WTC 2025: ಟೆಸ್ಟ್ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಭಾರತ & ಪಾಕಿಸ್ತಾನಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು?

Published : Jun 15, 2025, 11:29 AM IST

3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಮುಕ್ತಾಯದ ಬೆನ್ನಲ್ಲೇ ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡಲಿದೆ. 3ನೇ ಸ್ದಾನ ಪಡೆದ ಭಾರತ, ಕೊನೆ ಸ್ಥಾನ ಪಡೆ  ಪಾಕಿಸ್ತಾನಕ್ಕೆ ಸಿಕ್ಕ ಹಣ ಎಷ್ಟು>   

PREV
17
ಟೆಸ್ಟ್ ವಿಶ್ವಕಪ್‌: ಹರಿಣಗಳಿಗೆ ಪ್ರಶಸ್ತಿ

WTC 2025ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು 5 ವಿಕೆಟ್ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.

27
ಟೂರ್ನಿಯಿಂದ ಭಾರತ ಔಟ್

 ಫೈನಲ್ ತಲುಪುವ ಫೇವರೇಟ್ ಆಗಿದ್ದ ಟೀಂ ಇಂಡಿಯಾ, ತವರಿನಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತು ಹೊರಬಿತ್ತು.

37
ಹರಿಣಗಳ ಪಡೆಗೆ ಜಾಕ್‌ಪಾಟ್

ಐಸಿಸಿ ಈ ದೊಡ್ಡ ಟೂರ್ನಿಯ ಪ್ರಶಸ್ತಿ ನಗದು ಬಹುಮಾನ ಮೊತ್ತವನ್ನು ಬಹಳ ಹಿಂದೆಯೇ ಘೋಷಿಸಿತ್ತು. WTC ಫೈನಲ್ ಗೆದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ₹30.78 ಕೋಟಿ ನಗದು ಬಹುಮಾನ ಸಿಕ್ಕಿತು.

47
ಆಸ್ಟ್ರೇಲಿಯಾಗೂ ಬಂಪರ್

 ಎರಡನೇ ಆವೃತ್ತಿಯ ಚಾಂಪಿಯನ್ ಹಾಗೂ ಮೂರನೇ ಆವೃತ್ತಿಯಲ್ಲಿ ಹರಿಣಗಳೆದುರು ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಆಸೀಸ್ ತಂಡವು ₹18.4 ಕೋಟಿ ನಗದು ಬಹುಮಾನ ತನ್ನದಾಗಿಸಿಕೊಂಡಿತು.

57
ಭಾರತಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು?

WTC ಫೈನಲ್ 2025 ಆಡದ ಟೀಂ ಇಂಡಿಯಾ ಭರ್ಜರಿ ನಗದು ಬಹುಮಾನ ಸಿಕ್ಕಿದೆ. ಮೂರನೇ ಸ್ಥಾನದಲ್ಲಿರುವ ಭಾರತಕ್ಕೆ ₹12.31 ಕೋಟಿ ನಗದು ಬಹುಮಾನ ಸಿಕ್ಕಿದೆ.

67
ಪಾಕಿಸ್ತಾನಕ್ಕೆ ಸಿಕ್ಕ ನಗದು ಬಹುಮಾನ

WTCಯ ಮೂರನೇ ಆವೃತ್ತಿಯಲ್ಲಿ ಪಾಕಿಸ್ತಾನ ಕೊನೆಯ ಸ್ಥಾನದಲ್ಲಿತ್ತು. ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಹೀಗಾಗಿ ಅವರಿಗೆ ₹4 ಕೋಟಿ ರುಪಾಯಿ ನಗದು ಬಹುಮಾನ ಪಡೆದಿದೆ

77
ಉಳಿದ ತಂಡಗಳಿಗೆ ಸಿಕ್ಕ ನಗದು ಬಹುಮಾನ ಎಷ್ಟು?

ನಾಲ್ಕನೇ ಸ್ಥಾನ ಪಡೆದ ನ್ಯೂಜಿಲೆಂಡ್(10.26 ಕೋಟಿ), ಐದನೇ ಸ್ಥಾನ ಪಡೆದ ಇಂಗ್ಲೆಂಡ್(8.20 ಕೋಟಿ ರುಪಾಯಿ), ಆರನೇ ಸ್ಥಾನ ಪಡೆದ ಶ್ರೀಲಂಕಾ(7.18 ಕೋಟಿ ರುಪಾಯಿ), ಏಳನೇ ಸ್ಥಾನ ಪಡೆದ ಬಾಂಗ್ಲಾದೇಶ 6.15 ಕೋಟಿ ರುಪಾಯಿ, 8ನೇ ಸ್ಥಾನ ಪಡೆದ ವೆಸ್ಟ್ ಇಂಡೀಸ್ 5.13 ಕೋಟಿ ರುಪಾಯಿ ನಗದು ಬಹುಮಾನ ತನ್ನದಾಗಿಸಿಕೊಂಡಿವೆ.

Read more Photos on
click me!

Recommended Stories