ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಫೀಲ್ಡರ್‌ಗಳು ಬೌಂಡರಿ ಲೈನ್ ಬಳಿ ಪಡೆಯುವ ಕ್ಯಾಚ್‌ಗೆ ಕೆಲ ನಿಯಮಗಳನ್ನು ಘೋಷಿಸಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ. ಕೆಲವು ಬೌಂಡರಿ ಲೈನ್ ಕ್ಯಾಚ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸಿವೆ.
26
ಹೊಸ ನಿಯಮದ ಪ್ರಕಾರ, ಇನ್ನು ಮುಂದೆ 'ಬನ್ನಿ ಹಾಪ್' ಕ್ಯಾಚ್‌ಗಳನ್ನು ಔಟ್ ಎಂದು ಪರಿಗಣಿಸಲಾಗುವುದಿಲ್ಲ. ಕ್ರಿಕೆಟ್ ನಿಯಮಗಳನ್ನು ರೂಪಿಸುವ ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಈ ನಿಯಮ ಪರಿಚಯಿಸಿದ್ದು, ಜೂ.17ಕ್ಕೆ ಆರಂಭಗೊಳ್ಳಲಿರುವ ಶ್ರೀಲಂಕಾ-ಬಾಂಗ್ಲಾ ದೇಶ ಟೆಸ್ಟ್‌ನಲ್ಲಿ ಮೊದಲ ಬಾರಿ ಜಾರಿಗೊಳ್ಳಲಿದೆ.
36
ಏನಿದು ನಿಯಮ?: ಕ್ರಿಕೆಟ್‌ನಲ್ಲಿ ಬೌಂಡರಿ ಗೆರೆಯ ಹೊರಗೆ ಜಿಗಿದು, ಮತ್ತೆ ಒಳಗೆ ಬಂದು ಕ್ಯಾಚ್ ಪಡೆಯುವುದು ಸಾಮಾನ್ಯ. ಇದಕ್ಕೆ ಇನ್ನು ಕೆಲ ನಿಯಮಗಳಿರಲಿವೆ.
ಆಟಗಾರ ಗೆರೆಯ ಒಳಗೆ ನಿಂತು ಚೆಂಡನ್ನು ಮೇಲಕ್ಕೆಸೆದು, ಬಳಿಕ ಗೆರೆಯ ಹೊರಗೆ ಹೋಗಿ ಮತ್ತೆ ಒಳಗೆ ಬಂದು ಕ್ಯಾಚ್ ಪಡೆದರೆ ಅದು ಮಾನ್ಯವಾಗುತ್ತದೆ. ಅಂದರೆ, ಫೀಲ್ಡರ್ ಮೇಲಕ್ಕೆಸೆದ ಚೆಂಡು ಗಾಳಿಯಲ್ಲಿ ಇದ್ದಾಗ, ಆ ಫೀಲ್ಡರ್ ಹೊರಗೆ ಹೋಗಿ ಅಲ್ಲಿ ಮೇಲಕ್ಕೆ ಹಾರಿ ಮತ್ತೆ ಚೆಂಡನ್ನು ಗೆರೆಯ ಒಳಗೆ ಎಸೆಯು ವಂತಿಲ್ಲ.
56
ಒಮ್ಮೆ ಗೆರೆಯ ಒಳಗೆ ನಿಂತು ಫೀಲ್ಡರ್ ಚೆಂಡನ್ನು ಮೇಲಕ್ಕೆ ಎಸೆದು ಹೋದರೆ, ಮತ್ತೊಮ್ಮೆ ಚೆಂಡನ್ನು ಸ್ಪರ್ಶಿಸಲು ಆತ ಮೈದಾನದ ಒಳಗೇ ಬರಬೇಕು. ಗೆರೆಯ ಆಚೆ ಮೇಲಕ್ಕೆ ಹಾರಿ ಚೆಂಡನ್ನು ಸ್ಪರ್ಶಿಸಿದರೆ ಅದನ್ನು ಬೌಂಡರಿ ಎಂದು ಪರಿಗಣಿಸಲಾಗುತ್ತದೆ.
66
ಇನ್ನು, ಫೀಲ್ಡರ್ ಸಹ ಆಟಗಾರನಿಗೆ ಚೆಂಡನ್ನು ಪಾಸ್ ಮಾಡುವುದಕ್ಕೂ ನಿಯಮ ರೂಪಿಸಲಾಗಿದೆ. ಫೀಲ್ಡರ್ ಬೌಂಡರಿ ಲೈನ್ ಬಳಿ ಚೆಂಡನ್ನು ಸ್ಪರ್ಶಿಸಿ, ಒಳಗಡೆ ಮತ್ತೋರ್ವ ಫೀಲ್ಡರ್ ಕ್ಯಾಚ್ ಪಡೆಯುವಾಗ ಮೊದಲು ಸಂಪರ್ಕಕ್ಕೆ ಬಂದ ಫೀಲ್ಡರ್ ಕೂಡಾ ಮೈದಾನದ ಒಳಗೆ ಬಂದಿರಬೇಕು. ಅಲ್ಲದಿದ್ದರೆ ಅದನ್ನು ಬೌಂಡರಿ ಎಂದು ಘೋಷಿಸಲಾಗುತ್ತದೆ.