Ravi Shastri Birthday: 1 ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ!

First Published May 27, 2023, 5:13 PM IST

ಇಂದು ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri)  ಅವರ 61ನೇ ಹುಟ್ಟುಹಬ್ಬ. 31 ನೇ ವಯಸ್ಸಿನಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರೂ ಇಂದಿಗೂ ಮೈದಾನದಲ್ಲಿ ಇನ್ನೂ ಅವರ  ಜಾದೂ ನಡೆಯುತ್ತಿದೆ. ರವಿಶಾಸ್ತ್ರಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ. 

ಭಾರತ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ರವಿಶಾಸ್ತ್ರಿ, ತಮ್ಮ ವೈಯಕ್ತಿಕ ಜೀವನ ಮತ್ತು ತಮ್ಮ ಆಟದ ಜೊತೆಗೆ ಉತ್ತಮ ಕಾಮೆಂಟರಿಗಾಗಿಯೂ ಹೆಸರುವಾಸಿಯಾಗಿದ್ದಾರೆ. ಐಪಿಎಲ್‌ನಲ್ಲಿ ರವಿಶಾಸ್ತ್ರಿ ಅವರ ಕಾಮೆಂಟರಿ ಪವರ್ ಮುಂದುವರೆದಿದೆ.

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ 27 ಮೇ 1962 ರಂದು ಜನಿಸಿದ ರವಿಶಾಸ್ತ್ರಿ 25 ನವೆಂಬರ್ 1981 ರಂದು ಭಾರತ ತಂಡಕ್ಕೆ ODI ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ ರವಿಶಾಸ್ತ್ರಿ ಟೆಸ್ಟ್ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದರು.

ಇದರ ನಂತರ ಸರಿಯಾಗಿ 4 ವರ್ಷಗಳ ನಂತರ, ಅಂದರೆ 1985 ರಲ್ಲಿ, ರವಿಶಾಸ್ತ್ರಿ ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಶಾಂದಾರಾ ಆಲ್‌ರೌಂಡರ್ ಪ್ರದರ್ಶನ ನೀಡಿದರು, ಇದರಿಂದಾಗಿ ಅವರಿಗೆ ಅತ್ಯುತ್ತಮ ಆಟಗಾರ ಎಂಬ ಬಿರುದು ನೀಡಲಾಯಿತು. 

21 ನೇ ವಯಸ್ಸಿನಲ್ಲಿ, ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ, ಅವರು ಟೀಮ್ ಇಂಡಿಯಾಕ್ಕೆ ಆಯ್ಕೆಯಾದರು. ಚೊಚ್ಚಲ ಟೆಸ್ಟ್‌ನಲ್ಲಿ ರವಿಶಾಸ್ತ್ರಿ 6 ವಿಕೆಟ್‌ಗಳನ್ನು ಕಬಳಿಸಿದರು.
 

ಸ್ಪಿನ್ನರ್ ಮತ್ತು ನಂಬರ್ 10 ಬ್ಯಾಟ್ಸ್‌ಮನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರವಿ ಅವರು  ನಂತರದ ದಿನಗಳಲ್ಲಿ   ತಂಡದ ಆರಂಭಿಕ ಆಟಗಾರನ ಸ್ಥಾನ ಪಡೆದರು. ರವಿಶಾಸ್ತ್ರಿ 10ನೇ ಕ್ರಮಾಂಕದಲ್ಲಿ ಕೆರಿಯರ್‌ ಶುರು ಮಾಡಿ ನಂತರ ತಂಡಕ್ಕೆ ಓಪನಿಂಗ್  ಆಟಗಾರ ಆದರು. 

 ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ಅದ್ಭುತ ಪ್ರದರ್ಶನ ನೀಡಿರುವ ರವಿಶಾಸ್ತ್ರಿ ಅವರು ಆಗಿನ ಕಾಲದಲ್ಲಿ ಈ ತಂಡಗಳ ಅಪಾಯಕಾರಿ ಬೌಲಿಂಗ್  ವಿರುದ್ಧ  ದಿಟ್ಟ ಹೋರಾಟ ನಡೆಸುತ್ತಿದ್ದರು. 

ಇವರು ಒಟ್ಟು 80 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 11 ಶತಕ ಮತ್ತು 12 ಅರ್ಧ ಶತಕಗಳನ್ನು ಗಳಿಸಿದ್ದಾರೆ. ರವಿಶಾಸ್ತ್ರಿ 1 ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಕೂಡ ಹೌದು.
 

1985 ರ ರಣಜಿ ಟ್ರೋಫಿ ಪಂದ್ಯದಲ್ಲಿ ಬರೋಡಾ ವಿರುದ್ಧ ರವಿಶಾಸ್ತ್ರಿ ಸತತ 6 ಸಿಕ್ಸರ್‌ಗಳನ್ನು ಬಾರಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ದಾಖಲೆಯನ್ನೂ ರವಿಶಾಸ್ತ್ರಿ ಹೊಂದಿದ್ದಾರೆ. ಆಗ ರವಿ 113 ನಿಮಿಷಗಳಲ್ಲಿ ದ್ವಿಶತಕ ಗಳಿಸಿದರು. 
 

ರವಿಶಾಸ್ತ್ರಿ ತಮ್ಮ 31ನೇ ವಯಸ್ಸಿನಲ್ಲಿ  ಕ್ರಿಕೆಟ್‌ ಕೆರಿಯರ್‌ನಿಂದ ನಿವೃತ್ತಿ ಪಡೆದರು.  ಆದರೆ ಅವರು ಕಾಮೆಂಟೇಟರ್ ಮತ್ತು ಕೋಚ್ ಆಗಿ ಕ್ರಿಕೆಟ್‌ನೊಂದಿಗೆ ಇಂದಿಗೂ  ಸಂಬಂಧ ಹೊಂದಿದ್ದಾರೆ.

click me!