ಸೆಹ್ವಾಗ್ ಮಗನಿಗೆ ಅತಿದೊಡ್ಡ ಜವಾಬ್ದಾರಿ, ಜಸ್ಟ್ 18 ವರ್ಷಕ್ಕೆ ಕನಸು ನನಸು ಮಾಡಿಕೊಂಡ ತಂದೆಗೆ ತಕ್ಕ ಮಗ

Published : Oct 04, 2026, 07:06 PM IST

ಟೀಂ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್‌ಗೆ ಅತೀ ದೊಡ್ಡ ಜವಾಬ್ದಾರಿ ಒಲಿದು ಬಂದಿದೆ. ಆ ಮೂಲಕ ತಮ್ಮ 18ನೇ ವಯಸ್ಸಿನಲ್ಲಿಯೇ ಅಂದುಕೊಡಿದ್ದನ್ನು ಸಾಧಿಸಿದ್ದು, ಅವರ ಕಾರ್ಯವೈಖರಿ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.

PREV
14
ಸೆಹ್ವಾಗ್ ಪುತ್ರನಿಗೆ ಹೊಸ ಜವಾಬ್ದಾರಿ

ಆರ್ಯವೀರ್ ಸೆಹ್ವಾಗ್, ಟೀಂ ಇಂಡಿಯಾದ ಮಾಜಿ ಸ್ಟಾರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ. ತಮ್ಮ 18ನೇ ವಯಸ್ಸಿನಲ್ಲಿಯೇ ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ಒಳ್ಳೆಯ ಅವಕಾಶ ಒಲಿದು ಬಂದಿದೆ. ಅಂದರೆ ಕ್ಯಾಪ್ಟನ್ ಆಗಿ ಭರ್ತಿ ಪಡೆದಿದ್ದಾರೆ. ಅಂದ್ಹಾಗೆ ಆರ್ಯವೀರ್ ಇದೇ ತಿಂಗಳು 19 ರಂದು 19ನೇ ವರ್ಷಕ್ಕೆ ಕಾಲಿಡಲಿದ್ದಾರೆ.

24
ಆರ್ಯವೀರ್ ವೃತ್ತಿಜೀವನ ಹೇಗಿದೆ?

ಕಳೆದ ತಿಂಗಳು ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ನಡೆದ ಮೂರು ಯೂತ್ ಏಕದಿನ ಪಂದ್ಯಗಳನ್ನ ಆಡಿದ್ದರು. ಮೊದಲ ಪಂದ್ಯದಲ್ಲಿ 28, ಎರಡನೇ ಪಂದ್ಯದಲ್ಲಿ 47 ಮತ್ತು ಮೂರನೇ ಪಂದ್ಯದಲ್ಲಿ 34 ರನ್ ಗಳಿಸಿದ್ದರು. 2024 ರಲ್ಲಿ ಅವರು ಕೂಚ್ ಬೆಹಾರ್ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ 297 ರನ್ ಗಳಿಸಿದರು. ಪ್ರಸ್ತುತ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಸೆಂಟ್ರಲ್ ದೆಹಲಿ ಕಿಂಗ್ಸ್ ಮತ್ತು ವೆಸ್ಟ್ ದೆಹಲಿ ಲಯನ್ಸ್ ಪರ ಆಡಿದ್ದಾರೆ.

34
ಈಗ ಸಿಕ್ಕಿರುವ ಜವಾಬ್ದಾರಿ ಏನು?

ದೆಹಲಿ ಅಂಡರ್-19 ತಂಡದ ನಾಯಕನಾಗಿ ಆಯ್ಕೆಯಾದ ಆರ್ಯವೀರ್‍‌ಗೆ ವಿನೂ ಮಂಕಡ್ ಟ್ರೋಫಿಯ ಮಹತ್ವದ ಜವಾಬ್ದಾರಿ ನೀಡಲಾಗಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ​​ತಂಡವನ್ನು ಪ್ರಕಟಿಸಿದೆ. 16 ಸದಸ್ಯರ ತಂಡಕ್ಕೆ ಆರ್ಯವೀರ್ ಸೆಹ್ವಾಗ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ನಾಯಕರಾಗಿ ಆಡುತ್ತಿದ್ದು, ಅಕ್ಟೋಬರ್ 8 ರಿಂದ ವಿನೂ ಮಂಕಡ್ ಟ್ರೋಫಿ ಆರಂಭವಾಗಲಿದೆ.

44
ದೆಹಲಿ ಅಂಡರ್ -19 ತಂಡ

ಆರ್ಯವೀರ್ ಸೆಹ್ವಾಗ್ (ನಾಯಕ), ತನ್ಮಯ್ ಚೌಧರಿ, ಅರ್ನವ್ ಬುಗ್ಗಾ (ಉಪನಾಯಕ), ಕಿರಿತ್ ಕೌಶಿಕ್, ವರುಣ್ ವಂಜನಿ ಧನ್ಯಾ ನಕ್ರಾ, ಉದಯ್ ಚಾವ್ಲಾ, ರುದ್ರ ದೇವ್ ಯಾದವ್, ಪ್ರದ್ಯುಮನ್ ಸನನ್, ಎಸ್‌.ಶರ್ಮಾ, ಗರ್ವ್ ಕುಮಾರ್, ತರುಣ್ ಸಿಂಗ್ (ವಿಕೆಟ್ ಕೀಪರ್), ಅಭಿರಾಜ್ ಗಗನ್ ಸಿಂಗ್ (ವಿಕೆಟ್ ಕೀಪರ್), ಆರ್ಯನ್ ಸಿಂಗ್, ಆರ್ಯನ್ ಸಿಂಗ್, ಆರ್ಯನ್ ಸಿಂಗ್, ಪಾರ್ಹ್ ಶರ್ಮಾ ಯಾದವ್ ತಂಡದಲ್ಲಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories