ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರ್ತಾರಾ? ಹೀಗೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್ ಇಲ್ಲಿದೆ ನೋಡಿ.
ಮುಂಬೈ ಇಂಡಿಯನ್ಸ್‌ನಿಂದ ಒಂದು ಕಾಲು ಹೊರಗಿಟ್ಟಿರುವ ಹಾರ್ದಿಕ್ ಪಾಂಡ್ಯ
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈಗಾಗಲೇ ಒಂದು ಕಾಲು ಮುಂಬೈ ತಂಡದಿಂದ ಹೊರಗಿಟ್ಟಾಗಿದೆ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲವಾಗಿದೆ.
26
ಎಲ್ಲರ ಕಣ್ಣು ಹಾರ್ದಿಕ್ ಪಾಂಡ್ಯ ಮೇಲೆ
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಅಥವಾ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಯಾಕೆಂದರೆ ಈ ಎರಡೂ ತಂಡಗಳು ನಾಯಕ ಹಾಗೂ ಒಳ್ಳೆಯ ಆಲ್ರೌಂಡರ್ ಹುಡುಕಾಟದಲ್ಲಿವೆ. ಹೀಗಾಗಿ ಈ ಎರಡೂ ಫ್ರಾಂಚೈಸಿಗಳು ಪಾಂಡ್ಯ ಮೇಲೆ ಕಣ್ಣಿಟ್ಟಿವೆ.
36
ಪಾಂಡ್ಯ ಬದಲಿಗೆ ಜೈಸ್ವಾಲ್ ಬೇಕು ಎನ್ನುತ್ತಿದೆ ಮುಂಬೈ ಇಂಡಿಯನ್ಸ್
ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್ ಬಳಿ ಆಲ್ ಕ್ಯಾಶ್ ಡೀಲ್(ಹಣ ಪಾವತಿ ಮೂಲಕ ಆಟಗಾರನ ಖರೀದಿ) ಟ್ರೇಡ್‌ಗೆ ಮುಂದಾಗಿದ್ದವು. ಈ ಡೀಲ್‌ಗೆ ಮುಂಬೈ ಒಪ್ಪಿಲ್ಲ. ಆದರೆ ಮುಂಬೈ ಮ್ಯಾನೇಜ್‌ಮೆಂಟ್ ರಾಜಸ್ಥಾನ ರಾಯಲ್ಸ್ ಬಳಿ ಯಶಸ್ವಿ ಜೈಸ್ವಾಲ್ ನಮಗೆ ಕೊಡಿ ಎಂದು ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.
ಇನ್ನು ಇದೆಲ್ಲದರ ನಡುವೆ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ನಡುವೆ ಮತ್ತೆ ಸಹೋದರರ ಬಾಂಧವ್ಯ ಚಿಗುರೊಡೆದಿದ್ದು, ಒಬ್ಬರನ್ನೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಲಾರಂಭಿಸಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸ್ಟ್ಯಾಂಕೋವಿಚ್ ಅವರನ್ನು ಕೃನಾಲ್ ಪಾಂಡ್ಯ ಹಾಗೂ ಅವರ ಪತ್ನಿ ಅನ್‌ಫಾಲೋ ಮಾಡಿದ್ದಾರೆ.
56
ಮುಂಬೈ ದೊಡ್ಡ ಬೇಡಿಕೆಯಿಡುವ ಸಾಧ್ಯತೆ
ಕೃನಾಲ್ ಪಾಂಡ್ಯ ತಮ್ಮ ಸಹೋದರ ಆರ್‌ಸಿಬಿ ತಂಡಕ್ಕೆ ಬರಲಿ ಎನ್ನುವ ಒಲವು ಹೊಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್, ಆರ್‌ಸಿಬಿಯ ಬಿಗ್ ಹಿಟ್ಟರ್ ಟಿಮ್ ಡೇವಿಡ್ ಹಾಗೂ ಮತ್ತೋರ್ವ ಸ್ಟಾರ್ ಆಟಗಾರನಿಗೆ ಬೇಡಿಕೆಯಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
66
ಚೆಂಡು ಆರ್‌ಸಿಬಿ ಅಂಗಳದಲ್ಲಿ
ಇದೀಗ ಚೆಂಡು ಆರ್‌ಸಿಬಿ ಅಂಗಳದಲ್ಲಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ಕರೆ ತರಲು, ಟಿಮ್ ಡೇವಿಡ್ ಅವರನ್ನು ಕಳೆದುಕೊಳ್ಳಲಿದೆಯೇ? ಅಥವಾ ಒಂದು ವೇಳೆ ಇಂತ ಆಫರ್ ಬಂದರೆ ಆರ್‌ಸಿಬಿ ರಿಜೆಕ್ಟ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.