ನಮಗೆ 3 ಸ್ಟೇಡಿಯಂ ನಿರ್ವಹಿಸಲು ಆಗಲ್ಲ, ಧರ್ಮಶಾಲಾದಂತ ಸ್ಟೇಡಿಯಂ ನಿರ್ಮಾಣ ಕನಸಷ್ಟೇ: ವಾಸೀಂ ಅಕ್ರಂ

First Published | Mar 14, 2024, 12:44 PM IST

ಧರ್ಮಶಾಲಾ: ಹಿಮಾಚಲ ಕ್ರಿಕೆಟ್ ಸಂಸ್ಥೆಯ ಮೈದಾನವಾದ ಧರ್ಮಶಾಲಾದಲ್ಲಿ ಭಾರತ-ಇಂಗ್ಲೆಂಡ್‌ ನಡುವಿನ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ನಡೆದಿತ್ತು. ಈ ರೀತಿ ಸುಂದರ ಸ್ಟೇಡಿಯಂ ಪಾಕಿಸ್ತಾನದಲ್ಲಿ ಯಾಕೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಅಭಿಮಾನಿಯೊಬ್ಬನ ಪ್ರಶ್ನೆಗೆ ಪಾಕ್ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಂ ಕಣ್ಣು ತೆರೆಸುವಂತಹ ಉತ್ತರ ನೀಡಿದ್ದಾರೆ.

ಹಿಮಾಚಲ ಕ್ರಿಕೆಟ್ ಸಂಸ್ಥೆಯ ಮೈದಾನವಾದ ಧರ್ಮಶಾಲಾ ಮೈದಾನವು ಜಗತ್ತಿನ ಅತ್ಯಂತ ಸುಂದರ ಮೈದಾನಗಳಲ್ಲಿ ಒಂದು ಎನಿಸಿದೆ. ಹಿಮಾಲಯ ಪರ್ವತದ ತಪ್ಪಲಿನಲ್ಲಿ ಈ ಮೈದಾನವಿದೆ.
 

ಧರ್ಮಶಾಲಾ ಮೈದಾನವು ಸಮುದ್ರ ಮಟ್ಟದಿಂದ ಸುಮಾರು 1,457 ಮೀಟರ್ ಎತ್ತರದಲ್ಲಿದೆ. ಈ ಸ್ಟೇಡಿಯಂ ಎಂದರೆ ಕೇವಲ ಭಾರತೀಯ ಅಭಿಮಾನಿಗಳಿಗೆ ಮಾತ್ರ ಅಚ್ಚುಮೆಚ್ಚು ಅಲ್ಲ, ವಿದೇಶಿ ತಂಡಗಳಿಗೂ ಹಾಗೂ ಅವರ ಅಭಿಮಾನಿಗಳಿಗೂ ಅಚ್ಚುಮೆಚ್ಚು.

Latest Videos


ಈ ಸುಂದರ ಸ್ಟೇಡಿಯಂನಲ್ಲೇ ಇತ್ತೀಚೆಗಷ್ಟೇ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಹಾಗೂ 5ನೇ ಟೆಸ್ಟ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್‌ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಇನ್ನು ಪಾಕಿಸ್ತಾನದ ಅಭಿಮಾನಿಯೊಬ್ಬ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಂಗೆ, "ನಾವು ಧರ್ಮಶಾಲಾ, ನ್ಯೂಜಿಲೆಂಡ್‌ನ ಕ್ವೀನ್ಸ್‌ಟೌನ್‌ನಂತ ಸ್ಟೇಡಿಯಂ ನೋಡಿದ್ದೇವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಯಾಕೆ ಉತ್ತರದ ಭಾಗಗಳಲ್ಲಿ ಸ್ಟೇಡಿಯಂ ನಿರ್ಮಿಸಲು ಮುಂದಾಗುತ್ತಿಲ್ಲ?" ಎಂದು ಪ್ರಶ್ನಿಸಿದ್ದಾನೆ
 

ಆಗ ಪಾಕ್ ಲೆಜೆಂಡ್ ಅಕ್ರಂ, "ನಮ್ಮಲ್ಲಿ ಈಗಿರುವ ಮೂರು ಸ್ಟೇಡಿಯಂಗಳನ್ನೇ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇನ್ನು ಹೊಸ ಸ್ಟೇಡಿಯಂ ಎಲ್ಲಿಂದ ನಿರ್ಮಾಣ ಮಾಡುತ್ತಾರೆ" ಎಂದು ಪಿಸಿಬಿ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 
 

ಡ್ರೋಣ್ ಮೂಲಕ ತೋರಿಸುವ ಗಢಾಫಿ ಸ್ಟೇಡಿಯಂನ ಛಾವಣಿಯನ್ನು ನೀವು ನೋಡಿದ್ದೀರಾ?. ನಮ್ಮಲ್ಲಿರುವ ಮೂರು ಸ್ಟೇಡಿಯಂ ಮೇಲೆ ನಮಗೆ ಹಿಡಿತವಿಲ್ಲ. ಹೊಸ ಸ್ಟೇಡಿಯಂ ಬಗ್ಗೆ ಕನಸು ಕಾಣಬೇಕಷ್ಟೇ. ನಮ್ಮಲ್ಲಿ ಹೊಸ ಸ್ಟೇಡಿಯಂ ಮಾಡೋಕೆ ಸಾಕಷ್ಟು ಒಳ್ಳೆಯ ಸ್ಥಳಗಳಿವೆ. ಅಬೋಟಬಾದ್‌ ಕೂಡಾ ಸುಂದರ ಮೈದಾನವಾಗಿದೆ ಎಂದು ಅಖ್ತರ್ ಹೇಳಿದ್ದಾರೆ.

ಇನ್ನು ಧರ್ಮಶಾಲಾದಲ್ಲಿ ಏಕಾಏಕಿಯಾಗಿ ಏನೂ ಸ್ಟೇಡಿಯಂ ನಿರ್ಮಾಣವಾಗಲಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ನಿರ್ಮಾಣವಾಗಲು ಒಂದು ದಶಕವೇ ತೆಗೆದುಕೊಂಡಿದೆ. ರಾಜಕೀಯ ಕಾರಣಗಳಿಂದ ಅನುದಾನ ನೀಡುವಲ್ಲೂ ಸಾಕಷ್ಟು ತೊಂದರೆಗಳು ಎದುರಾಗಿದ್ದವು.
 

ಎರಡು ದಶಕಗಳ ಹಿಂದೆ 25 ವರ್ಷ ವಯಸ್ಸಿನ ಅನುರಾಗ್ ಠಾಕೂರ್ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಚುಕ್ಕಾಣಿ ಹಿಡಿದ ಬಳಿಕ ಧರ್ಮಶಾಲಾದಲ್ಲಿ ಸುಂದರ ಸ್ಟೇಡಿಯಂ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
 

click me!