ಭಾರತದ ಸ್ಟಾರ್ ಕ್ರಿಕೆಟಿಗ Virat Kohli ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಸುಮಾರು 300,00,00,000 ರೂಪಾಯಿ ಮೌಲ್ಯದ ಹೊಸ ಒಪ್ಪಂದವನ್ನು ತಿರಸ್ಕರಿಸಿ, ತಮ್ಮದೇ ಭಾರತೀಯ ಸ್ಪೋರ್ಟ್ಸ್ ಬ್ರ್ಯಾಂಡ್ ನಿರ್ಮಿಸುವ ಸಾಹಸಕ್ಕೆ ಅವರು ಕೈ ಹಾಕಿದ್ದಾರೆ.
2017ರಿಂದ ಜಾಗತಿಕ ಸ್ಪೋರ್ಟ್ಸ್ ಬ್ರ್ಯಾಂಡ್ Puma ಜೊತೆ ಕೈಜೋಡಿಸಿದ್ದ ಕೊಹ್ಲಿಗೆ, ಮುಂದಿನ ಎಂಟು ವರ್ಷಗಳಿಗಾಗಿ ಸುಮಾರು ₹300 ಕೋಟಿ ಮೌಲ್ಯದ ವಿಸ್ತರಣಾ ಒಪ್ಪಂದದ ಆಫರ್ ಬಂದಿತ್ತು. ಆದರೆ ಕೊಹ್ಲಿ ಈ ಸುರಕ್ಷಿತ ಆಫರ್‌ಗೆ 'ನೋ' ಹೇಳಿದ್ದಾರೆ.
25
₹40 ಕೋಟಿ ಹೂಡಿಕೆ ಮಾಡಿ ಹೊಸ ದಾರಿ
ಕೇವಲ ಜಾಹೀರಾತಿನ ಮುಖವಾಗಿರುವ ಬದಲು, ಕೊಹ್ಲಿ ತಮ್ಮದೇ ಬ್ರ್ಯಾಂಡ್ ನಿರ್ಮಿಸಲು ನಿರ್ಧರಿಸಿದ್ದಾರೆ. ಅವರು ಸುಮಾರು ₹40 ಕೋಟಿ ಹೂಡಿಕೆ ಮಾಡಿ Agilitas Sports ನಲ್ಲಿ ಪಾಲುದಾರರಾಗಿದ್ದು, ತಮ್ಮ ಜನಪ್ರಿಯ ಬ್ರ್ಯಾಂಡ್ One8 ಅನ್ನು ಹೊಸ ಹಂತಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ.
35
'ಮೇಕ್ ಇನ್ ಇಂಡಿಯಾ' ಸ್ಪೋರ್ಟ್ಸ್ ಬ್ರ್ಯಾಂಡ್ ಕನಸು
ಕೊಹ್ಲಿಯ ಗುರಿ ಕೇವಲ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದಲ್ಲ. ಭಾರತದಲ್ಲೇ ವಿನ್ಯಾಸ, ಉತ್ಪಾದನೆ ಮತ್ತು ಜಾಗತಿಕ ಮಟ್ಟದ ಸ್ಪೋರ್ಟ್ಸ್ ಉತ್ಪನ್ನಗಳನ್ನು ನಿರ್ಮಿಸುವ ಸ್ವದೇಶಿ ಬ್ರ್ಯಾಂಡ್ ಸೃಷ್ಟಿಸುವ ಕನಸನ್ನು ಅವರು ಕಾಣುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ One8ನ ಸ್ವತಂತ್ರ ಉತ್ಪನ್ನಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.
45
ಅನೂಷ್ಕಾ ಶರ್ಮಾ ಕೂಡ ಪಾಲುದಾರ
ನಟಿ Anushka Sharma ಕೂಡ Agilitas Sportsನಲ್ಲಿ ಹೂಡಿಕೆ ಮಾಡಿದ್ದು, One8 ಬ್ರ್ಯಾಂಡ್‌ನ ಯೋಗಾ ಮತ್ತು ಲೈಫ್‌ಸ್ಟೈಲ್ ವಿಭಾಗದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.
55
ಹಣಕ್ಕಿಂತ ದೊಡ್ಡ ಕನಸು
₹300 ಕೋಟಿ ಖಚಿತ ಆದಾಯವನ್ನು ಬಿಟ್ಟು, ಸ್ವಂತ ಬ್ರ್ಯಾಂಡ್ ನಿರ್ಮಿಸಲು ಕೊಹ್ಲಿ ತೆಗೆದುಕೊಂಡಿರುವ ಈ ನಿರ್ಧಾರ ಭಾರತೀಯ ಕ್ರೀಡಾ ಉದ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅನೇಕರು ಇದನ್ನು ಭಾರತದ ಮೊದಲ ಜಾಗತಿಕ ಮಟ್ಟದ ಸ್ವದೇಶಿ ಸ್ಪೋರ್ಟ್ಸ್ ಬ್ರ್ಯಾಂಡ್ ನಿರ್ಮಿಸುವ ದಿಟ್ಟ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.