ವಿಶ್ವಕಪ್ ಹೀರೋ
ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಎರಡು ಏಕದಿನ ವಿಶ್ವಕಪ್ ಗೆದ್ದ ಕೆಲವೇ ಕೆಲವು ಭಾರತೀಯರಲ್ಲಿ ಪಠಾಣ್ ಕೂಡಾ ಒಬ್ಬರಾಗಿದ್ದಾರೆ.
ಸ್ಪೋಟಕ ಬ್ಯಾಟರ್:
ಬಲಗೈ ಆಟಗಾರನಾಗಿರುವ ಯೂಸುಫ್ ಪಠಾಣ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಹೆಚ್ಚು ಜನಪ್ರಿಯವಾಗಿದ್ದರು. ಐಪಿಎಲ್‌ನಲ್ಲೂ ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ಪರ ಪಠಾಣ್ ಮಿಂಚಿದ್ದರು.
ರಾಜಕೀಯಕ್ಕೆ ಎಂಟ್ರಿ:
ಯೂಸುಫ್ ಪಠಾಣ್ ಇದೀಗ ಕ್ರಿಕೆಟ್ ಬಳಿಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಪಶ್ಚಿಮಬಂಗಾಳದ ಬೆರಾಮಪೊರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಹಣ-ಪ್ರಖ್ಯಾತಿಯ ಬಲ
ಕ್ರಿಕೆಟಿಗನಾಗಿ ಜನಪ್ರಿಯವಾಗಿರುವ ಯೂಸುಫ್ ಪಠಾಣ್, ಇದರ ಹೊರತಾಗಿ ಆಸ್ತಿಗಳಿಕೆಯ ವಿಚಾರದಲ್ಲೂ ಹಿಂದೆಬಿದ್ದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ಯೂಸುಫ್ ಒಳ್ಳೆಯ ಸ್ಥಿತಿವಂತರು ಕೂಡಾ ಹೌದು.
ಒಟ್ಟು ಸಂಪತ್ತು
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿರುವ ಯೂಸುಫ್ ಪಠಾಣ್ ಅವರ ಒಟ್ಟು ಆಸ್ತಿ ಬರೋಬ್ಬರಿ 248 ಕೋಟಿ ರುಪಾಯಿಗಳಷ್ಟು ಎಂದು ಆಜ್ ತಕ್ ಸುದ್ದಿವಾಹಿನಿ ವರದಿ ಮಾಡಿದೆ.
ಐಶಾರಾಮಿ ಮನೆ ಮಾಲೀಕ
ಯೂಸುಫ್ ಪಠಾಣ್ ಬರೋಡದಲ್ಲಿ ಸುಮಾರು 6 ಕೋಟಿ ರುಪಾಯಿ ಮೌಲ್ಯದ ಐಶಾರಾಮಿ ಮನೆಯ ಮಾಲೀಕರಾಗಿದ್ದಾರೆ. ಈ ಮನೆಯನ್ನು ಪಠಾಣ್ ಸಹೋದರರು ಸುಮಾರು 3 ಕೋಟಿ ರುಪಾಯಿ ನೀಡಿ ಖರೀದಿಸಿದ್ದರು.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ:
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಹಲವು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡಿದ್ದಾರೆ.
ಲಕ್ಸುರಿ ಕಾರಿಯ ಒಡೆಯ:
ಯೂಸುಫ್ ಪಠಾಣ್ ಅವರ ಬಳಿ ಹಲವು ಕಾರು ಕಲೆಕ್ಷನ್‌ಗಳಿವೆ. ಈ ಪೈಕಿ ಐಶಾರಾಮಿ ಕಾರುಗಳಾದ ಫೋರ್ಡ್ ಎಂಡೇವಿಯರ್, BMW X5 ನಂತಹ ಕಾರುಗಳು ಯೂಸುಫ್ ಬಳಿ ಇವೆ.
ಯೂಸುಫ್ ಪಠಾಣ್ ವಾರ್ಷಿಕ ಆದಾಯ:
ಇನ್ನು ನವಭಾರತಿ ಟೈಮ್ಸ್ ವರದಿಯ ಪ್ರಕಾರ ಯೂಸುಫ್ ಪಠಾಣ್ ಅವರ ವಾರ್ಷಿಕ ಆದಾಯ ಬರೋಬ್ಬರಿ 20 ಕೋಟಿ ರುಪಾಯಿಗಳು ಎಂದು ವರದಿಯಾಗಿದೆ. ಇದನ್ನು ಕೇಳಿ ನಿಮಗೂ ಅಚ್ಚರಿಯಾಗಿರಬಹುದು ಅಲ್ಲವೇ?