IPL 2024: ಹರಾಜಿನಲ್ಲೇ ಅರ್ಧ ಸೋತ ಅರ್‌ಸಿಬಿ..! ಮಾಡಿದ ಎಡವಟ್ಟು ಒಂದೆರಡಲ್ಲ

First Published | Dec 20, 2023, 4:20 PM IST

ದುಬೈ: ಕಳೆದ 16 ಆವೃತ್ತಿಗಳಲ್ಲಿ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದೀಗ ದುಬೈನಲ್ಲಿ ನಡೆದ ಆಟಗಾರರ ಹರಾಜಿನಲ್ಲೇ ಮತ್ತದೇ ಎಡವಟ್ಟು ಮಾಡಿದೆ. ಈ ಮೂಲಕ ಹರಾಜಿನಲ್ಲೇ ಆರ್‌ಸಿಬಿ ಅರ್ಧ ಸೋತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
 

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದು ಎನಿಸಿದೆ. ಆರ್‌ಸಿಬಿ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ.
 

ಕಳೆದ 16 ಐಪಿಎಲ್ ಆವೃತ್ತಿಯಲ್ಲಿ ಪಾಲ್ಗೊಂಡಿದ್ದರೂ ಸಹ ಆರ್‌ಸಿಬಿಗೆ ಇದುವರೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ ಆರ್‌ಸಿಬಿಯ ಶ್ರೇಷ್ಠ ಸಾಧನೆ ಎನಿಸಿಕೊಂಡಿದೆ. 

Tap to resize

ಪ್ರತಿ ಬಾರಿಯು ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಈ ಬಾರಿಯಾದರೂ ಕಪ್ ಗೆಲ್ಲಬಹುದು ಎಂದು ಕಳೆದ ಹಲವಾರು ವರ್ಷಗಳಿಂದ ಕಾಯುತ್ತಾ ಬಂದಿರುವ ಫ್ಯಾನ್ಸ್‌ಗೆ ಪದೇ ಪದೇ ನಿರಾಸೆಯೇ ಎದುರಾಗುತ್ತಲೇ ಇದೆ.

ಸದ್ಯ ಈ ಬಾರಿಯ ಹರಾಜನ್ನು ಗಮನಿಸಿದರೆ, ಆರ್‌ಸಿಬಿ 2024ರ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನವೇ ಅರ್ಧ ಸೋತಿದೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ಆರ್‌ಸಿಬಿ ಕಪ್‌ ಗೆಲ್ಲಲು ಇನ್ನೂ ಒಂದು ವರ್ಷ ಕಾಯಬೇಕಾಗಿ ಬಂದರೂ ಅಚ್ಚರಿಯಿಲ್ಲ.

2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡು ಬಹುತೇಕ ಎಲ್ಲಾ ಪ್ರಮುಖ ಬೌಲರ್‌ಗಳನ್ನು ಕೈಬಿಟ್ಟಿತ್ತು. ಹೀಗಾಗಿ ಆರ್‌ಸಿಬಿ ಹರಾಜಿನಲ್ಲಿ ಒಳ್ಳೆ ಬೌಲರ್ ಖರೀದಿಸಬಹುದು ಎಂದು ಬೆಂಗಳೂರು ಫ್ಯಾನ್ಸ್ ಕುತೂಹಲ ಇಟ್ಟುಕೊಂಡಿದ್ದರು.

ಐಪಿಎಲ್ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಆಸೀಸ್ ಮೂಲದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ 17.50 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
 

ಹೀಗಾಗಿ ಆರ್‌ಸಿಬಿ ಫ್ರಾಂಚೈಸಿಯು ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಉತ್ತಮ ಬೌಲರ್‌ಗಳನ್ನು ಖರೀದಿಸುವ ಪ್ರಯತ್ನ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ.

ಆರ್‌ಸಿಬಿ ಫ್ರಾಂಚೈಸಿಯು ಕೇವಲ 23.25 ಕೋಟಿ ರುಪಾಯಿಗಳನ್ನು ಪರ್ಸ್‌ನಲ್ಲಿ ಉಳಿಸಿಕೊಂಡು ಈ ಮಿನಿ ಹರಾಜಿನಲ್ಲಿ ಪಾಲ್ಗೊಂಡಿತ್ತು. ಆರ್‌ಸಿಬಿ ಆಸೀಸ್ ವೇಗಿಗಳಾದ ಪ್ಯಾಟ್ ಕಮಿನ್ಸ್ ಅಥವಾ ಮಿಚೆಲ್ ಸ್ಟಾರ್ಕ್ ಖರೀದಿಸುವ ಸಾಧ್ಯತೆಯಿದೆ ಎಂದೇ ಭಾವಿಸಲಾಗಿತ್ತು.
 

ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಗೆ ಆಸೀಸ್ ವೇಗಿಗಳಾದ ಪ್ಯಾಟ್ ಕಮಿನ್ಸ್ ಆಗಲಿ ಅಥವಾ ಮಿಚೆಲ್ ಸ್ಟಾರ್ಕ್ ಅವರನ್ನಾಗಲಿ ಖರೀದಿಸಲು ಸಾಧ್ಯವಾಗಲಿಲ್ಲ. ಸ್ಟಾರ್ಕ್‌ 24.75 ಕೋಟಿಗೆ ಕೆಕೆಆರ್ ಪಾಲಾದರು.
 

ವೇಗದ ಬೌಲಿಂಗ್ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ ಅವರನ್ನು ಖರೀದಿಸದೇ ಆರ್‌ಸಿಬಿ ದೊಡ್ಡ ತಪ್ಪು ಮಾಡಿತು. ಶಾರ್ದೂಲ್ ಠಾಕೂರ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿ ಕೇವಲ 4 ಕೋಟಿ ರುಪಾಯಿಗೆ ಖರೀದಿಸುವಲ್ಲಿ ಯಶಸ್ವಿಯಾಯಿತು.

ಆರ್‌ಸಿಬಿ ಫ್ರಾಂಚೈಸಿಯು ವೆಸ್ಟ್ ಇಂಡೀಸ್ ಮೂಲದ ವೇಗಿ ಅಲ್ಜರಿ ಜೋಸೆಫ್ ಅವರಿಗೆ ಬರೋಬ್ಬರಿ 11.50 ಕೋಟಿ ರುಪಾಯಿ ನೀಡಿ ಖರೀಸಿದೆ. ಇದರ ಜತೆಗೆ ಮೂಲ ಬೆಲೆ ಎರಡು ಕೋಟಿಗೆ ಲಾಕಿ ಫರ್ಗ್ಯೂಸನ್‌ ಅವರನ್ನು ಖರೀಸಿದಿದ್ದು ಒಳ್ಳೆ ತೀರ್ಮಾನ ಎನಿಸಿಕೊಂಡಿತು.

Latest Videos

click me!