‘ನಾನೇನ್‌ ಪೂಜೆ ಮಾಡೋವ್ನ ಥರ ಕಾಣ್ತೀನಾ?’ ಎಂದಿದ್ದ Virat Kohli ಈಗ ಜಪ ಎಣಿಕೆ ಮಶಿನ್‌ ಧರಿಸ್ತಿರೋದ್ಯಾಕೆ?

Published : May 24, 2025, 03:53 PM ISTUpdated : May 29, 2025, 03:47 PM IST

ಕ್ರಿಕೆಟರ್ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಆಧ್ಯಾತ್ಮಿಕ ಜೀವನಕ್ಕೆ ಯಾಕೆ ಅಷ್ಟು ಮಹತ್ವ ಕೊಡುತ್ತಾರೆ?‌ ಕೈಯಲ್ಲಿ ಜಪ ಎಣಿಕೆ ಮಶಿನ್‌ ಧರಿಸಿ ವೃಂದಾವನ, ದೇವಸ್ಥಾನಕ್ಕೆ ಯಾಕೆ ಭೇಟಿ ಕೊಡ್ತಾರೆ? 

PREV
16
ಸ್ಟೈಲಿಶ್‌ ಹುಡುಗ ಆಧ್ಯಾತ್ಮದತ್ತ...!

ಆಗ ವಿರಾಟ್‌ ಕೊಹ್ಲಿ ವೈಸ್‌ ಇಂಡಿಯಾ ಕ್ಯಾಪ್ಟನ್‌ ಆಗಿದ್ದ ಟೈಮ್. ‌ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು “ನೀವು ಮ್ಯಾಚ್‌ಗೂ ಮುನ್ನ ಪ್ರಾರ್ಥನೆ, ಪೂಜೆ ಮಾಡ್ತೀರಾ?” ಎಂದು ಪ್ರಶ್ನೆ ಕೇಳಿದ್ದರು. ಆಗ ವಿರಾಟ್‌ ಕೊಹ್ಲಿ, “ನಾನು ನಿಮಗೆ ಪೂಜೆ ಮಾಡುವವನ ಥರ ಕಾಣಸ್ತೀನಾ?” ಅಂತ ಪ್ರಶ್ನೆ ಮಾಡಿದ್ದರು. ಇಂದು ಮದುವೆಯಾಗಿ, ಎರಡು ಮಕ್ಕಳ ತಂದೆ ಪದೇ ಪದೇ ದೇವಸ್ಥಾನಗಳಿಗೆ ಭೇಟಿ ಕೊಡ್ತಾರೆ, ಆಶ್ರಮಗಳಿಗೆ ಹೋಗ್ತಾರೆ, ಅಷ್ಟೇ ಅಲ್ಲದೆ ಜಪ ಎಣಿಕೆ ಮಶಿನ್‌ನ್ನು ಕೈಗೆ ಧರಿಸ್ತಾರೆ. ಹಾಗಾದರೆ ವಿರಾಟ್‌ ಯಾಕೆ ಇಷ್ಟು ಬದಲಾದರು?

26
ನನ್ನ ಪ್ರಯತ್ನಕ್ಕೆ ಫಲ ಸಿಗತ್ತೆ

“ನಾನು ಟ್ಯಾಟೂ ಹಾಕಿಕೊಂಡ ಹುಡುಗ, ನಾನು ಸ್ಟೈಲಿಶ್‌ ಬಟ್ಟೆಗಳನ್ನು ಹಾಕ್ತೀನಿ. ಹೀಗಾಗಿ ನನ್ನ ಬಗ್ಗೆ ನೆಗೆಟಿವ್‌ ಯೋಚನೆ ಮಾಡೋದು ಸುಲಭ. ನನಗೆ ಕ್ರಿಕೆಟ್‌ನಲ್ಲಿ ಸುಧಾರಿಸಬೇಕು. ನನ್ನ ಪರಿಶ್ರಮ, ಪ್ರಯತ್ನಕ್ಕೆ ಒಂದು ದಿನ ಫಲ ಸಿಗುತ್ತದೆ ಎಂದು ನಾನು ನಂಬ್ತೀನಿ” ಎಂದು ಹೇಳಿದ್ದರು.

36
ನಿವೃತ್ತಿ ಘೋಷಿಸಿ ವೃಂದಾವನಕ್ಕೆ ಹೋದ್ರು

ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ ಒಂದು ದಿನದ ಬಳಿಕ, ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಉಜ್ಜಯಿನಿಯ ಮಹಾಕಾಲೇಶ್ವರ ದೇವಾಲಯ, ಉತ್ತರಾಖಂಡದ ನೀಮ್ ಕರೋಲಿ ಬಾಬಾ ಆಶ್ರಮ, ಈಗ ವೃಂದಾವನಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ಟ್ಯಾಕ್ಸಿಯಲ್ಲಿ ಮಾಸ್ಕ್ ಧರಿಸಿ, ಸರಳ ಉಡುಗೆಯಲ್ಲಿ ಬಂದಿದ್ದ ವಿರಾಟ್‌ ಕೊಹ್ಲಿ ಅವರು ಮಂತ್ರ ಜಪಕ್ಕೆ ಬಳಸುವ ಡಿಜಿಟಲ್ ಕೌಂಟರ್ ಹಿಡಿದಿದ್ದರು. ಇದು ಎಲ್ಲರ ಗಮನಸೆಳೆದಿದೆ. ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ ಜಿ ಮಹಾರಾಜ್ ಅವರ ಬಳಿ ಈ ದಂಪತಿ ಒಂದಷ್ಟು ಹೊತ್ತು ಮಾತನಾಡಿ, ಸಲಹೆ ಪಡೆದುಕೊಂಡು ಬಂದಿದೆ.

46
ಕ್ಯಾಮರಾದಿಂದ ಮಕ್ಕಳನ್ನು ದೂರ ಇಟ್ಟ ಜೋಡಿ!

ನಟಿ ಅನುಷ್ಕಾ ಶರ್ಮಾ ಅವರೇ ಕೊಹ್ಲಿಯನ್ನು ಈ ಆಧ್ಯಾತ್ಮಿಕ ಪ್ರಪಂಚಕ್ಕೆ ಪರಿಚಯಿಸಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದಾರೆ. ಮಕ್ಕಳಾದ ವಮಿಕಾ, ಅಕಾಯ್‌ರನ್ನು ಪಬ್ಲಿಕ್‌ ಜೀವನ ಹಾಗೂ ಕ್ಯಾಮರಾ ಕಣ್ಣಿನಿಂದ ದೂರ ಇಟ್ಟಿರುವ ಈ ಜೋಡಿ, ಆಧ್ಯಾತ್ಮಿಕ ಯಾತ್ರೆಗಳನ್ನು ತಮ್ಮ ಜೀವನದ ಭಾಗ ಮಾಡಿಕೊಂಡಿದ್ದಾರೆ.

56
ಹರ ಹರ ಮಹಾದೇವ್‌ ಎಂದು ಕೂಗಿದ್ದ ಕೊಹ್ಲಿ

ವಿರಾಟ್ ಕೊಹ್ಲಿಯ ಆಧ್ಯಾತ್ಮಿಕ ಜೀವನದಲ್ಲಿ ಮಹಾಕಾಲೇಶ್ವರ ದೇವಾಲಯದ ಭೇಟಿಯು ಒಂದು ಪ್ರಮುಖ ಕ್ಷಣವಾಗಿತ್ತು. ಒಮ್ಮೆ ಧಾರ್ಮಿಕ ಗುರುತನ್ನು ತಿರಸ್ಕರಿಸಿದ್ದ ಕೊಹ್ಲಿ, ದೇವಾಲಯದಿಂದ ಹೊರಗೆ ಬಂದಾಗ “ಹರ್ ಹರ್ ಮಹಾದೇವ್” ಎಂದು ಕೂಗಿದ್ದರು.‌ ಯಾವ ಕಾರಣಕ್ಕೆ ಆಧ್ಮಾತ್ಮದತ್ತ ಅವರು ತಿರುಗಿದರು ಎನ್ನುವ ಪ್ರಶ್ನೆಗೆ ಅವರಿನ್ನೂ ಉತ್ತರ ಕೊಟ್ಟಿಲ್ಲ. ಪ್ರೇಮಾನಂದ ಮಹಾರಾಜ್ ಬೋಧನೆಗಳು ವಿರಾಟ್ ಕೊಹ್ಲಿಯ ಜೀವನ, ಕ್ರಿಕೆಟ್‌ನಲ್ಲಿ ಭಾವನಾತ್ಮಕ ಸಮತೋಲನವನ್ನು ತಂದಿವೆ ಎಂದು ಹೇಳಲಾಗುತ್ತಿದೆ.

66
ನೀಮ್ ಕರೋಲಿ ಬಾಬಾ ಆಶ್ರಮ‌ದಲ್ಲಿ ಕೊಹ್ಲಿ

ಸ್ಟೀವ್ ಜಾಬ್ಸ್, ಮಾರ್ಕ್ ಜಕರ್‌ಬರ್ಗ್‌ನಂತಹ ಜಾಗತಿಕ ಚಿಂತಕರಿಂದ ಗೌರವಿಸಲ್ಪಟ್ಟ ನೀಮ್ ಕರೋಲಿ ಬಾಬಾ ಆಶ್ರಮ‌ವು ಅಥವಾ ಆಧ್ಯಾತ್ಮಿಕ ಕೇಂದ್ರವು ವಿರಾಟ್ ಕೊಹ್ಲಿಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿತ್ತು. . ಈ ಭೇಟಿಯ ನಂತರ ಕೊಹ್ಲಿಯಲ್ಲಿ ಒಂದು ಮೃದುವಾದ, ಆತ್ಮಾವಲೋಕನದ ಶಕ್ತಿಯು ಹೊರಹೊಮ್ಮಿತು ಎನ್ನುತ್ತಾರೆ. ಇನ್ನು ವಿರಾಟ್‌ ಕೊಹ್ಲಿ ಟ್ಯಾಟೂನಲ್ಲಿ ಶಿವನ ಚಿತ್ರ ಇದೆ ಎಂದು ಹೇಳಲಾಗುತ್ತಿದೆ. ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

Read more Photos on
click me!

Recommended Stories