ಕ್ರಿಕೆಟಿಗ ಶಿಖರ್ ಧವನ್ ಶನಿವಾರ, ಆಗಸ್ಟ್ 24 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅವರ ಗಬ್ಬರ್ ಹೆಸರು ಟ್ರೆಂಡ್ ಆಗಲು ಮತ್ತೆ ಶುರುವಾಯಿತು. ಈ ಹೆಸರಿನ ಹಿಂದಿನ ಕಥೆ ಏನು ಗೊತ್ತಾ?
ಟೀಂ ಇಂಡಿಯಾದ 'ಗಬ್ಬರ್' ಅಂದರೆ ಶಿಖರ್ ಧವನ್ ಶನಿವಾರ, ಆಗಸ್ಟ್ 24 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು 2022 ರಲ್ಲಿ ಆಡಿದ್ದರು. ಅಂದಿನಿಂದ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
1975 ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಚಿತ್ರ 'ಶೋಲೆ'ಯಲ್ಲಿ 'ಗಬ್ಬರ್' ಪಾತ್ರವನ್ನು ನಿರ್ವಹಿಸುವ ಮೂಲಕ ನಟ ಅಮಜದ್ ಖಾನ್ ಅವರು ಅದನ್ನು ಜನಪ್ರಿಯಗೊಳಿಸಿದರು. ಶಿಖರ್ ಧವನ್ ಅವರನ್ನು ಅವರ ದೆಹಲಿಯ ಸ್ನೇಹಿತರು ಇದೇ ಹೆಸರಿನಿಂದ ಕರೆಯುತ್ತಿದ್ದರು.
ಮೈದಾನದಲ್ಲಿ ಶಿಖರ್ ಧವನ್ ಆಟದ ಶೈಲಿ ಆಕ್ರಮಣಕಾರಿಯಾಗಿತ್ತು. ಬೌಲರ್‌ಗಳ ಎದುರು ನಿರ್ಭೀತರಾಗಿ ನಿಲ್ಲುತ್ತಿದ್ದರು. ಅವರ ಈ ಶೈಲಿ ಸ್ನೇಹಿತರಿಗೆ ಗಬ್ಬರ್ ಸಿಂಗ್ ಅವರನ್ನು ನೆನಪಿಸುತಿತ್ತು.
ರಣಜಿ ಟ್ರೋಫಿಯ ಒಂದು ಪಂದ್ಯದಲ್ಲಿ ದೆಹಲಿ ಪರ ಆಡುತ್ತಿದ್ದ ಶಿಖರ್ ಧವನ್ ಸ್ಲಿಪ್‌ನಲ್ಲಿ ನಿಂತಿದ್ದರು. ಅಲ್ಲಿಂದ ಕಾಮೆಂಟರಿ ಮಾಡಿ ಬ್ಯಾಟ್ಸ್‌ಮನ್‌ಗಳನ್ನು ಗೇಲಿ ಮಾಡುತ್ತಿದ್ದರು. ಆಗ ಅವರ ಕಾಮೆಂಟರಿಯಲ್ಲಿ ಶೋಲೆ ಚಿತ್ರದ ಸಂಭಾಷಣೆ ಇತ್ತು
ಶಿಖರ್ ಧವನ್ ಕಾಮೆಂಟರಿಯಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಗೇಲಿ ಮಾಡುವಾಗ 'ಶೋಲೆ' ಚಿತ್ರದ 'ಬಹುತ್ ಯಾರಾನಾ ಹೈ ಸೂರ್ ಕೆ ಬಚ್ಚೋ' ಎಂಬ ಸಂಭಾಷಣೆಯನ್ನು ಪದೇ ಪದೇ ಹೇಳುತ್ತಿದ್ದರು. ಈ 6 ಪದಗಳಿಂದ ಅವರ ಹೆಸರು ಗಬ್ಬರ್ ಎಂದು ಬದಲಾಗಿ ಹೋಯ್ತು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು 'ಶೋಲೆ' ಚಿತ್ರದ ಸಂಭಾಷಣೆ ಹೇಳುತ್ತಿದ್ದಾಗ, ಅವರ ಕೋಚ್ ವಿಜಯ್, ತಮಗೆ ಗಬ್ಬರ್ ಎಂದು ಹೆಸರಿಟ್ಟರು, ಅದು ನಂತರ ಬಹಳ ಪ್ರಸಿದ್ಧವಾಯಿತು ಎಂದು ಹೇಳಿದ್ದರು
13 ವರ್ಷಗಳ ವೃತ್ತಿಜೀವನದಲ್ಲಿ ಶಿಖರ್ ಧವನ್ 34 ಟೆಸ್ಟ್‌ಗಳಲ್ಲಿ 40.61 ಸರಾಸರಿಯಲ್ಲಿ 2,315 ರನ್, 167 ಏಕದಿನ ಪಂದ್ಯಗಳಲ್ಲಿ 44.11 ಸರಾಸರಿಯಲ್ಲಿ 7,436 ರನ್ ಮತ್ತು 68 ಟಿ20 ಪಂದ್ಯಗಳಲ್ಲಿ 1,759 ರನ್ ಗಳಿಸಿದ್ದಾರೆ.