ಯಾವ ನಗರದ ಬಿರಿಯಾನಿ ಉತ್ತಮ ಇದೆ ಎಂಬುದರ ಕುರಿತು ಆಹಾರ ಪ್ರೇಮಿಗಳಲ್ಲಿ ಯಾವಾಗಲೂ ಅಂತ್ಯವಿಲ್ಲದ ಚರ್ಚೆ ಇದೆ. ಹೈದರಾಬಾದ್, ಕೋಲ್ಕತ್ತಾ ಮತ್ತು ಲಕ್ನೋ ರುಚಿಕರವಾದ ಬಿರಿಯಾನಿಗೆ ಹೆಸರುವಾಸಿ ನಗರಗಳೆಂದು ಕರೆಯಲಾಗುತ್ತಿದ್ದರೆ, ಗಡಿಯಾಚೆಗಿನ ಕರಾಚಿ ಕೂಡ ಈ ಸ್ಪರ್ಧೆಯಲ್ಲಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಿಗೆ ಹೈದರಾಬಾದ್ ಬಿರಿಯಾನಿ ಅಥವಾ ಕರಾಚಿ ಬಿರಿಯಾನಿ ಎರಡರಲ್ಲಿ ಯಾವುದು ಬೆಸ್ಟ್ ಎಂದು ಕೇಳಲಾಯಿತು.
ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಅಧಿಕೃತ ಖಾತೆಯು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಭಾರತದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಿಗೆ ಹೈದರಾಬಾದ್ ಬಿರಿಯಾನಿ ಅಥವಾ ಕರಾಚಿ ಬಿರಿಯಾನಿಯ ಆದ್ಯತೆಯ ಕುರಿತು ಕೇಳಲಾಗಿದೆ.
ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಹೈದರಾಬಾದಿ ಬಿರಿಯಾನಿಯನ್ನು 10 ರಲ್ಲಿ 8 ಎಂದು ರೇಟ್ ಮಾಡಿದ್ದಾರೆ. ಆದಾಗ್ಯೂ, ಇದು ಸ್ವಲ್ಪ ಸ್ಪೈಸಿ ಎಂದು ಹೇಳಿದರು.
ಭಾರತೀಯ ಫ್ಲೈಟ್ ಇಂಜಿನಿಯರ್ ಸಮಿಯಾ ಅರ್ಜೂ ಅವರನ್ನು ಮದುವೆಯಾಗಿರುವ ಹಸನ್ ಅಲಿ, ಬಿರಿಯಾನಿಗೆ ಹತ್ತಕ್ಕೆ ಹತ್ತು ಎಂದು ಹೇಳಿದರು ಮತ್ತು ಅವರು ಹೈದರಾಬಾದಿ ಬಿರಿಯಾನಿಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳಿದರು.
ಇಮಾಮ್-ಉಲ್-ಹಕ್, ಪಾಕಿಸ್ತಾನದ ಲೆಜೆಂಡ್ ಬ್ಯಾಟರ್ ಇಂಜಮಾಮ್-ಉಲ್-ಹಕ್ ಅವರ ಸೋದರಳಿಯ, ಇದು ಅದ್ಭುತ ಮತ್ತು 10 ರಲ್ಲಿ 11 ಎಂದು ರೇಟ್ ಮಾಡಿದ್ದಾರೆ. 'ಇದು ತುಂಬಾ ಚೆನ್ನಾಗಿದೆ' ಅವರು ಸೇರಿಸಿದ್ದಾರೆ
ಇವೆರಡೂ ತುಂಬಾ ಚೆನ್ನಾಗಿರುವುದರಿಂದ ಯಾವುದು ಉತ್ತಮ ಎಂಬುದನ್ನು ಆಯ್ಕೆ ಮಾಡುವುದು ಕಠಿಣ ಎಂದು ಇಮಾಮ್-ಉಲ್-ಹಕ್ ಹೇಳಿದ್ದಾರೆ.
ಹೈದರಾಬಾದಿ ಬಿರಿಯಾನಿ ಬಗ್ಗೆ ತಾನು ಸಾಕಷ್ಟು ಕೇಳಿದ್ದೇನೆ ಮತ್ತು ಇದು ಪ್ರಪಂಚದಾದ್ಯಂತ ಸಾಕಷ್ಟು ಪ್ರಸಿದ್ಧವಾಗಿದೆ ಎಂದು ಶಾದಾಬ್ ಖಾನ್ ಹೇಳಿದರು. ಭಾರತಕ್ಕೆ ಬಂದ ನಂತರ ಮೊದಲು ಹೈದರಾಬಾದಿ ಬಿರಿಯಾನಿ ತಿಂದಿದ್ದು, 10ಕ್ಕೆ 20 ರೇಟಿಂಗ್ ನೀಡಬೇಕು ಎಂದರು.
ಹೈದರಾಬಾದಿ ಮತ್ತು ಕರಾಚಿ ಬಿರಿಯಾನಿಗಳು ಒಂದೇ ಆಗಿವೆಯೇ ಎಂದು ಕೇಳಿದಾಗ, ಹೈದರಾಬಾದಿ ಬಿರಿಯಾನಿ ಮಸಾಲೆಯುಕ್ತ ಆಗಿರುವುದನ್ನು ಹೊರತು ಪಡಿಸಿ ಎರಡನ್ನೂ ಒಂದೇ ರೀತಿ ಕರೆಯಬಹುದು ಎಂದು ಅಜಮ್ ಹೇಳಿದರು.
ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ನಾಯಕನಿಗೆ ಮಸಾಲೆ ಇಷ್ಟವಿಲ್ಲವೆಂದೆನಿಸುತ್ತೆಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
'ಪಾಕಿಸ್ತಾನಿ ಆಟಗಾರರು ನಮ್ಮ ಆತಿಥ್ಯವನ್ನು ಹೇಗೆ ಪ್ರೀತಿಸುತ್ತಾರೆ' ಎಂದು ಇನ್ನೊಬ್ಬರು ಹೇಳಿದ್ದಾರೆ. 'ರಾಷ್ಟ್ರಗಳಿಂದ ವಿಭಜಿಸಲ್ಪಟ್ಟಿದ್ದು ಬಿರಿಯಾನಿಯಿಂದ ಒಗ್ಗೂಡಿದೆ' ಎಂದು ಮೂರನೆಯವರು ಬರೆದಿದ್ದಾರೆ.