IPL Final 2023: ಮಳೆ ಬಂದರೆ ಏನಾಗಲಿದೆ? ಇಲ್ಲಿದೆ ಕ್ಷಣ ಕ್ಷಣದ ಮಾಹಿತಿ

First Published | May 28, 2023, 12:11 PM IST

ಅಹಮದಾಬಾದ್‌: 16ನೇ ಆವೃತ್ತಿಯ ಐಪಿಎಲ್‌ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.

ಭಾನುವಾರ ಅಹಮದಾಬಾದ್‌ನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಮಳೆ ಮುನ್ಸೂಚನೆ ಇಲ್ಲ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಏನಾಗಲಿದೆ ಎನ್ನುವ ವಿವರ ಇಲ್ಲಿದೆ.

ಒಂದು ವೇಳೆ ಐಪಿಎಲ್ ಫೈನಲ್‌ ಪಂದ್ಯವು ಮಳೆಯಿಂದಾಗಿ ಭಾನುವಾರ ಆಟ ಆರಂಭಗೊಳ್ಳದೆ ಇದ್ದರೆ ಸೋಮವಾರ ಮೀಸಲು ದಿನದಂದು ಪಂದ್ಯ ನಡೆಸಬಹುದು.

ನಿಗದಿತ 200 ನಿಮಿಷಗಳ ಜೊತೆ ಆಟ ಮುಗಿಸಲು ಹೆಚ್ಚುವರಿ 120 ನಿಮಿಷಗಳು ಸಿಗಲಿವೆ. ಅಂದರೆ ಸಂಜೆ 7.30ಕ್ಕೆ ಆರಂಭಗೊಳ್ಳಬೇಕಿರುವ ಪಂದ್ಯ ಮಳೆಯಿಂದ ವಿಳಂಬವಾದರೆ ಓವರ್‌ ಕಡಿತಗೊಳ್ಳದೆ ಪಂದ್ಯ ಆರಂಭಿಸಲು ರಾತ್ರಿ 9.40ರ ವರೆಗೂ ಸಮಯವಿರಲಿದೆ.

Latest Videos


ಗರಿಷ್ಠ ನಂಬರ್‌ ಓವರ್‌ ಕಡಿತಗೊಳಿಸಲು 5 ಓವರ್‌ ನಿಗದಿ ಪಡಿಸಲಾಗಿದೆ. 5 ಓವರ್‌ ಪಂದ್ಯ ನಡೆಸಲು ರಾತ್ರಿ 11.56ರ ವರೆಗೂ ಸಮಯವಿರಲಿದೆ. 

5 ಓವರ್‌ ಪಂದ್ಯವೂ ಸಾಧ್ಯವಾಗದೆ ಇದ್ದಲ್ಲಿ ಕೇವಲ ಸೂಪರ್‌ ಓವರ್‌ ಆಡಿಸಲೂ ಅವಕಾಶವಿದೆ. ಸೂಪರ್‌ ಓವರ್‌ ಆರಂಭಿಸಲು ಮಧ್ಯರಾತ್ರಿ 12.50ರ ವರೆಗೂ ಸಮಯವಿರಲಿದೆ.

ಭಾನುವಾರ ಪಂದ್ಯ ಆರಂಭಗೊಂಡು ಮಳೆಯಿಂದಾಗಿ ಸ್ಥಗಿತಗೊಂಡರೆ ಮೀಸಲು ದಿನದಂದು ಆಟ ಎಲ್ಲಿ ನಿಂತಿತ್ತೋ ಅಲ್ಲಿಂದಲೇ ಮುಂದುವರಿಯಲಿದೆ.

ಒಂದು ವೇಳೆ ಮೊದಲ ಇನ್ನಿಂಗ್‌್ಸ ಪೂರ್ತಿಯಾಗಿ 2ನೇ ಇನ್ನಿಂಗ್ಸಲ್ಲಿ 5 ಓವರ್‌ ಮುಗಿದಿದ್ದರೆ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ ಫಲಿತಾಂಶ ನಿರ್ಧಾರವಾಗಲಿದೆ.

click me!