ಭಾರತ ಮತ್ತು ಆಸ್ಟ್ರೇಲಿಯಾ T20 ಸರಣಿಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಆಂಧ್ರದ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಗಾಯದ ಕಾರಣ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಭಾರತ-ಆಸ್ಟ್ರೇಲಿಯಾ T20 ಸರಣಿಗೂ ಮುನ್ನವೇ ಭಾರತಕ್ಕೆ ಹಿನ್ನಡೆಯಾಗಿದೆ. ಶ್ರೇಯಸ್ ಅಯ್ಯರ್ ನಂತರ, ಇದೀಗ ನಿತೀಶ್ ಕುಮಾರ್ ರೆಡ್ಡಿ ಕೂಡ ಗಾಯದ ಕಾರಣ ಮೊದಲ ಮೂರು T20 ಪಂದ್ಯಗಳಿಂದ ಹೊರಗುಳಿದಿದ್ದಾರೆ.
24
ಕ್ವಾಡ್ರಿಸೆಪ್ಸ್ ಗಾಯದಿಂದ ಚೇತರಿಸಿಕೊಳ್ಳುವ ಮೊದಲೇ ಹೊಸ ಸಮಸ್ಯೆ
ನಿತೀಶ್ ರೆಡ್ಡಿ, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಗಾಯದ ಕಾರಣ ದೂರ ಉಳಿದಿದ್ದರು. ಈಗ ಚೇತರಿಸಿಕೊಳ್ಳುವಾಗ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಬಿಸಿಸಿಐ ತಿಳಿಸಿದೆ.
34
ಪ್ಲೇಯಿಂಗ್-11ಗೆ ಹರ್ಷಿತ್ ರಾಣಾ
ನಿತೀಶ್ ಬದಲಿಗೆ ವೇಗದ ಬೌಲರ್ ಹರ್ಷಿತ್ ರಾಣಾ ಆಡುವ 11ರ ಬಳಗಕ್ಕೆ ಬಂದಿದ್ದಾರೆ. ಇದರಿಂದ ಬೌಲಿಂಗ್ ವಿಭಾಗಕ್ಕೆ ಬಲ ಬಂದರೂ, ಆಲ್‌ರೌಂಡ್ ಸಾಮರ್ಥ್ಯದ ಕೊರತೆ ಕಾಡಲಿದೆ. ಇದು ಸರಣಿಯ ಆರಂಭದಲ್ಲೇ ಭಾರತಕ್ಕೆ ಹಿನ್ನಡೆಯಾಗಿದೆ.