ಮುಂಬೈ ಇಂಡಿಯನ್ಸ್‌ನಲ್ಲಿ ತಳಮಳ, ತಂಡದಿಂದ ಹೊರನಡೆಯುತ್ತಿದ್ದಾರೆ ಸೂರ್ಯಕುಮಾರ್ ಯಾದವ್

Published : Jun 25, 2026, 09:33 AM IST

ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ದೂರ ಸರಿಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಮುಂಬೈ ತಂಡದಿಂದ ಸೂರ್ಯಕುಮಾರ್ ಹೊರನಡೆಯಲು ನಿರ್ಧರಿಸಿದ್ದಾರೆ. ಇತ್ತ ಮುಂಬೈ ಕೂಡ ಸೂರ್ಯಕುಮಾರ್ ಯಾದವ್ ರಿಟೇನ್ ಮಾಡುವ ನಿರ್ಧಾರ ಹೊಂದಿಲ್ಲ.

PREV
16
ಮುಂಬೈ ಇಂಡಿಯನ್ಸ್ ತಂಡದಿಂದ ಸೂರ್ಯಕುಮಾರ್ ದೂರ ದೂರ

ಮುಂಬೈ ಇಂಡಿಯನ್ಸ್ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡ. ಆದರೆ ಕಳೆದೆ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲಾಗಿದೆ. 2026ರ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶ ದೂರದ ಮಾತಾಗಿತ್ತು, ಮುಂಬೈ 9ನೇ ಸ್ಥಾನ ಪಡೆದು ತೀವ್ರ ನಿರಾಸೆ ಅನುಭವಿಸಿತ್ತು. ತಂಡದೊಳಗಿನ ಜಟಾಪಟಿ, ಮನಸ್ತಾಪಗಳು ಪ್ರದರ್ಶನ ಮೇಲೆ ಪರಿಣಾಮ ಬೀರಿತ್ತು. ಇದೀಗ ಹಾರ್ದಿಕ್ ಪಾಂದ್ಯ ದೂರ ಸರಿಯುತ್ತಿದ್ದಾರೆ ಅನ್ನೋ ಚರ್ಚೆಗಳ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ತಂಡದಿಂದ ಹೊರನಡೆಯಲು ನಿರ್ಧರಿಸಿದ್ದಾರೆ.

26
ಆಫ್ ದಿ ಫೀಲ್ಡ್ ಘಟನೆಗಳಿಂದ ತಂಡ ತೊರೆಯಲು ಮುಂದಾದ್ರ ಸೂರ್ಯ?

ಕ್ರಿಕ್‌ಬ್ಲಾಗರ್ ವರದಿ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಡುವ ಕುರಿತು ಮುಂಬೈ ಇಂಡಿಯನ್ಸ್ ಇದುವರೆಗೆ ಯಾವುದೇ ನಿರ್ಧಾರ ಬಹಿರಂಗಪಡಿಸಿಲ್ಲ. ಆದರೆ ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ತಂಡ ತೊರೆಯಲು ನಿರ್ಧರಿಸಿದ್ದಾರೆ. ಕೇವಲ ತಮ್ಮ ಫಾರ್ಮ್ ಮಾತ್ರವಲ್ಲ ತಂಡದೊಳಗೆ ನಡೆದ ಜಟಾಪಟಿಗಳು ಈ ನಿರ್ಧಾರದ ಹಿಂದಿನ ಕಾರಣ ಅನ್ನೋ ಮಾಹಿತಿಯನ್ನು ವರದಿಯಲ್ಲಿ ನೀಡಲಾಗಿದೆ.

36
ಕಳಪೆ ಫಾರ್ಮ್ ಜೊತೆಗೆ ಇತರ ಸಮಸ್ಯೆ

2026ರ ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ 13 ಪಂದ್ಯಗಳಿಂದ 270 ರನ್ ಸಿಡಿಸಿದ್ದಾರೆ. 2025ರ ಆವೃತ್ತಿಯಲ್ಲಿ ಸೂರ್ಯಕುಮಾರ್ ಯಾದವ್ 16 ಪಂದ್ಯದಳಿಂದ 717 ರನ್ ಸಿಡಿಸಿದ್ದರು. 2024ರಲ್ಲೂ ಸೂರ್ಯಕುಮಾರ್ ಕಳಪೆ ಫಾರ್ಮ್‌ನಲ್ಲಿದ್ದರು.

46
ರಾಜಸ್ಥಾನ, ಚೆನ್ನೈ ತಂಡಕ್ಕೆ ಸೂರ್ಯ?

ಮುಂಬೈ ಇಂಡಿಯನ್ಸ್ ತಂಡದಿಂದ ದೂರ ಸರಿಯಲು ನಿರ್ಧರಿಸಿದ ಸೂರ್ಯಕುಮಾರ್ ಯಾದವ್ ರಾಜಸ್ಥಾನ ರಾಯಲ್ಸ್ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕುರಿತ ಟ್ರೇಡ್ ಡೀಲ್ ಮಾತುಕತೆಗಳು ನಡೆಯುತ್ತಿದೆ. ಶೀಘ್ರದಲ್ಲೇ ಸೂರ್ಯಕುಮಾರ್ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

56
ಕೆಟ್ಟ ಸಮಯದಲ್ಲಿದ್ದಾರಾ ಸೂರ್ಯಕುಮಾರ್ ಯಾದವ್?

ಸೂರ್ಯ ಕುಮಾರ್ ಯಾದವ್ 2026ರ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇತ್ತ ಮುಂಬೈ ಇಂಡಿಯನ್ಸ್ ತಂಡದೊಳಗಿನ ಜಗಳದಲ್ಲೂ ಸೂರ್ಯಕುಮಾರ್ ಹೆಸರೂ ಕೇಳಿಬಂದಿತ್ತು. ಇತ್ತ ಭಾರತ ತಂಡದ ಟಿ20 ನಾಯಕತ್ವದಿಂದಲೂ ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಲಾಗಿದೆ. ಮೇಲಿಂದ ಮೇಲೆ ಸೂರ್ಯಕುಮಾರ್ ಯಾದವ್ ಹಿನ್ನಡೆ ಅನುಭವಿಸುತ್ತಿದ್ದಾರೆ.

66
ಆಯ್ಕೆ ಸಮಿತಿ, ಕೋಚ್ ಗಂಭೀರ್ ಕೂಡ ಗರಂ

ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಮುಂದುವರಿಯಲು ಬಿಸಿಸಿಐ ಬಯಸಿತ್ತು. ಇಂಗ್ಲೆಂಡ್ ವಿರುದ್ದಧ ಸರಣಿಯಲ್ಲಿ ಸೂರ್ಯಕುಮಾರ್‌ಗೆ ನಾಯಕತ್ವ ನೀಡಿ ಪರೀಕ್ಷಿಸಲು ಬಿಸಿಸಿಐ ಮುಂದಾಗಿತ್ತು. ಆದರೆ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖಸ್ಥ ಅಜಿತ್ ಅಗರ್ಕರ್ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories