ನಮ್ಮ ದೇಶದ ನೀರೇ ಕುಡಿಯಲ್ವಾ ವಿರಾಟ್ ಕೊಹ್ಲಿ? ಒಂದು ಲೀಟರ್ ಆ ನೀರಿನ ಬೆಲೆ ಎಷ್ಟು ಗೊತ್ತಾ?

First Published | Oct 21, 2023, 6:25 PM IST

ನವದೆಹಲಿ: ಭಾರತದ ಶ್ರೀಮಂತ ಕ್ರಿಕೆಟಿಗ ವಿರಾಟ್ ಕೊಹ್ಲಿ, ಐಶಾರಾಮಿ ಜೀವನವನ್ನು ನಡೆಸುತ್ತಾ ಬಂದಿದ್ದಾರೆ. ಮೈದಾನದಲ್ಲಿ ಹಲವಾರು ಅಪರೂಪದ ದಾಖಲೆಗಳನ್ನು ನಿರ್ಮಿಸುತ್ತಾ ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ, ತಮ್ಮ ಖಾಸಗಿ ಬದುಕು ಕೂಡಾ ಅಷ್ಟೇ ವರ್ಣರಂಜಿತವನ್ನಾಗಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ಫಿಟ್ನೆಸ್ ಹಾಗೂ ಆರೋಗ್ಯದ ಹೆಚ್ಚಿನ ಗಮನ ಕೊಡುತ್ತಾರೆ ಎಂದು ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಾವಿಂದು ವಿರಾಟ್ ಕೊಹ್ಲಿ ಕುಡಿಯಲು ಬಳಸುವ ನೀರು ಎಲ್ಲಿಯದ್ದು? ಬೆಲೆ ಎಷ್ಟು? ಏನದರ ವಿಶೇಷತೆ ಎನ್ನುವುದನ್ನು ನೋಡೋಣ ಬನ್ನಿ
 

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್‌ ತಂಡದ ಅತ್ಯಂತ ಫಿಟ್ ಆಗಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.

ಈ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ  ಭಾರತ ಕ್ರಿಕೆಟ್ ತಂಡದ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಸ್ಥಾಪಿಸಿದ್ದಾರೆ.
 

Tap to resize

ಸದ್ಯ ಸಂಪೂರ್ಣ ಸಸ್ಯಹಾರಿಯಾಗಿ ಬದಲಾಗಿರುವ ವಿರಾಟ್ ಕೊಹ್ಲಿ, ಕ್ರಿಕೆಟ್‌ ಇಲ್ಲದ ಸಮಯದಲ್ಲಿ ಸಾಕಷ್ಟು ಜಿಮ್‌ನಲ್ಲಿ ಕಸರತ್ತು ನಡೆಸುವುದನ್ನು ನಾವೆಲ್ಲರೂ ನೋಡುತ್ತಲೇ ಬಂದಿದ್ಧೇವೆ. ಹೀಗಾಗಿಯೇ ವಿರಾಟ್ ತಮ್ಮ 34ನೇ ವಯಸ್ಸಿನಲ್ಲಿಯೂ ಇಷ್ಟು ಫಿಟ್ ಆಗಿರುವುದು. 

ಇನ್ನು ವಿರಾಟ್ ಕೊಹ್ಲಿ ಕುಡಿಯುವ ನೀರು ನಮ್ಮ ದೇಶದಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ವಿರಾಟ್ ಕೊಹ್ಲಿ ತಮ್ಮ ಕುಡಿಯುವ ನೀರನ್ನು ಫ್ರಾನ್ಸ್ ದೇಶದಿಂದ ತರಿಸಿಕೊಳ್ಳುತ್ತಾರೆ. ಅವರು ಕುಡಿಯವ ಆ ಒಂದು ಲೀಟರ್‌ ಬೆಲೆ ಕೇಳಿದರೆ ನಿಮಗೂ ಅಚ್ಚರಿಯಾಗಬಹುದು.
 

ವಿರಾಟ್ ಕೊಹ್ಲಿ ತಾವು ಕುಡಿಯಲು 'ಎವಿಯನ್' ಎನ್ನುವ ನೈಸರ್ಗಿಕ ನೀರನ್ನು ಫ್ರಾನ್ಸ್‌ನಿಂದ ತರಿಸಿಕೊಳ್ಳುತ್ತಾರೆ. ಇದರ ಒಂದು ಲೀಟರ್ ನೀರಿನ ಬೆಲೆ ಭಾರತೀಯ ರುಪಾಯಿಗಳ ಲೆಕ್ಕದಲ್ಲಿ 4 ಸಾವಿರ ರುಪಾಯಿಗಳಾಗಿವೆ.

'ಎವಿಯನ್' ಎನ್ನುವ ನೈಸರ್ಗಿಕ ನೀರನ್ನು ಜಗತ್ತಿನ ಅತ್ಯಂತ ಪರಿಶುದ್ಧ ನೀರಾಗಿದೆ. ಯೂರೋಪಿನ ಅತಿದೊಡ್ಡ ಸರೋವರವಾದ ಎವಿಯನ್ ಲೆಸ್ ಬೈನ್ಸ್ ಮೂಲದ ಪರಿಶುದ್ದ ನೀರನ್ನು ವಿರಾಟ್ ಕೊಹ್ಲಿ ತಾವು ಕುಡಿಯಲು ಉಪಯೋಗಿಸುತ್ತಾರೆ.
 

ವಿರಾಟ್ ಕೊಹ್ಲಿ ಕುಡಿಯುವ ನೀರು ಒಂದು ರೀತಿಯ ಬ್ಲಾಕ್ ವಾಟರ್ ಆಗಿದೆ. ಏನಿದರ ವಿಶೇಷತೆ ಎಂದರೆ ಕೆಲವು ವರದಿಗಳ ಪ್ರಕಾರ ಈ ನೀರಿನಲ್ಲಿ ಸುಮಾರು 70 ವಿಧದ ಖನಿಜಾಂಶಗಳಿವೆಯಂತೆ.
 

ಬ್ಲಾಕ್ ವಾಟರ್‌ನ ವಿಶೇಷತೆ ಎಂದರೆ, ಇದು ಯಾವಾಗಲು ದೇಹವನ್ನು ಹೈಡ್ರೇಷನ್ ಆಗಿಡುತ್ತದೆ. ಇದು ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಕಾರಣಕ್ಕಾಗಿಯೇ ಬ್ಲಾಕ್ ವಾಟರ್ ತುಂಬಾ ದುಬಾರಿ ನೀರು ಎನಿಸಿಕೊಂಡಿದೆ.

ವಿರಾಟ್ ಕೊಹ್ಲಿ ದಿನವೊಂದಕ್ಕೆ ಸರಿ ಸುಮಾರು 5 ಲೀಟರ್ ಈ ಬ್ಲಾಕ್‌ ವಾಟರ್ ಕುಡಿದರೆ, ದಿನಕ್ಕೆ 20 ಸಾವಿರ ರುಪಾಯಿ ಕುಡಿಯುವ ನೀರಿಗೆ ಖರ್ಚು ಮಾಡುತ್ತಾರೆ. ಇದೇ ಲೆಕ್ಕಾಚಾರದಲ್ಲಿ ವಿರಾಟ್ ಕೊಹ್ಲಿ ಒಂದು ತಿಂಗಳಿಗೆ 1,26,000 ಹಾಗೂ ಒಂದು ವರ್ಷಕ್ಕೆ ಅಂದಾಜು 15 ಲಕ್ಷದ 12 ಸಾವಿರ ರುಪಾಯಿಗಳನ್ನು ಕುಡಿಯುವ ನೀರಿಗೆ ಖರ್ಚು ಮಾಡುತ್ತಾರೆ.
 

Latest Videos

click me!