ಕಟ್ಟಡ ಬಾಡಿಗೆ ನೀಡಿದ ವಿರಾಟ್ ಕೊಹ್ಲಿ, ಪ್ರತಿ ತಿಂಗಳ ಬಾಡಿಗೆ 8.85 ಲಕ್ಷ ರೂ!

First Published | Mar 6, 2024, 7:47 PM IST

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನ. ಜಾಹೀರಾತು, ಎಂಡೋರ್ಸ್‌ಮೆಂಟ್, ಸೋಶಿಯಲ್ ಮಿಡಿಯಾಗಳಿಂದ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಇದೀಗ ಕೊಹ್ಲಿ ಕಚೇರಿಗೆಳಿಗೆ ತಮ್ಮ ಕಟ್ಟಡವನ್ನು ಬಾಡಿಗೆ ನೀಡಿದ್ದಾರೆ. ಇದರ ತಿಂಗಳ ಆದಾಯ 8.85 ಲಕ್ಷ ರೂಪಾಯಿ.
 

ವಿರಾಟ್ ಕೊಹ್ಲಿ ಕ್ರಿಕೆಟ್ ಆಟಕ್ಕೆ ದಿಗ್ಗಜ ಕ್ರಿಕೆಟಿಗರೇ ಫಿದಾ ಆಗಿದ್ದಾರೆ. ಕೊಹ್ಲಿ ಕ್ರಿಕೆಟ್ ಜಗತ್ತಿನ ದೊರೆಯಾಗಿ ವಿಶ್ವ ಕ್ರಿಕೆಟ್ ಆಳುತ್ತಿದ್ದಾರೆ. ಕೊಹ್ಲಿ ಜನಪ್ರಿಯತೆ ವಿಶ್ವದೆಲ್ಲೆಡೆ ಪಸರಿಸಿದೆ. ಹೀಗಾಗಿ ಜಾಹೀರಾತುದಾರರಿಗೆ ಕೊಹ್ಲಿ ಬಹುಬೇಡಿಕೆಯ ಕ್ರಿಕೆಟಿಗ

ಜಾಹೀರಾತು, ಎಂಡೋರ್ಸ್‌ಮೆಂಟ್, ಸ್ಪಾನ್ಸರ್ಸ್, ಸೋಶಿಯಲ್ ಮಿಡಿಯಾ, ಉದ್ಯಮ ಸೇರಿದಂತೆ ಹಲವು ಮೂಲಗಳಿಂದ ಕೊಹ್ಲಿ ಆದಾಯ ಗಳಿಸುತ್ತಿದ್ದಾರೆ. ಇದೀಗ ತಮ್ಮ ಕಟ್ಟಡ ಬಾಡಿಗೆ ನೀಡಿ ತಿಂಗಳಿಗೆ 8.85 ಲಕ್ಷ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ.

Tap to resize

ಗುರುಗ್ರಾಂನ ಕಾರ್ಪೋರೇಟ್ ಟವರ್ ಕಟ್ಟದಲ್ಲಿ ವಿರಾಟ್ ಕೊಹ್ಲಿ 18,430 ಚದರ ಅಡಿ ಕಚೇರಿ ಸ್ಥಳದ ಮಾಲೀಕರಾಗಿದ್ದಾರೆ. ಈ ಸ್ಥಳವನ್ನು ಕೊಹ್ಲಿ  ಕಚೇರಿಗೆ ಬಾಡಿಗೆ ನೀಡಿದ್ದಾರೆ. 9 ವರ್ಷಗಳ ಕಾಲಕ್ಕೆ ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
 

ಕಡ್ಡದಲ್ಲಿ ಕೊಹ್ಲಿ ಹೊಂದಿರುವ  18,430 ಚದರ ಅಡಿ ಸ್ಥಳ ಹಾಗೂ 37 ಕಾರು ಪಾರ್ಕಿಂಗ್ ಸ್ಥಳವನ್ನು ಬಾಡಿಗೆ ನೀಡಿದ್ದಾರೆ. ಈ ಬಾಡಿಗೆ ಕುರಿತು ಈಗಾಗಲೇ ಕರಾರು ಒಪ್ಪಂದ ಮಾಡಿಕೊಂಡಿದ್ದಾರೆ.
 

ಪ್ರತಿ ಚದರ ಅಡಿಗೆ 48 ರೂಪಾಯಿಯಂತೆ ಬಾಡಿಗೆ ನೀಡಲಾಗಿದೆ. ಇನ್ನು ಪ್ರತಿ ವರ್ಷ 5 ಶೇಕಡಾ ಬಾಡಿಗೆ ಹೆಚ್ಚಿಸುವುದಾಗಿ ಕರಾರಿನಲ್ಲಿ ಉಲ್ಲೇಖಿಸಿದ್ದಾರೆ.  ಇದರ ಜೊತೆಗೆ ನಿರ್ವಹಣೆ ಸೇರಿದಂತೆ ಇತರ ಕೆಲ ಷರತ್ತುಗಳನ್ನು ಉಲ್ಲೇಖಿಸಿದ್ದಾರೆ.

Mynd ಇಂಟರ್‌ಗ್ರೇಟೆಡ್ ಸೂಲ್ಯುಶನ್ ಪ್ರೈವೆಟ್ ಲಿಮಿಟೆಡ್ ಕಂಪನಿ ಬಾಡಿಗೆ ಪಡೆದುಕೊಂಡಿದೆ. ಆರಂಭದಲ್ಲಿ 57.17 ಲಕ್ಷ ರೂಪಾಯಿ ಸೆಕ್ಯೂರಿಟಿ ಮೊತ್ತವಾಗಿ ಪಾವತಿಸಿದೆ.

ಕೊಹ್ಲಿ ದೆಹಲಿ ಸೇರಿದಂತೆ ವಿವಿಧೆಡೆ ಕಡ್ಡಟ, ಫ್ಲ್ಯಾಟ್‌ಗಳಲ್ಲೂ ಹೂಡಿಕೆ ಮಾಡಿದ್ದಾರೆ. ಇನ್ನು ಇತರ ರೆಸ್ಟೋರೆಂಟ್, ಫಿಟ್ನೆಸ್ ಚೈನ್‌ಗಳಲ್ಲೂ ಕೊಹ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ.

2016ರಲ್ಲಿ ಮುಂಬೈನ ವರ್ಲಿಯಲ್ಲಿ 7,171 ಮನೆ ಖರೀದಿಸಿದ್ದಾರೆ. ಸಮುದ್ರಕ್ಕೆ ಮುಖಮಾಡಿರುವ ಅಪಾರ್ಟ್‌ಮೆಂಟ್‌ನಲ್ಲಿ 4 ಬೆಡ್ ರೂಂ ಮನೆಗೆ ಕೊಹ್ಲಿ ಬರೋಬ್ಬರಿ 34 ಕೋಟಿ ರೂಪಾಯಿ ನೀಡಿಖರೀದಿಸಿದ್ದರು.

Latest Videos

click me!