INDW vs AUSW: ಆಸ್ಟ್ರೇಲಿಯಾ ಮಣಿಸಿ ವಿಶ್ವದಾಖಲೆಯೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

Published : Oct 30, 2025, 11:18 PM IST

ICC ಮಹಿಳಾ ವಿಶ್ವಕಪ್ 2025: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಜೆಮಿಮಾ ರೋಡ್ರಿಗಸ್ ಅವರ ಸೂಪರ್ ಶತಕ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಗೆಲುವು ಸಾಧಿಸಿತು.  

PREV
15
ಟೀಂ ಇಂಡಿಯಾಗೆ ಜಯ

ತವರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಐಸಿಸಿ ಮಹಿಳಾ ವಿಶ್ವಕಪ್ 2025 ರಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. 339 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿತು. ಜೆಮಿಮಾ ರೋಡ್ರಿಗಸ್ (127* ರನ್) ಅಜೇಯರಾಗಿ ಉಳಿದು ಭಾರತವನ್ನು ಗೆಲುವಿನ ದಡ ಸೇರಿಸಿದರು.

25
ಜೆಮಿಮಾ ಅದ್ಭುತ ಆಟ

ಓಪನರ್‌ಗಳಾದ ಶಫಾಲಿ ವರ್ಮಾ (10) ಮತ್ತು ಸ್ಮೃತಿ ಮಂಧಾನ (24) 10 ಓವರ್‌ಗಳೊಳಗೆ ಔಟಾದರು. 59 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕಿ ಹರ್ಮನ್‌ಪ್ರೀತ್ ಮತ್ತು ಜೆಮಿಮಾ ಆಸರೆಯಾದರು. ಆದರೆ, ಶತಕದಂಚಿನಲ್ಲಿದ್ದ ಹರ್ಮನ್‌ಪ್ರೀತ್ (89) ಔಟಾದರು. ನಂತರ ಬ್ಯಾಟಿಂಗ್ ಜವಾಬ್ದಾರಿ ಹೊತ್ತ ಜೆಮಿಮಾ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

35
ರಿಚಾ ಘೋಷ್ ಮಿಂಚು

ರಿಚಾ ಘೋಷ್ ನಿರ್ಣಾಯಕ ಹಂತದಲ್ಲಿ ಮಿಂಚಿದರು. ಕೇವಲ 16 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ ಸಹಿತ 26 ರನ್ ಗಳಿಸಿದರು. ವೇಗವಾಗಿ ಆಡುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಜೆಮಿಮಾ, ಅಮನ್‌ಜೋತ್ ಕೌರ್ ಜೊತೆಗೂಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

45
ಆಸ್ಟ್ರೇಲಿಯಾಗೆ ಸೋಲು

ಇದೀಗ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ರನ್ ಗುರಿ ಯಶಸ್ವಿಯಾಗಿ ಬೆನ್ನತ್ತಿದ ತಂಡ ಎನ್ನುವ ವಿಶ್ವದಾಖಲೆಗೆ ಭಾರತ ಪಾತ್ರವಾಗಿದೆ. ಈ ಮೊದಲು ಇದೇ ವಿಶ್ವಕಪ್‌ನಲ್ಲಿ ಭಾರತ ಎದುರು ಆಸ್ಟ್ರೇಲಿಯಾ ತಂಡವು 331 ರನ್ ಯಶಸ್ವಿಯಾಗಿ ಬೆನ್ನತ್ತಿತ್ತು. ಆ ದಾಖಲೆ ಇದೀಗ ಭಾರತ ಬ್ರೇಕ್ ಮಾಡಿ ಸೇಡು ತೀರಿಸಿಕೊಂಡಿದೆ.

55
ಭಾರತಕ್ಕೆ ಜಯ

ಆರಂಭದಲ್ಲೇ ಅಲಿಸ್ಸಾ ಹೀಲಿ (5) ವಿಕೆಟ್ ಕಳೆದುಕೊಂಡರೂ, ಫೋಬೆ ಲಿಚ್‌ಫೀಲ್ಡ್ (119) ಶತಕ ಸಿಡಿಸಿದರು. ಎಲ್ಲಿಸ್ ಪೆರ್ರಿ (77) ಮತ್ತು ಗಾರ್ಡ್ನರ್ (63) ಉತ್ತಮ ಬ್ಯಾಟಿಂಗ್‌ನಿಂದ ಆಸೀಸ್ ಬೃಹತ್ ಮೊತ್ತ ಕಲೆಹಾಕಿತು.

Read more Photos on
click me!

Recommended Stories