ಎಲ್ಲಿದ್ದಾರೆ ಯೂನಿವರ್ಸಲ್‌ ಬಾಸ್‌ ? IPL ಯಾಕೆ ಆಡುತ್ತಿಲ್ಲ Chris Gayle ?

First Published | Apr 15, 2022, 7:47 PM IST

ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ (IPL 2022)ಸೀಸನ್ ಬಿಸಿ ದಿನದಿಂದ  ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನವೂ ಕುತೂಹಲಕಾರಿ ಪಂದ್ಯಗಳು ನಡೆಯುತ್ತಿವೆ. ಆದರೆ ಈ ಬಾರಿ ಐಪಿಎಲ್‌ನಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್‌ ಮತ್ಎತು ಬಿ ಡಿವಿಲಿಯರ್ಸ್ ಕೊರತೆಯು ತುಂಬಾ ಕಾಡುತ್ತಿದೆ. ಏಕೆಂದರೆ ಈ ಇಬ್ಬರೂ ಆಟಗಾರರು ಐಪಿಎಲ್ 2022 ರ ಭಾಗವಾಗಿಲ್ಲ. ಹಾಗಾದರೆ ಈಗ   ಕ್ರಿಸ್ ಗೇಲ್ ( Chris Gayle) ಈಗ ಎಲ್ಲಿದ್ದಾರೆ ?

ಕ್ರಿಸ್ ಗೇಲ್ ಐಪಿಎಲ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಪರ ಆಡಿದ್ದಾರೆ.
 

ಈ ಬಾರಿ ಐಪಿಎಲ್‌ಗೆ ಸೇರದಿರಲು ಗೇಲ್ ಕಾರಣವನ್ನು ಬಹಿರಂಗಪಡಿಸಿಲ್ಲ. ಆದರೆ ಅವರು ಬಯೋ ಬಬಲ್‌ನಿಂದ ಬೇಸತ್ತಿದ್ದಾರೆ. ಅಲ್ಲಿ ಕ್ರಿಕೆಟಿಗರು ಪಂದ್ಯಾವಳಿಯ ಸಮಯದಲ್ಲಿ ಬಯೋ ಬಬಲ್‌ನಲ್ಲಿ ಉಳಿದುಕೊಳ್ಳಬೇಕು ಅಂತಹ ಪರಿಸ್ಥಿತಿ ಆಟಗಾರನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಗೇಲ್ ಮಾತು.

Tap to resize

 ಕ್ರಿಸ್ ಗೇಲ್ ಕಳೆದ ವರ್ಷ ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದರು, ಆದರೆ ಅವರು ತಮ್ಮ ತಂಡದಲ್ಲಿ ಆಡುವ ಹನ್ನೊಂದು ಆಟಗಾರರಲ್ಲಿ ನಿಯಮಿತ ಸ್ಥಾನವನ್ನು ಕಂಡುಕೊಳ್ಳಲಿಲ್ಲ. ಐಪಿಎಲ್ 2020 ರಲ್ಲಿ, ಅವರು ಕೇವಲ 7 ಪಂದ್ಯಗಳನ್ನು ಆಡಲು ಸಾಧ್ಯವಾಯಿತು ಮತ್ತು ಐಪಿಎಲ್ 2021 ರಲ್ಲಿ ಅವರು 10 ಪಂದ್ಯಗಳಲ್ಲಿ ಕೇವಲ 193 ರನ್ ಗಳಿಸಿದರು. 

ಕ್ರೀಸ್‌ ಗೋಲ್‌ ಅವರು ಐಪಿಎಲ್ 2022 ರಿಂದ ಹೊರಬರಲು ನಿರ್ಧರಿಸಿದರು ಎಂದು ವರದಿಗಳು ಹೇಳುತ್ತವೆ .ಅವರು ಈ ಸಮಯದಲ್ಲಿ ಜಮೈಕಾದಲ್ಲಿ ಬಹಳಷ್ಟು ಪಾರ್ಟಿ  ಮಾಡುತ್ತಾ ಲೈಫ್‌ ಎಂಜಾಯ್‌ ಮಾಡುತ್ತಿದ್ದಾರೆ

ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಇರುವ  ಕ್ರಿಸ್ ಗೇಲ್ ಶುಕ್ರವಾರ ತಮ್ಮ ಕೆಲವು ಫೋಟೋಗಳನ್ನು Instagram ನಲ್ಲಿ ಪೋಸ್ಟ್‌ ಮಾಡಿದ್ದಾರೆ ರೆ. ಇದರಲ್ಲಿ ಅವರು ಕೈಯಲ್ಲಿ ವೈನ್ ಗ್ಲಾಸ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. 

ಈ ಫೋಟೋಗಳನ್ನು ಹಂಚಿಕೊಳ್ಳುತ್ತಾ, 'ನಾನು ಈಗ ಜಗತ್ತಿನಲ್ಲಿ ಎಲ್ಲಿಯಾದರೂ ಇರಬಲ್ಲೆ, ಆದರೆ ನಾನು ಇಲ್ಲಿ ವಾಸಿಸುತ್ತಿದ್ದೇನೆ. ಜೀವನಕ್ಕಾಗಿ ಧನ್ಯವಾದಗಳು' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಯೂನಿವರ್ಸಲ್ ಬಾಸ್‌ನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ ಮತ್ತು ಅವರ ಅಭಿಮಾನಿಗಳು ಐಪಿಎಲ್ 2022 ರಲ್ಲಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಇದಕ್ಕೂ ಮೊದಲು, ಯುನಿವರ್ಸಲ್ ಬ್ರದರ್ಸ್ ಕ್ರಿಸ್ ಗೇಲ್ ಜಮೈಕಾದ ಓಟಗಾರ ಮತ್ತು ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಅವರನ್ನು ಭೇಟಿಯಾದರು. 4 ದಿನಗಳ ಹಿಂದೆ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಗೇಲ್‌  ತಮ್ಮ ಕ್ರೀಡೆಯೊಂದಿಗೆ ತಮ್ಮ ಜೀವನಶೈಲಿಗಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಮದ್ಯ, ಸ್ಟೈಲ್‌ ಮತ್ತು ಪಾರ್ಟಿ ಮಾಡುವುದು ಕ್ರಿಸ್ ಗೇಲ್ ಅವರ ಜೀವನದ ಒಂದು ಭಾಗವಾಗಿದೆ ಮತ್ತು ಅವರು ಆಗಾಗ್ಗೆ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದನ್ನು ಕಾಣಬಹುದು.

42 ವರ್ಷದ ಕ್ರಿಸ್ ಗೇಲ್ ಅವರ ಐಪಿಎಲ್ ವೃತ್ತಿಜೀವನದಲ್ಲಿ 142 ಪಂದ್ಯಗಳಲ್ಲಿ 4965 ರನ್ ಗಳಿಸಿದ್ದಾರೆ. ಗೇಲ್ ಅವರ ಹೆಸರಿನಲ್ಲಿ 6 ಶತಕ ಮತ್ತು 31 ಅರ್ಧ ಶತಕಗಳಿವೆ. ಈ ಸಮಯದಲ್ಲಿ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 175. ಐಪಿಎಲ್‌ನಲ್ಲಿ 18 ವಿಕೆಟ್‌ಗಳನ್ನೂ ಪಡೆದಿದ್ದಾರೆ.

Latest Videos

click me!