ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಬಗ್ಗುಬಡಿದ ಹಲವು ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ!

Published : Oct 31, 2025, 01:34 PM IST

ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಎರಡನೇ ಸೆಮಿಫೈನಲ್‌ನಲ್ಲಿ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಅನಾಯಾಸವಾಗಿ ಬಗ್ಗುಬಡಿಯುವಲ್ಲಿ ಭಾರತ ಯಶಸ್ವಿಯಾಗಿದೆ. ಇದರ ಜತೆಗೆ ಅಪರೂಪದ ದಾಖಲೆಗಳನ್ನು ಮುರಿಯುವಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಯಶಸ್ವಿಯಾಗಿದೆ.

PREV
18
ಹಲವು ದಾಖಲೆ ನಿರ್ಮಾಣ

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿ ಮುನ್ನುಗ್ಗುತ್ತಿದ್ದ ಕಾಂಗರೂ ಪಡೆಯನ್ನು ಸೋಲಿಸಿ ಭಾರತ ಫೈನಲ್‌ಗೆ ಪ್ರವೇಶಿಸಿದೆ. ಇದರ ಜತೆಗೆ ಹಲವು ದಾಖಲೆಗಳನ್ನು ನಿರ್ಮಿಸಿದೆ.

28
ವಿಶ್ವಕಪ್ ನಾಕೌಟ್‌ನಲ್ಲಿ ಗರಿಷ್ಠ ರನ್ ಚೇಸ್

ಮಹಿಳಾ-ಪುರುಷರ ಏಕದಿನ ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ಒಂದು ತಂಡ 300ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆದ್ದಿದ್ದು ಇದೇ ಮೊದಲು. ಇದಲ್ಲದೆ, ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಒಂದು ತಂಡ ಬೆನ್ನಟ್ಟಿ ಗೆದ್ದ ಅತಿ ಹೆಚ್ಚು ಸ್ಕೋರ್ ಎಂಬ ದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿದೆ.

38
ಹೊಸ ಇತಿಹಾಸ ಬರೆದ ಟೀಂ ಇಂಡಿಯಾ

ಈ ವಿಶ್ವಕಪ್‌ನ ಗುಂಪು ಹಂತದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 331 ರನ್‌ಗಳನ್ನು ಬೆನ್ನಟ್ಟಿ ಗೆದ್ದಿದ್ದು ಮಹಿಳಾ ಏಕದಿನ ವಿಶ್ವಕಪ್‌ನ ಅತಿ ದೊಡ್ಡ ರನ್ ಚೇಸ್ ಆಗಿತ್ತು. ನಿನ್ನೆ ಆಸ್ಟ್ರೇಲಿಯಾ ನೀಡಿದ 338 ರನ್‌ಗಳನ್ನು ದಾಟಿದ ಭಾರತ ಈ ದಾಖಲೆಯನ್ನು ಮುರಿಯಿತು.

48
ಹೊಸ ದಾಖಲೆ ಬರೆದ ಭಾರತ-ಆಸ್ಟ್ರೇಲಿಯಾ ಪಂದ್ಯ

ಮಹಿಳಾ ಏಕದಿನ ವಿಶ್ವಕಪ್‌ ಇದೇ ಮೊದಲ ಸಲ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯೂ ನಿನ್ನೆಯ ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಸೇರಿದೆ. ಎರಡೂ ತಂಡಗಳು ಸೇರಿ ನಿನ್ನೆ 679 ರನ್ ಗಳಿಸಿವೆ. ಈ ಮೊದಲು 2017ರಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಬ್ರಿಸ್ಟಲ್‌ನಲ್ಲಿ ನಡೆದ ಪಂದ್ಯದಲ್ಲಿ 678 ರನ್ ದಾಖಲಾಗಿತ್ತು.

58
ಜೆಮಿಮಾ-ಹರ್ಮನ್ ಜೊತೆಯಾಟದ ದಾಖಲೆ

ಮೂರನೇ ವಿಕೆಟ್‌ಗೆ 167 ರನ್‌ಗಳ ಜೊತೆಯಾಟವಾಡಿದ ಜೆಮಿಮಾ ರೋಡ್ರಿಗ್ಸ್‌ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್, ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅತ್ಯುತ್ತಮ ಜೊತೆಯಾಟದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

68
ಹೊಸ ದಾಖಲೆ ಬರೆದ ರೋಡ್ರಿಗ್ಸ್

ಮಹಿಳಾ ಏಕದಿನ ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ರನ್ ಬೆನ್ನಟ್ಟುವಾಗ ಶತಕ ಗಳಿಸಿದ ಎರಡನೇ ಆಟಗಾರ್ತಿ ಎಂಬ ದಾಖಲೆಯನ್ನು ಜೆಮಿಮಾ ರೋಡ್ರಿಗ್ಸ್‌ ನಿರ್ಮಿಸಿದರು. ಇಂಗ್ಲೆಂಡ್‌ನ ನ್ಯಾಟ್ ಸೀವರ್ ಬ್ರಂಟ್ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ.

78
ಆಸ್ಟ್ರೇಲಿಯಾ-ಇಂಗ್ಲೆಂಡ್ ಇಲ್ಲದ ಮೊದಲ ವಿಶ್ವಕಪ್ ಫೈನಲ್

ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಇಲ್ಲದ ಫೈನಲ್ ನಡೆಯುತ್ತಿರುವುದು ಇದೇ ಮೊದಲು.

88
ವಿಶ್ವಕಪ್ ಫೈನಲ್‌ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಫೈಟ್

ನವೆಂಬರ್ 02ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಡಲಿವೆ. ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಇನ್ನು ಭಾರತ ಮೂರನೇ ಬಾರಿಗೆ ಫೈನಲ್‌ ಪ್ರವೇಶಿಸಿದ್ದು, ಯಾರೇ ಗೆದ್ದರೂ ಮೊದಲ ವಿಶ್ವಕಪ್ ಇದಾಗಲಿದೆ.

Read more Photos on
click me!

Recommended Stories