ವಿಂಡೀಸ್ ವಿರುದ್ಧ ಭಾರತ ಸೋಲಿಗೆ ಮೂರು ದೊಡ್ಡ ಕಾರಣಗಳು, ಕೊಹ್ಲಿ ಕೂಡ ಒಂದು ತಪ್ಪು ಮಾಡಿಬಿಟ್ರು

Published : Oct 04, 2026, 11:44 AM IST

ವೆಸ್ಟ್ ವಿಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಶರಣಾಗಿದೆ. ಟೀಂ ಇಂಡಿಯಾ ಸೋಲಿಗೆ 351 ರನ್‌ಗಳಿಸಿದರೂ ಭಾರತಕ್ಕೆ ಗೆಲುವು ಸಿಗಲಿಲ್ಲ. ಅದಕ್ಕೆ ಮೂರು ದೊಡ್ಡ ಕಾರಣಗಳಿವೆ.

PREV
14
ಸೋಲಿಗೆ ಮೂರು ಕಾರಣ

ಚಂಡಿಗಡದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿತ್ತು. ಭಾರತ 7 ವಿಕೆಟ್ ಕಳೆದುಕೊಂಡು 351 ರನ್‌ಗಳಿಸಿತ್ತು. 352 ರನ್‌ಗಳ ಗುರಿ ಬೆನ್ನು ಹತ್ತಿದ್ದ ವಿಂಡೀಸ್, ಕೆರಿಬಿಯನ್ ನಾಯಕ ಶೈ ಹೋಪ್ ಅಜೇಯ 162 ರನ್‌ಗಳ ಸಹಾಯದಿಂದ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಇನ್ನು ಟೀಂ ಇಂಡಿಯಾ ಸೋಲಿಗೆ ಕಾರಣ ಏನು ಅಂತಾ ನೋಡೋದಾದ್ರೆ..

24
ಕಳಪೆ ಬೌಲಿಂಗ್
  • ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಇಲ್ಲದೇ ಪರದಾಟ ನಡೆಸಿತು
  • ಟೀಮ್ ಇಂಡಿಯಾ ಡೆತ್ ಓವರ್‌ಗಳಲ್ಲಿ ಕಳಪೆ ಬೌಲಿಂಗ್ ಮಾಡಿತು
  • ವಿಂಡೀಸ್‌ಗೆ ಕೊನೆಯ ಐದು ಓವರ್‌ಗಳಲ್ಲಿ 56 ರನ್‌ಗಳು ಬೇಕಾಗಿದ್ದವು
  • ಭಾರತೀಯ ಬೌಲರ್‌ಗಳು 10 ಎಸೆತಗಳ ಮೊದಲೇ ಪಂದ್ಯ ಮುಗಿಸಿದರು
  • ರಿಬಿಯನ್ ಬ್ಯಾಟ್ಸ್‌ಮನ್‌ಗಳು 20 ಎಸೆತಗಳಲ್ಲಿ 56 ರನ್‌ ಗಳಿಸಿದರು
  • ಮನಸ್ಸು ಮಾಡಿದ್ರೆ ಸುಲಭವಾಗಿ ತಂಡವನ್ನು ಕಟ್ಟಿ ಹಾಕಬಹುದಿತ್ತು
  • ಡೆತ್‌ ಓವರ್‍‌ಗಳಲ್ಲಿ ಬೌಲಿಂಗ್ ಅನುಭವದ ಕೊರತೆ ಎದ್ದು ಕಂಡಿತು
34
ಕ್ಯಾಚ್‌ಗಳನ್ನು ಕೈಬಿಟ್ಟರು
  • ಎರಡೂ ತಂಡಗಳು ಒಟ್ಟು ಒಂಬತ್ತು ಕ್ಯಾಚ್‌ಗಳನ್ನು ಕೈಬಿಟ್ಟವು
  • ಭಾರತೀಯ ಫೀಲ್ಡರ್‌ಗಳು ಇದರಲ್ಲಿ ಮೂರನ್ನು ಕೈಬಿಟ್ಟರು
  • ವಿರಾಟ್ ಕೊಹ್ಲಿ ಆಮಿರ್ ಜಂಗೂ ಅವರ ಕ್ಯಾಚ್ ಕೈಬಿಟ್ಟರು
  • ನಂತರ ಆಮಿರ್ ಜಂಗೂ 67 ರನ್ ಗಳಿಸಿದರು
  • ಗುರ್ನೂರ್ ಬ್ರಾರ್ ಜಾನ್ ಕ್ಯಾಂಪ್‌ಬೆಲ್‌ಗೆ ಕ್ಯಾಚ್ ಹಿಡಿಯಲು ವಿಫಲರಾದರು
  • ಭಾರತದ ಸೋಲಿಗೆ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣವಾಯಿತು
44
ಬೌಲರ್‌ಗಳ ಕಳಪೆ ಬಳಕೆ
  • ಶುಭಮನ್ ಗಿಲ್ ಅವರ ಕಳಪೆ ನಾಯಕತ್ವವು ಸ್ಪಷ್ಟವಾಗಿತ್ತು
  • ನಿತೀಶ್ ಕುಮಾರ್ ರೆಡ್ಡಿ ಐದನೇ ಬೌಲರ್ ಆಗಿ ಕಣಕ್ಕಿಳಿದಿದ್ದರು
  • ನಿತೀಶ್ ಕುಮಾರ್ ರೆಡ್ಡಿ ತುಂಬಾ ದುಬಾರಿ ಬೌಲರ್ ಎನಸಿಕೊಂಡರು
  • ಆರನೇ ಬೌಲಿಂಗ್ ಆಯ್ಕೆಯಾದ ನಮನ್ ಧೀರ್ ಸರಿಯಾಗಿ ಬಳಸಿಕೊಳ್ಳಲಿಲ್ಲ
  • 5ನೇ, 6ನೇ ಬೌಲಿಂಗ್ ಆಯ್ಕೆಯಾ ನಿತೀಶ್, ನಮನ್ ಒಟ್ಟಿಗೆ ಬೌಲಿಂಗ್ ಮಾಡುತ್ತಿದ್ದರು
  • ಬೌಲಿಂಗ್ ದಾಳಿ ಪರಿಣಾಮಕಾರಿ ಆಗಿರಬೇಕಾದರೆ ಕ್ಯಾಪ್ಟನ್ಸಿ ಮುಖ್ಯ
  • ಗಿಲ್ ರಕ್ಷಣಾತ್ಮಕ ನಾಯಕತ್ವವು ಟೀಮ್ ಇಂಡಿಯಾಕ್ಕೆ ದುಬಾರಿಯಾಗಿ ಪರಿಣಮಿಸಿತು

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories