ಇಸ್ಲಾಮಿಕ್ ದೇಶವಾದರೆ, ಮೋದಿ ಕೆಳಗಿಳಿದರೆ ಭಾರತ ತಂಡಕ್ಕೆ ಬೆಂಬಲ, ಉದ್ಧಟತನ ತೋರಿದ ಪಾಕ್ ನಟಿ!

First Published | Oct 21, 2023, 8:00 PM IST

ಶುಕ್ರವಾರ ಮೆನ್ ಇನ್ ಗ್ರೀನ್ ತಂಡಕ್ಕೆ ಸೋಲಿಲ್ಲ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಮುಗ್ದರಿಸಿತ್ತು. ಇದರಿಂದ ಭಾರಿ ಟ್ರೋಲ್ ಆದ ಪಾಕ್ ನಟಿ ಇದೀಗ ಭಾರತ ವಿರುದ್ಧ ದ್ವೇಷ ಕಾರುವ ಟ್ವೀಟ್ ಮಾಡಿ ಉದ್ಧಟತನ ತೋರಿದ್ದಾರೆ.

ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ಟ್ವೀಟ್ ಮಾಡಿದ ಪಾಕ್ ನಟಿ ಸೆಹರ್ ಶಿನ್ವಾರಿ ಭಾರಿ ಟ್ರೋಲ್ ಆಗಿದ್ದರು.ಟ್ರೋಲ್‌ನಿಂದ ಉರಿದು ಬಿದ್ದಿರುವ ನಟಿ ಇದೀಗ ಭಾರತ ವಿರುದ್ಧ ದ್ವೇಷ ಬಿತ್ತುವ ಟ್ವೀಟ್ ಮಾಡಿ ಉದ್ಧಟನ ತೋರಿದ್ದಾರೆ. 

ಮೆನ್ ಇನ್ ಗ್ರೀನ್(ಪಾಕಿಸ್ತಾನ ತಂಡ) ಶುಕ್ರವಾರ ಆಡಿದರೆ ಸೋಲೆ ಇಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ ವಿರುದ್ದ ಸೋಲು ಕಂಡಿತ್ತು.

Tap to resize

ಇದೀಗ ಭಾರತ ರಿಪಬ್ಲಿಕ್ ಆಫ್ ಇಸ್ಲಾಮಿಕ್ ದೇಶವಾಗಬೇಕು ಅನ್ನೋ ಇಂಗಿತವನ್ನು ಸೆಹರ್ ಶಿನ್ವಾರಿ ವ್ಯಕ್ತಪಡಿಸಿದ್ದಾರೆ. ಭಾರತ ರಿಪಬ್ಲಿಕ್ ಆಫ್ ಇಸ್ಲಾಮಿಕ್ ದೇಶವಾದರೆ ನಾನು ಟೀಂ ಇಂಡಿಯಾವನ್ನು ಬೆಂಬಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇಷ್ಟಕ್ಕೆ ಶಿನ್ವಾರಿ ಸುಮ್ಮನಾಗಿಲ್ಲ. ನರೇಂದ್ರ ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದು ರಾಹುಲ್ ಗಾಂಧಿ ಪ್ರಧಾನಿಯಾದರೆ ನಾನು ಭಾರತ ಕ್ರಿಕೆಟ್ ತಂಡಕ್ಕೆ ಬೆಂಬಲ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
 

ಮುಸ್ಲಿಮರು ಭಾರತವನ್ನು ಪ್ರಧಾನಿ ಮೋದಿಯಿಂದ ಮುಕ್ತಮಾಡಬೇಕು. ಇನ್ನು ಪ್ಯಾಲೆಸ್ತಿನಿಯರು ಇಸ್ರೇಲ್‌ನಿಂದ ಪ್ಯಾಲೆಸ್ತಿನ್ ಮುಕ್ತ ಮಾಡಬೇಕು ಎಂದು ಮತ್ತೊಂದು ಟ್ವೀಟ್ ಮಾಡಿ ದ್ವೇಷ ಬಿತ್ತು ಕೆಲಸ ಮಾಡುತ್ತಿದ್ದಾರೆ.

ಪಾಕ್ ನಟಿ ಸೆಹರಾ ಶೆನ್ವಾರಿ ಪ್ರತಿ ಭಾರಿ ಭಾರತ ವಿರೋಧಿ ಹೇಳಿಕೆ ನೀಡುತ್ತಾ ಜನಪ್ರಿಯರಾಗಿದ್ದಾರೆ. ಅದರಲ್ಲೂ ಪ್ರಧಾನಿ ಮೋದಿ ವಿರುದ್ದ ಟ್ವೀಟ್ ಮೂಲಕವೇ ಪಾಕಿಸ್ತಾನದಲ್ಲಿ ಖ್ಯಾತರಾಗಿದ್ದಾರೆ.

ಭಾರತ ವಿರುದ್ಧದ ಪಾಕಿಸ್ತಾನ ಭರ್ಜರಿ ಗೆಲುವು ದಾಖಲಸಿದೆ. ಪಾಕಿಸ್ತಾನ ಪಟಾಕಿ ಸಂಭ್ರಮ ಆಚರಸಲಿದೆ ಎಂದು ಮುಖಭಂಗಕ್ಕೆ ಒಳಗಾಗಿದ್ದ ನಟಿ ಹಲವು ಭಾರಿ ಭಾರತದಲ್ಲಿ ಟ್ರೋಲ್ ಆಗಿದ್ದಾರೆ.

ಇದೀಗ ಟ್ರೋಲ್ ಮುಖಭಂಗದಿಂದ ಹೊರಬರಲು ಮೋದಿ, ಭಾರತ, ಹಿಂದೂಗಳ ವಿರುದ್ದ ದ್ವೇಷ ಕಾರುತ್ತಿದ್ದಾರೆ. ಇದೀಗ ಪಾಕ್ ನಟಿ ಕಾಶ್ಮೀರ ವಿಚಾರ ಕೆದಕಿ ಮತ್ತೆ ಭಾರತೀಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
 

Latest Videos

click me!