Published : Jun 18, 2024, 06:21 PM ISTUpdated : Jul 09, 2024, 03:21 PM IST
ಬೆಂಗಳೂರು: 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿದ್ದು, 17ನೇ ಆವೃತ್ತಿಯ ಐಪಿಎಲ್‌ನಲ್ಲೂ ಆರ್‌ಸಿಬಿ ಬರಿಗೈನಲ್ಲೇ ವಾಪಾಸ್ಸಾಗಿದೆ. ಇದೀಗ ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಕಷ್ಟು ಅಳೆದುತೂಗಿ ಈ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದಯನೀಯ ಸೋಲುಗಳೊಂದಿಗೆ ಆರಂಭ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದ್ವಿತಿಯಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್‌ಗೆ ಎಂಟ್ರಿಕೊಡುವಲ್ಲಿ ಯಶಸ್ವಿಯಾಗಿತ್ತು.
215
ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ಮತ್ತೊಮ್ಮೆ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಬರಿಗೈನಲ್ಲೇ ವಾಪಾಸ್ಸಾಗಿದೆ.
315
ಆರ್‌ಸಿಬಿ ತಂಡದಲ್ಲಿ ಹಲವು ದೌರ್ಬಲ್ಯಗಳಿದ್ದರೂ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ದ್ವಿತಿಯಾರ್ಧದಲ್ಲಿ ತೋರಿದ ಪ್ರದರ್ಶನ ಬೆಂಗಳೂರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
415
ಇದೀಗ 2025ರ ಐಪಿಎಲ್ ಟೂರ್ನಿಗೂ ಮುನ್ನ ಕೆಲ ಐಪಿಎಲ್ ಫ್ರಾಂಚೈಸಿಗಳು 8 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿವೆ ಎಂದು ವರದಿಯಾಗಿದೆ.
515
ಆದರೆ ಐಪಿಎಲ್ ಆರ್ಗನೈಸಿಂಗ್ ಕಮಿಟಿಯು 3+1 ಸೂತ್ರದ ಪ್ರಕಾರ ರೀಟೈನ್‌ಗೆ ಅವಕಾಶ ನೀಡಿದೆ ಎನ್ನಲಾಗುತ್ತಿದೆ. ಅಂದರೆ ಮೂವರು ನೇರ ರೀಟೈನ್ ಹಾಗೂ ಒಂದು ರೈಟ್ ಟು ಮ್ಯಾಚ್ ಕಾರ್ಡ್ ಬಳಕೆಗೆ ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗುತ್ತಿದೆ.
615
ಹೀಗಾಗಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವ ಮೂರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ ಹಾಗೂ ಯಾರನ್ನು ಆರ್‌ಟಿಎಂ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.
715
ಆರ್‌ಸಿಬಿ ತಂಡದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಹಲವು ಟಿ20 ಸ್ಪೆಷಲಿಸ್ಟ್ ಆಟಗಾರರ ದಂಡೇ ಇದೆ. ಹೀಗಿದ್ದೂ ಆರ್‌ಸಿಬಿ ಈ ನಾಲ್ವರಿಗೆ ಮಣೆಹಾಕುವ ಸಾಧ್ಯತೆ ಹೆಚ್ಚು. ಯಾರವರು ಎನ್ನುವುದನ್ನು ನೋಡೋಣ ಬನ್ನಿ.
815
1. ವಿರಾಟ್ ಕೊಹ್ಲಿ:
ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿಯನ್ನು ಬೆಂಗಳೂರು ಫ್ರಾಂಚೈಸಿಯು ಯಾವುದೇ ಆಲೋಚನೆ ಮಾಡದೇ ರೀಟೈನ್ ಮಾಡಿಕೊಳ್ಳಲಿದೆ.
915
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೊಹ್ಲಿ 14 ಪಂದ್ಯಗಳನ್ನಾಡಿ 708 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಕೊಹ್ಲಿ, ಆರ್‌ಸಿಬಿ ತಂಡದ ಆಸ್ತಿ ಎಂದರೆ ಅತಿಶಯೋಕ್ತಿಯಲ್ಲ.
1015
2. ವಿಲ್ ಜ್ಯಾಕ್ಸ್:
ಇಂಗ್ಲೆಂಡ್ ಮೂಲದ ಸ್ಪೋಟಕ ಬ್ಯಾಟರ್ ವಿಲ್ ಜ್ಯಾಕ್ಸ್, ಆರ್‌ಸಿಬಿ ತಂಡವು ಹರಾಜಿಗೂ ಮುನ್ನ ರೀಟೈನ್ ಮಾಡಿಕೊಳ್ಳಬೇಕೆಂದಿರುವ ಮತ್ತೊಬ್ಬ ಆಟಗಾರನಾಗಿದ್ದಾರೆ.
1115
25 ವರ್ಷದ ಬ್ಯಾಟಿಂಗ್ ಆಲ್ರೌಂಡರ್ ವಿಲ್ ಜ್ಯಾಕ್ಸ್ ಆರ್‌ಸಿಬಿ ಪರ ಕೇವಲ 8 ಪಂದ್ಯಗಳನ್ನಾಡಿ 175ರ ಸ್ಟ್ರೈಕ್‌ರೇಟ್‌ನಲ್ಲಿ ಒಂದು ಶತಕ ಸಹಿತ 230 ರನ್ ಸಿಡಿಸಿದ್ದು, ಬೆಂಗಳೂರು ತಂಡವು ರೀಟೈನ್ ಮಾಡಿಕೊಂಡರೆ ಒಳ್ಳೆಯ ಆಯ್ಕೆ ಎನಿಸಿಕೊಳ್ಳಲಿದ್ದಾರೆ.
1215
3. ರಜತ್ ಪಾಟೀದಾರ್:
ಆರ್‌ಸಿಬಿ ತಂಡದ ಪರ ಸ್ಥಿರ ಪ್ರದರ್ಶನದ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಆಟಗಾರನೆಂದರೆ ಅದು ರಜತ್ ಪಾಟೀದಾರ್.
1315
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಟೀದಾರ್ 14 ಪಂದ್ಯಗಳನ್ನಾಡಿ 180ರ ಸ್ಟ್ರೈಕ್‌ರೇಟ್‌ನಲ್ಲಿ 361 ರನ್ ಸಿಡಿಸಿದ್ದಾರೆ. ಆರ್‌ಸಿಬಿ ತಂಡವು ಪಾಟೀದಾರ್ ಅವರನ್ನು ಖಂಡಿತ ಕಣ್ಣು ಮುಚ್ಚಿಕೊಂಡು ರೀಟೈನ್ ಮಾಡಿಕೊಳ್ಳಬೇಕು.
1415
4. ಮೊಹಮ್ಮದ್ ಸಿರಾಜ್:
2018ರಿಂದಲೂ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆರ್‌ಸಿಬಿ RTM ಕಾರ್ಡ್ ಬಳಸಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
1515
ಸಿರಾಜ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 13 ಪಂದ್ಯಗಳನ್ನಾಡಿ 13 ವಿಕೆಟ್ ಕಬಳಿಸಿದ್ದರು. ಬೌಲಿಂಗ್‌ನಲ್ಲಿ ಕೊಂಚ ದುಬಾರಿಯಾಗಿದ್ದರೂ, ಯಾವುದೇ ಕ್ಷಣದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ದಾಳಿಯನ್ನು ಸಿರಾಜ್ ನಡೆಸಬಲ್ಲರು.