1. ಮೊಹಮ್ಮದ್ ಶಮಿ:
ಗುಜರಾತ್ ಟೈಟಾನ್ಸ್ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ ಪಾದದ ಸರ್ಜರಿಗೆ ಒಳಗಾಗಿದ್ದು, 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
2. ಸೂರ್ಯಕುಮಾರ್ ಯಾದವ್:
ದಕ್ಷಿಣ ಆಫ್ರಿಕಾ ಸರಣಿ ಬಳಿಕ ಸೂರ್ಯಕುಮಾರ್ ಯಾದವ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಹೀಗಾಗಿ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಮುಂಬೈ ಇಂಡಿಯನ್ಸ್ ಪಂದ್ಯಗಳಿಗೆ ಸೂರ್ಯ ಅಲಭ್ಯರಾಗುವ ಸಾಧ್ಯತೆಯಿದೆ.
3. ರಶೀದ್ ಖಾನ್:
ಜನವರಿಯಲ್ಲಿ ಆಫ್ಘಾನಿಸ್ತಾನ ತಂಡವು ಭಾರತ ಪ್ರವಾಸ ಕೈಗೊಂಡಿದ್ದಾಗ ಸ್ಪಿನ್ ತಾರೆ ರಶೀದ್ ಖಾನ್ ತಂಡದಿಂದ ಹೊರಗುಳಿದಿದ್ದರು. ರಶೀದ್ ಖಾನ್ 2023ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಹೀಗಾಗಿ ರಶೀದ್ ಲಭ್ಯತೆ ಬಗ್ಗೆ ಅನುಮಾನಗಳಿವೆ.
4. ರಿಷಭ್ ಪಂತ್:
ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 2024ರ ಐಪಿಎಲ್ ಟೂರ್ನಿಗೆ ಫಿಟ್ ಆಗಿದ್ದರೂ, ಆರಂಭಿಕ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿರುವ ಸಾಧ್ಯತೆ ಕಡಿಮೆಯಿದೆ.
5. ಡೆವೊನ್ ಕಾನ್‌ವೇ:
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಡೆವೊನ್ ಕಾನ್‌ವೇ ಸದ್ಯ ಗಾಯಗೊಂಡು ಸರ್ಜರಿಗೆ ಒಳಗಾಗಿದ್ದು, ಮೊದಲಾರ್ಧದ ಐಪಿಎಲ್ ಅಲಭ್ಯರಾಗಲಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
6. ಕೆ ಎಲ್ ರಾಹುಲ್:
ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್, ತವರಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ಕೊನೆಯ 4 ಟೆಸ್ಟ್ ಪಂದ್ಯಗಳಿಗೆ ಗಾಯದ ಸಮಸ್ಯೆಯಿಂದಾಗಿಯೇ ಅಲಭ್ಯರಾಗಿದ್ದಾರೆ. ಇದೀಗ ಐಪಿಎಲ್‌ನಲ್ಲೂ ರಾಹುಲ್ ಕೆಲ ಪಂದ್ಯಗಳನ್ನು ಮಿಸ್ ಮಾಡಿಕೊಂಡರೆ ಅಚ್ಚರಿಯಿಲ್ಲ.
7. ರೀಸ್ ಟಾಪ್ಲೆ:
ಇಂಗ್ಲೆಂಡ್ ವೇಗಿ ರೀಸ್ ಟಾಪ್ಲೆ ಗಾಯದ ಕಾರಣದಿಂದ ಇದೀಗ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಂಪೂರ್ಣ ಫಿಟ್ ಆಗಿ ಆರ್‌ಸಿಬಿ ಪರ ಐಪಿಎಲ್ ಆಡುತ್ತಾರಾ ಎನ್ನುವುದರ ಬಗ್ಗೆ ಅನುಮಾನ ಇದೆ.