ಐಪಿಎಲ್ 2026ರ ಹರಾಜಿನ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಒಂದು ಕಠಿಣ ನಿರ್ಧಾರವನ್ನು ಎದುರಿಸುತ್ತಿದೆ. ಸಿಎಸ್‌ಕೆ ಫ್ರಾಂಚೈಸಿಯು ಪ್ರಮುಖ ವೇಗಿ ಪತಿರಾನ ಅವರನ್ನು ಕೈಬಿಡಲು ಚಿಂತಿಸುತ್ತಿದೆ ಎಂದು ವರದಿಯಾಗಿದೆ.
ಮತೀಶ ಪತಿರಾನಾ ಡೆತ್ ಓವರ್‌ಗಳ ಸ್ಪೆಷಲಿಸ್ಟ್ ಆಗಿ ಹೆಸರು ಮಾಡಿದ್ದಾರೆ. ಅವರ ವಿಶಿಷ್ಟ ಬೌಲಿಂಗ್ ಶೈಲಿ ಮತ್ತು ನಿಖರ ಯಾರ್ಕರ್‌ಗಳು ಅವರನ್ನು ನಂಬಿಕಸ್ಥ ಬೌಲರ್ ಆಗಿಸಿವೆ. ಮಿನಿ ಹರಾಜಿನಲ್ಲಿ ಇಂತಹ ಇನ್ನೊಬ್ಬ ಡೆತ್ ಬೌಲರ್ ಸಿಗುವುದು ತುಂಬಾ ಕಷ್ಟ.
23
ಮತ್ತೆ ಖರೀದಿಸಲು ಹೆಚ್ಚು ಹಣ ತೆರುವ ಅಪಾಯ!
ಪತಿರಾನಾರನ್ನು ಬಿಟ್ಟು ಕಡಿಮೆ ಬೆಲೆಗೆ ಮತ್ತೆ ಖರೀದಿಸಲು CSK ಯೋಚಿಸಬಹುದು. ಆದರೆ ಮಿನಿ ಹರಾಜಿನಲ್ಲಿ ಉತ್ತಮ ವಿದೇಶಿ ವೇಗಿಗಳ ಕೊರತೆಯಿಂದಾಗಿ KKR, LSG, PBKS ನಂತಹ ತಂಡಗಳು ಹೆಚ್ಚು ಹಣ ನೀಡಬಹುದು. ಹೀಗಾದ್ರೆ CSK ಮತ್ತೆ ಅಷ್ಟೇ ಅಥವಾ ಹೆಚ್ಚು ಹಣ ತೆರಬೇಕಾಗಬಹುದು.
33
ಹುಡುಕಿ ಬೆಳೆಸಿದ ಪ್ರತಿಭೆಯನ್ನು ಕೈಬಿಡುವುದು ಒಳ್ಳೆಯದಲ್ಲ
ಪತಿರಾನರನ್ನು CSK ತಂಡವೇ ಗುರುತಿಸಿ, ಬೆಳೆಸಿದೆ. 2023ರಲ್ಲಿ 19 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಂದೇ ಒಂದು ಕಳಪೆ ಸೀಸನ್‌ಗಾಗಿ ಇಂತಹ ಆಟಗಾರನನ್ನು ಕೈಬಿಡುವುದು ತಂಡ ಮಾಡಿದ ಹೂಡಿಕೆಯನ್ನು ವ್ಯರ್ಥ ಮಾಡಿದಂತೆ.