ವಾಂಖೆಡೆಯಲ್ಲಿ ಸಚಿನ್ ಔಟ್ ಮಾಡಿದ ಅರ್ಜುನ್ ತೆಂಡೂಲ್ಕರ್, ಅಭಿಮಾನಿಗಳಿಂದ ಭರ್ಜರಿ ಚಪ್ಪಾಳೆ

Published : Jun 13, 2026, 11:17 PM IST

ವಾಂಖೆಡೆ ಮೈದಾನದಲ್ಲಿ ಅರ್ಜುನ್ ತೆಂಡೂಲ್ಕರ್ ಮಾರಕ ವೇಗಕ್ಕೆ ಸಚಿನ್ ವಿಕೆಟ್ ಪತನಗೊಂಡಿದೆ. ಅಭಿಮಾನಿಗಳು ಭರ್ಜರಿ ಚಿಯರ್ ಅಪ್ ಮಾಡಿದ್ದಾರೆ. ಯುವ ಕ್ರಿಕೆಟಿಗನ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

PREV
16
ವಾಂಖೆಡೆಯಲ್ಲಿ ಸಚಿನ್ ವಿಕೆಟ್ ಕಬಳಿಸಿದ ಅರ್ಜುನ್ ತೆಂಡೂಲ್ಕರ್

ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ವೇಗಿ ಅರ್ಜುನ್ ತೆಂಡೂಲ್ಕರ್ ಎಸೆದ ಎಸೆತದಲ್ಲಿ ಸಚಿನ್ ಎಲ್‌ಬಿ ಬಲೆಗೆ ಬಿದ್ದರು. ಅರ್ಜುನ್ ತೆಂಡೂಲ್ಕರ್ ಬಿಗ್ ಅಪೀಲ್ ಮಾಡಿದ್ದಾರೆ. ಕ್ಲೀನ್ ಔಟ್ ಆಗಿದ್ದ ಕಾರಣ ಅಂಪೈರ್ ಯಾವುದೇ ಸಂಕೋಚವಿಲ್ಲದೆ ಔಟ್ ನೀಡಿದ್ದಾರೆ. ಹೌದು ಅರ್ಜುನ್ ತೆಂಡೂಲ್ಕರ್ ಸಚಿನ್ ವಿಕೆಟ್ ಕಬಳಿಸಿದ್ದಾರೆ.

26
ಏನಿದು ಮ್ಯಾಜಿಕ್?

ಅರ್ಜುನ್ ತೆಂಡೂಲ್ಕರ್ ಬೌಲಿಂಗ್‌ನಲ್ಲಿ ಸಚಿನ್ ವಿಕೆಟ್ ಕಬಳಿಸಿದ್ದು ನಿಜ. ಆದರೆ ಅದು ಸಚಿನ್ ತೆಂಡೂಲ್ಕರ್ ವಿಕೆಟ್ ಅಲ್ಲ. ಸಚಿನ್ ಯಾದವ್ ವಿಕೆಟ್. ಮುಂಬೈ ಟಿ20 ಲೀಗ್ ಟೂರ್ನಿಯಲ್ಲಿ ಅರ್ಜುನ್ ಸಚಿನ್ ಯಾದವ್ ವಿಕೆಟ್ ಕಬಳಿಸಿ ಸಂಭ್ರಮಿಸಿದ್ದಾರೆ. ಅರ್ಜುನ್ ಉತ್ತಮ ಬೌಲಿಂಗ್ ಪ್ರದರ್ಶನಕ್ಕೆ ಅಭಿಮಾನಿಗಳು ಭಾರಿ ಮೆಚ್ಚುಗೆ ಸೂಚಿಸಿದ್ದಾರೆ.

36
ವಿಕೆಟ್ ಸಂಭ್ರಮ ಕೊಟ್ಟ ಅರ್ಜುನ್ ತೆಂಡೂಲ್ಕರ್

ಮರಾಠ ರಾಯಲ್ಸ್ ತಂಡದ ಸಚಿನ್ ಯಾದವ್ 11 ರನ್ ಸಿಡಿಸಿ ಆಡುತ್ತಿದ್ದರು. ಇತ್ತ ಎಆರ್‌ಸಿಎಸ್ ತಂಡದ ವೇಗಿ ಅರ್ಜುನ್ ತೆಂಡೂಲ್ಕರ್ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿ ಸಚಿನ್ ಯಾದವ್ ವಿಕೆಟ್ ಉರುಳಿಸಿದ್ದಾರೆ. ವಿಶೇಷ ಅಂದರೆ ಎಆರ್‌ಸಿಎಸ್ ತಂಡಕ್ಕೆ ಮೊದಲ ವಿಕೆಟ್ ಸಂಭ್ರಮ ನೀಡಿದ್ದು ಅರ್ಜುನ್ ತೆಂಡೂಲ್ಕರ್.

46
2 ವಿಕೆಟ್ ಕಬಳಿಸಿದ ಅರ್ಜುನ್ ತೆಂಡೂಲ್ಕರ್

ಎಆರ್‌ಸಿಎಸ್ ಅಂಧೇರಿ ತಂಡ ವಿಕೆಟ್ ಕಬಳಿಸಲು ಪರದಾಡುತ್ತಿರುವಾಗ ಅರ್ಜುನ್ ತೆಂಡೂಲ್ಕರ್ ಬ್ರೇಕ್ ನೀಡಿದರು. ಸಚಿನ್ ಯಾದವ್ ವಿಕೆಟ್ ಕಬಳಿಸಿ ಮಿಂಚಿದರು. ಇದರ ಬೆನ್ನಲ್ಲೇ ಅಯಾಜ್ ಖಾನ್ ವಿಕೆಟ್ ಕಬಳಿಸಿದರು. ಅಂಧೇರಿ ತಂಡದ ಪರ ಅರ್ಜುನ್ ಗರಿಷ್ಠ ವಿಕೆಟ್ (2 ವಿಕೆಟ್) ಕಬಳಿಸಿದ ಸಾಧನೆ ಮಾಡಿದರು. ಅರ್ಜುನ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

56
ಅರ್ಜುನ್ ಹೋರಾಟ ವ್ಯರ್ಥ

ಅರ್ಜುನ್ ತೆಂಡೂಲ್ಕರ್ 2 ವಿಕೆಟ್ ಕಬಳಿಸಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೂ ಹೋರಾಟ ವ್ಯರ್ಥವಾಗಿತ್ತು. ಕಾರಣ ಮರಾಠ ರಾಯಲ್ಸ್ ಈ ಪಂದ್ಯ ಗೆದ್ದುಕೊಂಡಿತು. 155 ರನ್ ಟಾರ್ಗೆಟ್ ಪಡೆದ ಅಂಧೇರಿ ತಂಡ 146 ರನ್ ಸಿಡಿಸಿ ಆಲೌಟ್ ಆಯಿತು. ಈ ಮೂಲಕ ಮರಾಠ ರಾಯಲ್ಸ್ 8 ರನ್ ರೋಚಕ ಗೆಲುವು ಕಂಡಿತು.

66
ಅರ್ಜುನ್ ಬೌಲಿಂಗ್ ಪ್ರದರ್ಶನಕ್ಕೆ ಮೆಚ್ಚುಗೆ

ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಮಿಂಚಲಿಲ್ಲ. ಕೇವಲ 2 ರನ್ ಸಿಡಿಸಿ ಔಟಾದರು. ಆದರೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ಕೊನೆಯಲ್ಲಿ ಅವಕಾಶ ಪಡೆದು ಮಿಂಚಿದ್ದರು. ಐಪಿಎಲ್ ಟೂರ್ನಿಯಲ್ಲಿ ವಿಕೆಟ್ ಕಬಳಿಸಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories