ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿಯ ಹೊಸ ಜರ್ಸಿ ಫೋಟೋ ವೈರಲ್, ಕಪ್ ನಮ್ದೇ ಎಂದ ಫ್ಯಾನ್ಸ್!

Published : Mar 19, 2024, 04:08 PM ISTUpdated : Mar 19, 2024, 04:21 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಜರ್ಸಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ನೀಲಿ ಹಾಗೂ ಕೆಂಪು ಬಣ್ಣದ ಈ ಜರ್ಸಿ ಆರ್‌ಸಿಬಿ ಲಕ್ ಬದಲಿಸುವ ಸಾಧ್ಯತೆಗಳು ಗೋಚರಿಸುತ್ತಿದೆ.  

PREV
18
ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿಯ ಹೊಸ ಜರ್ಸಿ ಫೋಟೋ ವೈರಲ್, ಕಪ್ ನಮ್ದೇ ಎಂದ ಫ್ಯಾನ್ಸ್!

ಐಪಿಎಲ್ ಟೂರ್ನಿ ಜ್ವರ ಶುರುವಾಗಿದೆ. ಇದೀಗ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮಕ್ಕೂ ಮೊದಲೇ ತಂಡದ ಜರ್ಸಿ ಫೋಟೋ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಹೊಸ ಜರ್ಸಿ ಮೂಲಕ ಕಾಣಿಸಿಕೊಂಡಿದ್ದಾರೆ.

28

ಆರ್‌ಸಿಬಿಯನ್ ಅಫೀಶಿಯನ್ ಟ್ವಿಟರ್ ಖಾತೆಯಲ್ಲಿ ಆರ್‌ಸಿಬಿ ತಂಡದ ಹೊಸ ಜರ್ಸಿ ಫೋಟೋ ಪೋಸ್ಟ್ ಮಾಡಲಾಗಿದೆ. ಇದೀಗ ಅಭಿಮಾನಿಗಳು ಈ ಫೋಟೋವನ್ನು ಎಲ್ಲೆಡೆ ಹಂಚಿಕೊಂಡಿದ್ದಾರೆ.
 

38

ಕೆಂಪು ಹಾಗೂ ಕಪ್ಪು ಬಣ್ಣದ ಜರ್ಸಿಯಲ್ಲಿ ಕಂಗೊಳಿಸುತ್ತಿದ್ದ ಆರ್‌ಸಿಬಿ ಇದೀಗ ಬಣ್ಣ ಬದಲಿಸಿದೆ. ಕೆಂಪು ಹಾಗೂ ನೀಲಿ ಬಣ್ಣಕ್ಕೆ ತಿರುಗಿದೆ. ಇದು ಆರ್‌ಸಿಬಿ ತಂಡಕ್ಕೆ ಟ್ರೋಫಿ ತರಬಲ್ಲ ಬಣ್ಣ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
 

48

ಮಹಿಳಾ ಆರ್‌ಸಿಬಿ ತಂಡ ಚಾಂಪಿಯನ್ ಆಗಿದೆ. ಇದೀಗ ಪುರುಷರ ತಂಡ ಟ್ರೋಫಿ ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ. ಈ ಬಾರಿ ಆರ್‌ಸಿಬಿ ತಂಡ ಹೊಸ ಜರ್ಸಿ, ಬೆಂಗಳೂರು ಅನ್ನೋ ಹೆಸರು ಬದಲಾವಣೆಯಿಂದ ಲಕ್ ಕೂಡ ಬದಲಾಗಲಿದೆ ಅನ್ನೋದು ಅಭಿಮಾನಿಗಳ ವಿಶ್ವಾಸ.
 

58

ಆರ್‌ಸಿಬಿ ಅಧಿಕೃತವಾಗಿ ಇಂದಿನ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಜರ್ಸಿ ಅನಾವರಣ ಮಾಡಲಿದೆ. ಇದುವರೆಗೆ ಆರ್‌ಸಿಬಿ ಅಧಿಕೃತವಾಗಿ 2024ರ ಐಪಿಎಲ್ ಟೂರ್ನಿಯ ಜರ್ಸಿ ಅನಾವರಣ ಮಾಡಿಲ್ಲ. ಈ ಹಿಂದಿನ ಕೆಲ ಆವೃತ್ತಿಯಲ್ಲಿ ಆರ್‌ಸಿಬಿ ನೀಲಿ ಬಣ್ಣವಿರುವ ಜರ್ಸಿ ಬಳಸಿದೆ.
 

68

ಆದರೆ ಹೊಸ ಜರ್ಸಿಯ ಫೋಟೋ ಒಂದು ಭಾರಿ ವೈರಲ್ ಆಗುತ್ತಿದೆ. ಇತ್ತ ಅಭಿಮಾನಿಗಳು ಐಪಿಎಲ್ ಟೂರ್ನಿ ಆರಂಭಕ್ಕೆ ಕಾಯುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ, ಚೆನ್ನೈ ವಿರುದ್ಧ ಹೋರಾಟ ನಡೆಸಲಿದೆ.
 

78

ಈ ಬಾರಿಯ ಐಪಿಎಲ್ ಟೂರ್ನಿಗೆ ವಿರಾಟ್ ಕೊಹ್ಲಿ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ಕೊಹ್ಲಿ ಹೊಸ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾರೆ. ಇದು ಕೂಡ ಅಭಿಮಾನಿಗಳ ಕಾತರ ಹೆಚ್ಚಿಸಿದೆ.
 

88

ಮಹಿಳಾ ತಂಡದ ರೀತಿ, ಪುರುಷರ ತಂಡವೂ ಕಪ್ ಗೆಲ್ಲಲಿ ಅನ್ನೋ ಕೂಗು ಹೆಚ್ಚಾಗುತ್ತಿದೆ. ಹೀಗಾಗಿ 2024ರ ಐಪಿಎಲ್ ಮೇಲೆ ಆರ್‌ಸಿಬಿ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.
 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories