ನವದೆಹಲಿ: ಬಹುನಿರೀಕ್ಷಿತ ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ನಡೆಯಲಿದ್ದು, ಸಾಕಷ್ಟು ಕುತೂಹಲ ಗರಿಗೆದರಿದೆ. ಈ ಬಾರಿ ಹರಾಜಿನಲ್ಲಿ ಎಷ್ಟು ಆಟಗಾರ್ತಿಯರು ಪಾಲ್ಗೊಂಡಿದ್ದಾರೆ? ಹರಾಜು ಆರಂಭ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆಟಗಾರ್ತಿಯರ ಹರಾಜು ಪ್ರಕ್ರಿಯೆ ಗುರುವಾರ ಇಲ್ಲಿ ನಡೆಯಲಿದ್ದು, 5 ತಂಡಗಳಲ್ಲಿ ಖಾಲಿ ಇರುವ ಒಟ್ಟು 73 ಸ್ಥಾನಗಳು ಭರ್ತಿಯಾಗುವ ನಿರೀಕ್ಷೆ ಇದೆ.
28
277 ಮಹಿಳೆಯರು ಹರಾಜಿನಲ್ಲಿ ಭಾಗಿ
ಹರಾಜಿಗೆ ನೋಂದಣಿ ಮಾಡಿಕೊಂಡಿದ್ದ ಆಟಗಾರ್ತಿಯರ ಪೈಕಿ 277 ಮಂದಿಯ ಅಂತಿಮ ಪಟ್ಟಿಯನ್ನು ಬಿಸಿಸಿಐ ಪ್ರಕಟಗೊಳಿಸಿದ್ದು, ದೀಪ್ತಿ ಶರ್ಮಾ, ಶ್ರೀಚರಣಿ, ಕ್ರಾಂತಿ ಗೌಡ್, ಲಾರಾ ವೂಲ್ವಾರ್ಟ್, ಮೆಗ್ ಲ್ಯಾನಿಂಗ್ ಸೇರಿ ಹಲವು ತಾರಾ ಆಟಗಾರ್ತಿಯರಿದ್ದಾರೆ.
38
ಹರಾಜಿನಲ್ಲಿ 194 ಭಾರತೀಯ ಆಟಗಾರ್ತಿಯರು ಭಾಗಿ
194 ಭಾರತೀಯ ಹಾಗೂ 83 ವಿದೇಶಿ ಆಟಗಾರ್ತಿಯರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಈ ಪೈಕಿ ಗರಿಷ್ಠ 50 ಭಾರತೀಯರು, 23 ವಿದೇಶಿಗರನ್ನು ಫ್ರಾಂಚೈಸಿಗಳು ಖರೀದಿಸಬಹುದಾಗಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ನವದೆಹಲಿಯಲ್ಲಿಂದು ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರದಲ್ಲಿ ಈ ಮೆಗಾ ಹರಾಜು ವೀಕ್ಷಿಸಬಹುದಾಗಿದೆ.
58
ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಬಹುದು
ಪ್ರತಿ ತಂಡ ಕನಿಷ್ಠ 15 ಹಾಗೂ ಗರಿಷ್ಠ 18 ಆಟಗಾರ್ತಿಯರನ್ನು ಹೊಂದಬಹುದು. ಈಗಾಗಲೇ ಎಲ್ಲಾ ತಂಡಗಳು ಕೆಲ ಆಟಗಾರ್ತಿಯರನ್ನು ರೀಟೈನ್ ಮಾಡಿಕೊಂಡಿವೆ.
68
ಪ್ರತಿ ತಂಡದ ಗರಿಷ್ಠ 15 ಕೋಟಿ ಖರ್ಚು ಮಾಡಬಹುದು
ಪ್ರತಿ ತಂಡ ಗರಿಷ್ಠ 15 ಕೋಟಿ ರು. ಖರ್ಚು ಮಾಡಬಹುದು. ರೀಟೈನ್ ಆದ ಆಟಗಾರ್ತಿಯರಿಗೆ ಕೊಟ್ಟ ಮೊತ್ತವೂ 15 ಕೋಟಿ ರು.ನಲ್ಲಿ ಸೇರಿರಲಿದೆ.
78
ಯುಪಿ ವಾರಿಯರ್ಸ್ ಬಳಿಯಿದೆ ಗರಿಷ್ಠ ಪರ್ಸ್
ಕೇವಲ ಒಬ್ಬ ಆಟಗಾರ್ತಿಯನ್ನು ಉಳಿಸಿಕೊಂಡಿರುವ ಯುಪಿ ವಾರಿಯರ್ಸ್ ಗರಿಷ್ಠ 14.5 ಕೋಟಿ ರು.ನೊಂದಿಗೆ ಅತಿಹೆಚ್ಚು ಹಣ ಹೊಂದಿರುವ ತಂಡ ಎನಿಸಿದರೆ, 5.70 ಕೋಟಿ ರು. ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಅತಿ ಕಡಿಮೆ ಮೊತ್ತದೊಂದಿಗೆ ಹರಾಜಿಗೆ ಆಗಮಿಸಲಿದೆ.
88
ಆರ್‌ಸಿಬಿ ರೀಟೈನ್& ಪರ್ಸ್ ಡೀಟೈಲ್ಸ್
ಇನ್ನು ಎರಡನೇ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಮೃತಿ ಮಂಧನಾ, ಎಲಿಸಾ ಪೆರ್ರಿ, ರಿಚಾ ಘೋಷ್ ಹಾಗೂ ಶ್ರೇಯಾಂಕ ಪಾಟೀಲ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, ಹರಾಜಿಗೆ 6.25 ಕೋಟಿ ರುಪಾಯಿ ಪರ್ಸ್‌ನಲ್ಲಿಟ್ಟುಕೊಂಡು ಹರಾಜಿನಲ್ಲಿ ಕಣಕ್ಕಿಳಿಯುತ್ತಿದೆ.