ಕೊಡಗಿನ ಮೊಮ್ಮಗಳು ಸನ್‌ರೈಸರ್ಸ್ ಹೈದರಾಬಾದ್ ಟೀಂ ಸಿಇಒ ಕಾವ್ಯ ಮಾರನ್‌!

Published : Dec 22, 2023, 11:31 AM IST

ಕ್ರಿಕೆಟ್ ಮತ್ತು ಗ್ಲಾಮರ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ಡೈನಾಮಿಕ್ ಜಗತ್ತಿನಲ್ಲಿ, ಎದ್ದುಕಾಣುವ ಹೆಸರು ಅದು ಕಾವ್ಯ ಮಾರನ್. ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಕಾವ್ಯ ಉದ್ಯಮಿ ಮಾತ್ರವಲ್ಲದೆ ಕ್ರಿಕೆಟ್ ಕ್ಷೇತ್ರದಲ್ಲಿ ಪರಿಚಿತ ಹೆಸರು. ಕೊಡಗಿಗೂ ಈಕೆಗೂ ಅವಿನಾಭಾವ ನಂಟು.

PREV
19
ಕೊಡಗಿನ ಮೊಮ್ಮಗಳು ಸನ್‌ರೈಸರ್ಸ್ ಹೈದರಾಬಾದ್ ಟೀಂ ಸಿಇಒ ಕಾವ್ಯ ಮಾರನ್‌!

ಕಾವ್ಯಾ ಕ್ರಿಕೆಟ್ ಉತ್ಸಾಹಿಗಳಿಗೆ ಪರಿಚಿತ ಮುಖ, ಆಗಾಗ ಐಪಿಎಲ್ ಹರಾಜು ಮತ್ತು ಪಂದ್ಯಗಳಲ್ಲಿ ಗುರುತಿಸಲ್ಪಡುತ್ತಾರೆ, ಹೈದರಾಬಾದ್ ಫ್ರಾಂಚೈಸಿಗಾಗಿ ಉತ್ಸಾಹದಿಂದ ಹುರಿದುಂಬಿಸುತ್ತಾರೆ. ಸನ್‌ರೈಸರ್ಸ್ ಹೈದರಾಬಾದ್ ಮೈದಾನದಲ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿದ್ದರೂ, ಮೈದಾನದ ಹೊರಗೆ ಕಾವ್ಯ ಅವರ ಉಪಸ್ಥಿತಿಯು  ತಂಡಕ್ಕೆ ಉತ್ಸಾಹ ತರಿಸಿದೆ.

29

 ಕಾವ್ಯಾ ಅವರ ನಾಯಕತ್ವದ ಅಡಿಯಲ್ಲಿ SRH ಫ್ರಾಂಚೈಸ್ ತನ್ನ ಆನ್-ಫೀಲ್ಡ್ ಪರಾಕ್ರಮಕ್ಕಾಗಿ ಮಾತ್ರವಲ್ಲದೆ ಆಕೆಯೊಬ್ಬ ಸುಂದರ ಸಿಇಒ ಅವರ ಮುದ್ದಾದ ಪ್ರತಿಕ್ರಿಯೆ ಬಹಳ ಜನಕ್ಕೆ ಇಷ್ಟ.  ಹೀಗಾಗಿ ಅವರು ಎಂದಿಗೂ ಅಭಿಮಾನಿಗಳು ಮತ್ತು ನೋಡುಗರ ಗಮನವನ್ನು ಸೆಳೆಯಲು ವಿಫಲರಾಗುವುದಿಲ್ಲ. 

39

ಕಾವ್ಯಾ ಕ್ರಿಕೆಟ್ ಜಗತ್ತಿನಲ್ಲಿ ಕೇವಲ ಸುಂದರ ಮುಖವಲ್ಲ. ಕ್ರೀಡಾ ಕ್ಷೇತ್ರದ  ಪ್ರಸಿದ್ಧ ವ್ಯಕ್ತಿತ್ವದ ಹೊರತಾಗಿಯೂ, ಅವರು ತಮ್ಮ ವೈಯಕ್ತಿಕ ಜೀವನವನ್ನು ತುಲನಾತ್ಮಕವಾಗಿ ಖಾಸಗಿಯಾಗಿ ಇರಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಪ್ರತಿ ಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಯುಗದಲ್ಲಿ, ಕಾವ್ಯಾ ತನ್ನ ವೈಯಕ್ತಿಕ ಜೀವನದ ಬಗ್ಗೆ ನಿಗೂಢತೆಯನ್ನು ಕಾಪಾಡಿಕೊಳ್ಳುವ ಮೂಲಕ ಎದ್ದು ಕಾಣುತ್ತಾಳೆ.

49

ತಮಿಳುನಾಡಿನ ಚೆನ್ನೈನಲ್ಲಿ 6 ಆಗಸ್ಟ್ 1992 ರಂದು ಜನಿಸಿದ ಕಾವ್ಯಾ, 'ಸನ್ ನೆಟ್‌ವರ್ಕ್'ನ ಸಂಸ್ಥಾಪಕ ಬಿಲಿಯನೇರ್ ಕಲಾನಿತಿ ಮಾರನ್ ಮತ್ತು ಪ್ರಭಾವಿ ಮಹಿಳಾ ಉದ್ಯಮಿ ಕಾವೇರಿ ಮಾರನ್ ಅವರ ಪುತ್ರಿ. ಆಕೆಯ ಕುಟುಂಬದ ಪ್ರಭಾವವು ವ್ಯಾಪಾರ ಕ್ಷೇತ್ರವನ್ನು ಮೀರಿ ವಿಸ್ತರಿಸಿದೆ, ಆಕೆಯ ಅಜ್ಜ ಮುರಸೋಲಿ ಮಾರನ್ ಅವರು ಮಾಜಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದರು. 

59

ಮಾರನ್ ಕುಟುಂಬವು ಶ್ರೀಮಂತ ಪರಂಪರೆಯನ್ನು ಹೊಂದಿದೆ. ರಾಜಕೀಯ ಪ್ರಾಮುಖ್ಯತೆಯೊಂದಿಗೆ ವ್ಯಾಪಾರದ ಕೌಶಲ್ಯತೆಯನ್ನು ಕೂಡ ಹೊಂದಿದೆ. ಇದು ಕಾವ್ಯಾಳ ಪ್ರಯಾಣದ ಮೇಲೆ ನಿಸ್ಸಂದೇಹವಾಗಿ ಪ್ರಭಾವ ಬೀರುವುದುದರ ಜೊತೆಗೆ ಭದ್ರ ಅಡಿಪಾಯವನ್ನು ಸೃಷ್ಟಿಸಿದೆ. ಕಾವ್ಯಾ  ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು  ಪೂರೈಸಿದ್ದಾರೆ ಮತ್ತು UK ಯ ಪ್ರತಿಷ್ಠಿತ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್‌ನಿಂದ MBA ಗಳಿಸಿದ್ದಾಳೆ.
 

69

 2018 ರಲ್ಲಿ, ಕಾವ್ಯಾ ಮಾರನ್ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ಸಿಇಒ ಆಗಿ ಕ್ರಿಕೆಟ್‌ ಕ್ಷೇತ್ರಕ್ಕೆ ಕಾಲಿಟ್ಟರು. ಆಕೆಯ ನಾಯಕತ್ವವು ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುವಲ್ಲಿ ಪ್ರಮುಖವಾಗಿದೆ ಮತ್ತು ಐಪಿಎಲ್‌ನಲ್ಲಿ ಎಸ್‌ಆರ್‌ಹೆಚ್ ಅನ್ನು ಲೆಕ್ಕಹಾಕಲು ಶಕ್ತಿಯನ್ನಾಗಿ ಮಾಡಿದೆ. 

79

ಕ್ರಿಕೆಟ್‌ನ ಹೊರತಾಗಿ, ಕಾವ್ಯ ಅವರು ಸನ್ ನೆಟ್‌ವರ್ಕ್‌ನಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ, ಸನ್ ಮ್ಯೂಸಿಕ್ ಮತ್ತು ಎಫ್‌ಎಂ ಚಾನೆಲ್‌ಗಳನ್ನು ನೋಡಿಕೊಳ್ಳುತ್ತಾರೆ. SUN ಪಿಕ್ಚರ್ಸ್ ನಿರ್ಮಿಸಿದ ರಜನಿಕಾಂತ್ ಅಭಿನಯದ "ಜೈಲರ್" ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಅವರು ಮನರಂಜನಾ ಉದ್ಯಮದಲ್ಲಿ ಬಹುಮುಖಿ ಒಳಗೊಳ್ಳುವಿಕೆಯನ್ನು ಎತ್ತಿ ತೋರಿಸಿದರು.

89

ಕಾವ್ಯಾ ಅವರ ಪೋಷಕರು ಕಲಾನಿತಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಕಲಾನಿತಿ ಮಾರನ್ ಅವರು ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯಮಿ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ. ಕಾವೇರಿ ಕಲಾನತಿ ಮಾರನ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಉದ್ಯಮಿಯಾಗಿದ್ದಾರೆ.

99

ಕಾವೇರಿ  ಮಾರನ್‌ ಹುಟ್ಟಿದ್ದು ಮಡಿಕೇರಿಯಲ್ಲಿ. ಇವರು ಜಮ್ಮಡ ಎ. ಬೆಳ್ಳಿಯಪ್ಪ (ಬೊಳ್ಳಿ) ಮತ್ತು ನೀನಾ ದಂಪತಿಯ ಪುತ್ರಿ. ಇವರು ಮಡಿಕೇರಿಯ ಕೈಕೇರಿಯವರು. ಇವರು 1991 ರಲ್ಲಿ  ಕಲಾನಿತಿ ಮಾರನ್ ರನ್ನು ವಿವಾಹವಾದರು.  

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories