತರಗತಿಯಲ್ಲಿಯೇ ಅತ್ಯಾಚಾರ ಎಸಗಿದ್ದ. ಇದಕ್ಕೆ ನಿರಾಕರಿಸಿದಾಗ ಶಿಕ್ಷಕ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಮನೆಗೆ ತಲುಪಿದ ಬಾಲಕಿ ತನ್ನ ಕುಟುಂಬಕ್ಕೆ ಈ ವಿಷಯ ತಿಳಿಸಿದ್ದಾಳೆ. ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಶಿಕ್ಷಕನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಯಿತು.

ಉತ್ತರಾಖಂಡದಲ್ಲಿ ಟ್ಯೂಷನ್ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

2019 ರಲ್ಲಿ ಉತ್ತರಾಖಂಡದ ಶಾಲಾ ಶಿಕ್ಷಕ ರಾಜೇಂದ್ರ ಸಿಂಗ್‌ನಿಂದ 16 ವರ್ಷದ ಬಾಲಕಿಯೊಬ್ಬಳು ಟ್ಯೂಷನ್ ತೆಗೆದುಕೊಳ್ಳುತ್ತಿದ್ದಳು. ಅಲ್ಮೋರಾದಲ್ಲಿ ರಾಜೇಂದ್ರನ ಮನೆಗೆ ಬಾಲಕಿ ಟ್ಯೂಷನ್‌ಗೆ ಹೋಗುತ್ತಿದ್ದಳು. 40 ವರ್ಷದ ಶಿಕ್ಷಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ್ದ. ಮನೆಗೆ ಬಂದ ಬಾಲಕಿ ಕುಟುಂಬದವರಿಗೆ ವಿಷಯ ತಿಳಿಸಿದ್ದಾಳೆ. ಪೊಲೀಸರು ಆತನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.

ಹೌರಾದಲ್ಲಿ ಟ್ಯೂಷನ್ ಶಿಕ್ಷಕನಿಂದ ವಿದ್ಯಾರ್ಥಿನಿಯ ಹತ್ಯೆ

ಪಶ್ಚಿಮ ಬಂಗಾಳದ ಹೌರಾದಲ್ಲಿ ಕಲ್ಯಾಣ ಬ್ಯಾನರ್ಜಿ ಎಂಬ ಟ್ಯೂಷನ್ ಶಿಕ್ಷಕ 2019 ರಲ್ಲಿ ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ್ದ. ವಿದ್ಯಾರ್ಥಿನಿ ಆತನ ಮನೆಗೆ ಟ್ಯೂಷನ್‌ಗೆ ಹೋಗುತ್ತಿದ್ದಳು. ಈ ಕೊಲೆಗೆ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾರಣ ಎಂದು ಹೇಳಲಾಗಿದೆ.

click me!