ದುಬಾರಿ ಬೆಲೆಯ ಸನ್‌ಗ್ಲಾಸ್‌ ಧರಿಸಿ ಆರ್‌ಸಿಬಿ ಪ್ರ್ಯಾಕ್ಟೀಸ್‌ಗೆ ಬಂದ ಕಿಂಗ್‌ ಕೊಹ್ಲಿ!

First Published | Mar 19, 2024, 6:02 PM IST

ಟೀಮ್‌ ಇಂಡಿಯಾ ಮಾಜಿ ನಾಯಕ ಹಾಗೂ ಆರ್‌ಸಿಬಿ ಸೂಪರ್‌ ಸ್ಟಾರ್‌ ವಿರಾಟ್‌ ಕೊಹ್ಲಿ ಬಹಳ ದಿನಗಳ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ ವೇಳೆ ತಂಡದ ಅಭ್ಯಾಸಕ್ಕಾಗಿ ಅವರುಉ ಮೈದಾನಕ್ಕೆ ಇಳಿದಿದ್ದರು.

ಆರ್‌ಸಿಬಿಯ ಸೂಪರ್‌ಸ್ಟಾರ್‌ ವಿರಾಟ್‌ ಕೊಹ್ಲಿ ಬಹಳ ದಿನಗಳ ಬಳಿಕ ಕ್ರಿಕೆಟ್‌ ಮೈದಾನಕ್ಕೆ ಇಳಿದಿದ್ದಾರೆ. 2ನೇ ಮಗು ಅಕಾಯ್‌ ಕೊಹ್ಲಿ ಜನ್ಮದ ಕಾರಣಕ್ಕಾಗಿ ಕೊಹ್ಲಿ ಕ್ರಿಕೆಟ್‌ನಿಂದ ದೂರು ಉಳಿದಿದ್ದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ಆರ್‌ಸಿಬಿಯ ಸಂಪೂರ್ಣ ತಂಡದ ಅಭ್ಯಾಸ ನಿಗದಿಯಾಗಿತ್ತು. ಇದಕ್ಕೆ ವಿರಾಟ್‌ ಕೊಹ್ಲಿ ಕೂಡ ಆಗಮಿಸಿದ್ದರು.

Tap to resize

ಈ ವೇಳೆ ವಿರಾಟ್‌ ಕೊಹ್ಲಿ ಧರಿಸಿದ್ದ ಆಕರ್ಷಕ ಸನ್‌ಗ್ಲಾಸ್‌ನ ಮೇಲೆ ಎಲ್ಲರ ಗಮನಸೆಳೆದಿದೆ. ಬಹಳ ವರ್ಷಗಳಿಂದ ವಿರಾಟ್‌ ಕೊಹ್ಲಿ ಈ ಗ್ಲಾಸ್‌ ಅನ್ನು ಧರಿಸುತ್ತಿದ್ದಾಋಏ.

ಓಕ್ಲೆ ಬ್ರ್ಯಾಂಡ್‌ನ ಸನ್‌ ಗ್ಲಾಸ್‌ ಇದಾಗಿದ್ದು ಇದೇ ಮಾದರಿಯ ಸಾಕಷ್ಟು ಸನ್‌ಗ್ಲಾಸ್‌ಗಳು ವಿರಾಟ್‌ ಕೊಹ್ಲಿ ಬಳಿ ಇದೆ. ಓಕ್ಲೆ ವೆಬ್‌ಸೈಟ್‌ನಲ್ಲಿ ಈ ಸನ್‌ಗ್ಲಾಸ್‌ನ ಬೆಲೆ 17-20 ಸಾವಿರ ರೂಪಾಯಿ ಇದೆ.

ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ನಲ್ಲಿ ತಂಡ ಹೊಸ ಜೆರ್ಸಿಯನ್ನು ಕೂಡ ಪ್ರಕಟಿಸಲಿದೆ. ಮೂಲಗಳ ಪ್ರಕಾರ ಆರ್‌ಸಿಬಿ ನೀಲಿ ಬಣ್ಣವನ್ನು ತನ್ನ ಜೆರ್ಸಿಯಲ್ಲಿ ವಾಪಾಸ್‌ ತರಲಿದೆ ಎನ್ನಲಾಗಿದೆ.

ನೀಲಿ ಹಾಗೂ ಕೆಂಪು ಬಣ್ಣದ ತಂಡದ ಪ್ರ್ಯಾಕ್ಟೀಸ್‌ ಜೆರ್ಸಿಯಲ್ಲಿ ಆಲ್ರೌಂಡರ್‌ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಂಡಿದ್ದು ಹೀಗೆ..

ಮ್ಯಾಕ್ಸ್‌ವೆಲ್‌ ಮೇಲೆ ಆರ್‌ಸಿಬಿ ತಂಡ ಈ ಬಾರಿಯೂ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಅದರಂತೆ ಮ್ಯಾಕ್ಸ್‌ವೆಲ್‌ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಅಭಿಮಾನಿಗಳಿಗೆ ಪ್ರವೇಶ ನೀಡಲಾಗಿದೆ. ಹಲವು ಕಾರ್ಯಕ್ರಮಗಳು ಈ ವೇಳೆ ನಡೆಯಲಿದೆ.

ಅಭಿಮಾನಿಗಳ ಸಲುವಾಗಿಯೇ ತಂಡ ಮಂಗಳವಾರ ಪೂರ್ಣ ಪ್ರಮಾಣದ ಅಭ್ಯಾಸವನ್ನು ಆಯೋಜನೆ ಮಾಡಿತ್ತು. ಈ ವೇಳೆ ಅಭಿಮಾನಿಗಳು ಆರ್‌ಸಿಬಿ ಕುರಿತು ಹರ್ಷೋದ್ಘಾರ ಮಾಡಿದರು.

ಇದರೊಂದಿಗೆ ಆರ್‌ಸಿಬಿ ತಂಡ ತನ್ನ ಹೆಸರಿನಲ್ಲಿರುವ ಬ್ಯಾಂಗಲೋರ್‌ಅನ್ನು ತೆಗೆದು ಬೆಂಗಳೂರು ಎಂದು ಬದಲಾಯಿಸಲಿದೆ. ಈ ಕುರಿತಾದ ಸಾಕಷ್ಟು ವಿಡಿಯೋಗಳನ್ನು ಟೀಮ್‌ ಹಂಚಿಕೊಂಡಿದೆ.

Latest Videos

click me!